ಸಿದ್ದಾಪುರ, ಮೇ ೨೯: ಅರೆಕಾಡು ಗ್ರಾಮದ ಎಂ.ಎಸ್.ಡಿ. ಯುವಕ ಸಂಘದ ವತಿಯಿಂದ ಅರೆಕಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಪುರುಷರಿಗೆ ಹಾಗೂ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು. ಎಂ.ಎಸ್.ಡಿ. ಯುವಕ ಸಂಘದ ಪ್ರಮುಖರಾದ ಇಸ್ಮಾಯಿಲ್ ಮಾತನಾಡಿ, ನಮ್ಮ ಸಂಘಟನೆಯಿAದ ಇತ್ತೀಚೆಗೆ ಅರೆಕಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಶಾಲೆಗೆ ಕಬ್ಬಿಣದ ಗೇಟನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಡಗದಾಳು ಟೈಟಾನ್ ತಂಡವು ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು. ನಲ್ವತ್ತೇಕರೆಯ ಟೀಮ್ ಬೊಯಿಕ್ ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡಿತು. ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಟ್ಟೆಮಾಡು ಗ್ರಾಮದ ಬ್ಲಾö್ಯಕ್ ಟೆಂಡರ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಾಲ್ದಾರೆಯ ಟೀಮ್ ಇಲೆವೆನ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಬಿ.ವ್ಯೆ. ಅಪ್ರು ರವೀಂದ್ರ, ನೆಲ್ಲಮಕ್ಕಡ ಪ್ರಕಾಶ್ ಕುಶಾಲಪ್ಪ, ಸದಾ ಡೆನ್ನಿಸ್, ಯೂಸುಫ್ ಆಲಿ, ಆನಂದ ರಘು, ಮುಸ್ತಫಾ, ಹರ್ಷದ್, ಇಸ್ಮಾಯಿಲ್ ಇನ್ನಿತರರು ಹಾಜರಿದ್ದರು.