ಮಡಿಕೇರಿ, ಮೇ ೨೯: ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಸಂರಕ್ಷಣೆಯ ಪ್ರಚಾರದ ಮೂಲಕ ಮಾರುಕಟ್ಟೆ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಎಲ್ಲಾ ರೀತಿಯ ಪ್ರಚಾರವನ್ನೂ ನಂಬುವ ಬದಲಿಗೆ ಸೂಕ್ತ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ವೈದ್ಯೆ ಡಾ. ಕೆ.ಟಿ. ರಾಜಶ್ರೀ ಸಲಹೆ ನೀಡಿದರು.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ರಾಜಶ್ರೀ, ಹಿಂದಿನ ಕಾಲದಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆ ಮತ್ತು ಹಳೇ ಆರೋಗ್ಯ ಪದ್ಧತಿಯನ್ನೇ ನಂಬಿಕೊAಡಿರಬಾರದು. ಆರೋಗ್ಯ ಪದ್ಧತಿ ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಇಂದಿನ ನವ ತಂತ್ರಜ್ಞಾನದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯ ಚಿಕಿತ್ಸೆ ಸಂಬAಧಿತ ಪ್ರಚಾರ ನಡೆಯುತ್ತಿದೆ. ಆದರೆ ಇಂತಹ ಪ್ರಚಾರವನ್ನು ನಂಬುವ ಬದಲಿಗೆ ಸೂಕ್ತ ವೈದ್ಯರನ್ನು ಮುಖತಃ ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಹೇಳಿದರು.
ರೋಟರಿ ಜಿಲ್ಲೆ ೩೧೮೧ ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಸಂಸ್ಥೆಯಿAದ ಶ್ರವಣ ಸಮಸ್ಯೆ ಇರುವವರಿಗೆ ದಿ ಗಿಫ್ಟ್ ಆಫ್ ಸೌಂಡ್ ಎಂಬ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಶ್ರವ್ಯ ಸಲಕರಣೆಯನ್ನು ದಾನಿಗಳ ಸಹಾಯದಿಂದ ನೀಡಲಾಗುತ್ತದೆ. ಅಲ್ಲದೆ ಮಕ್ಕಳಲ್ಲಿನ ಹೃದ್ರೋಗ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಟಚ್ಚಿಂಗ್ ದಿ ಲಿಟಲ್ ಹಾರ್ಟ್ಸ್ ಎಂಬ ಯೋಜನೆ ಜಾರಿಗೊಳ್ಳಲಿದೆ. ಅಗತ್ಯವುಳ್ಳ ಮಕ್ಕಳಿಗೆ ರೋಟರಿ ವತಿಯಿಂದ ಉಚಿತವಾಗಿ ಹೃದ್ರೋಗ ಶಸ್ತçಚಿಕಿತ್ಸೆ ನೆರವೇರಿಸಲಾಗುತ್ತದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರತೀವರ್ಷ ರೋಟರಿ ಹಿಲ್ಸ್ ವತಿಯಿಂದ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದ್ದು, ಈ ಬಾರಿಯೂ ಮಡಿಕೇರಿ ರೋಟರಿ ವುಡ್ಸ್ ಮತ್ತು ಇನ್ನರ್ ವೀಲ್ ಸಂಸ್ಥೆಗಳ ಸದಸ್ಯರು ಮತ್ತು ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಪಿ.ಆರ್.ರಾಜೇಶ್, ಕಾರ್ಯದರ್ಶಿ ಡಾ. ಚೇತನ್ ಶೆಟ್ಟಿ, ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ನಮಿತಾ ರೈ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಹಾಜರಿದ್ದರು. ತಜ್ಞ ವೈದ್ಯರಾದ ಡಾ. ಸಿ.ಆರ್. ಪ್ರಶಾಂತ್, ಡಾ. ರಾಜೇಶ್ವರಿ, ಡಾ. ಚಂದ್ರಶೇಖರ್, ಡಾ. ರಾಕೇಶ್, ಡಾ. ಶುಭಾ ಕೆ.ಜಿ., ಎಸ್.ಎಂ., ಚೇತನ್, ಡಾ. ರಾಜಶ್ರೀ, ಡಾ. ನವೀನ್, ಡಾ. ಜಿಶ್ಮಾ ತಪಾಸಣೆ ನಡೆಸಿದರು.