*ಗೋಣಿಕೊಪ್ಪ, ಮೇ ೨೯: ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ ೧ ರಂದು ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಟಿ.ಎಸ್ ಗೋಪಾಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಸೇರಿದಂತೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಕುರಿತು ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಬೆಳಿಗ್ಗೆ ೮ ಗಂಟೆಗೆ ರಾಷ್ಟçಧ್ವಜ, ಕನ್ನಡಧ್ವಜ ಮತ್ತು ಪರಿಷತ್ತಿನ ಧ್ವಜವನ್ನು ಆರೋಹಣ ಮಾಡುವ ಮೂಲಕ ಸಮ್ಮೇಳನ ಪ್ರಾರಂಭವಾಗಲಿದೆ. ನಾಡಿಗೆ ಸೇವೆ ಸಲ್ಲಿಸಿ ಮರೆಯಾದ ಹಿರಿಯರ ಹೆಸರಿನ ಆರು ದ್ವಾರಗಳನ್ನು ನಿರ್ಮಿಸಲಾಗಿದ್ದು ಅದರ ಉದ್ಘಾಟನೆ ನಡೆಯಲಿದೆ.

ಮೈದಾನದ ಮಹಾದ್ವಾರವನ್ನು ಹಿರಿಯ ವಿಚಾರವಾದಿ ದಿ. ಅಜ್ಜಿಕುಟ್ಟಿರ ಕೆ. ಸುಬ್ಬಯ್ಯ, ಪುಸ್ತಕ ಮಳಿಗೆ ದಿ. ಚಂಬAಡ ತಂಗಜ್ಜಿ ಕಾರ್ಯಪ್ಪ, ಸ್ತಿçÃಶಕ್ತಿ ಮಳಿಗೆಯನ್ನು ದಿ. ಶಾಂಭವಿ ಅಪ್ಪಣ್ಣಮ್ಮಯ್ಯ, ಸಮ್ಮೇಳನ ನಡೆಯುವ ಸಭಾಂಗಣಕ್ಕೆ ದಿ. ಅಜ್ಜಿಕುಟ್ಟಿರ ಎನ್. ಸೋಮಯ್ಯ, ಪ್ರಧಾನ ವೇದಿಕೆಯನ್ನು ಕೂರ್ಗ್ ಸ್ಟಾರ್ ಚಕ್ಕೇರ ಅಪ್ಪಯ್ಯ ನೆನಪಿನಲ್ಲಿ ನಿರ್ಮಿಸಲಾಗಿದೆ.

ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯು ಹೈಸೊಡ್ಲೂರು ರಸ್ತೆಯಿಂದ ಮುಖ್ಯ ರಸ್ತೆಗಾಗಿ ಕೊಡವ ಸಮಾಜದ ಮುಖಾಂತರ ಜನತಾ ಪ್ರೌಢಶಾಲೆಯ ಮೈದಾನಕ್ಕೆ ಬರಲಿದೆ.

ಮೆರವಣಿಗೆಯಲ್ಲಿ ಮಂಗಳವಾದ್ಯ, ಕೊಡವ ವಾಲಗ, ಬ್ಯಾಂಡ್ ಸೆಟ್, ಚೆಂಡೆ ವಾದ್ಯ, ಕಲಶ ಹೊತ್ತ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ, ಮಹಿಳಾ ಸಮಾಜ, ಅಂಗನವಾಡಿ ಸಂಘಟನೆ, ಸ್ತಿçÃಶಕ್ತಿ ಒಕ್ಕೂಟಗಳ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕ ಸಂಘದ ಸದಸ್ಯರು, ಎನ್.ಸಿ.ಸಿ ತಂಡ ಮತ್ತು ಸ್ಕೌಟ್-ಗೈಡ್ಸ್ ಹಾಗೂ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ೧೦:೩೦ಕ್ಕೆ ಕೂರ್ಗ್ ಸ್ಟಾರ್ ಚಕ್ಕೇರ ಅಪ್ಪಯ್ಯ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮ್ಮೇಳನದ ಸರ್ವಾಧ್ಯಕ್ಷ ಟಿ.ಎಸ್. ಗೋಪಾಲ್ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಸ್ಮರಣ ಸಂಚಿಕೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಬಿಡುಗಡೆ ಮಾಡಲಿದ್ದಾರೆ. ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಅಂತರರಾಷ್ಟೀಯ ಕಲಾ ಕೇಂದ್ರದ ಅಧ್ಯಕ್ಷ ಜರಗನಹಳ್ಳಿ ಕಾಂತರಾಜು ನಿರ್ವಹಿಸಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷ ಟಿ.ಎಸ್. ಗೋಪಾಲ್ ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ಕನ್ನಡ ಗೀತಗಾಯನ ಕಾರ್ಯಕ್ರಮ ಹಿರಿಯ ಸಂಗೀತಗಾರ್ತಿ ವತ್ಸಲಾ ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾಲೂಕಿನ ಉದಯೋನ್ಮುಖ ಗಾಯಕರಿಂದ ಗೀತಗಾಯನ ನಡೆಯಲಿದೆ.

ವಿಚಾರಗೋಷ್ಠಿ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದಕ್ಷಿಣ ಕೊಡಗಿನ ಸ್ವಾತಂತ್ರ‍್ಯ ಸಂಗ್ರಾಮ ವಿಚಾರದ ಕುರಿತು ಉಪನ್ಯಾಸಕಿ ಡಾ. ಸುಶ್ಮಿತಾ, ರಂಗಭೂಮಿಗೆ ದಕ್ಷಿಣ ಕೊಡಗಿನ ಕೊಡುಗೆ ಕುರಿತು ರಂಗಭೂಮಿ ಕಲಾವಿದ ಟಿ.ಎನ್ ಶ್ರೀನಿವಾಸ್ ನಾಯ್ಡು, ಆದಿವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರದ ಮಾರ್ಗೋಪಾಯಗಳ ಕುರಿತು ಉಪನ್ಯಾಸಕ ಅಕ್ರಂ ವಿಚಾರ ಮಂಡನೆ ಮಾಡಲಿದ್ದಾರೆ.

ಕವಯತ್ರಿ ಕೆ.ಜಿ ರಮ್ಯಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಭಾಗ್ಯವತಿ ಅಣ್ಣಪ್ಪ, ಬಾದುಮಂಡ ಬೀನಾ ಕಾಳಯ್ಯ, ನಾಮೆರ ಝಾನ್ಸಿ ಕುಟ್ಟಪ್ಪ, ತೆಕ್ಕಡಮಂಡ ರಾಕ್ಮಿ, ಎಂ.ಜೆ ಪ್ರವೀಣ್, ಡಾ. ಸುಶ್ಮಿತಾ ಪಿ.ವಿ, ಪಂದ್ಯAಡ ರೇಣುಕಾ ಸೋಮಯ್ಯ, ಟಿ.ಕೆ ವಾಮನ, ವಿದ್ಯಾ ಜಗದೀಶ್ ಪುತ್ತಾಮನೆ, ನಳಿನಿ ಹೆಚ್.ಆರ್, ವಾತ್ಸಲ್ಯ ಕೆ.ಟಿ, ಬೆಂಜAಡ ರಷ್ಮಿ ದೇವಯ್ಯ, ಮಮತಾ ದಿನೇಶ್ ಕವನ ವಾಚನ ಮಾಡಲಿದ್ದಾರೆ.

ತಾಲೂಕಿನ ಸಮಸ್ಯೆಗಳ ಮತ್ತು ಅದರ ಪರಿಹಾರಗಳ ಕುರಿತು ಬಹಿರಂಗ ಅಧಿವೇಶನ ನಡೆಯಲಿದೆ. ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ವಹಿಸಲಿದ್ದು, ನಿರ್ಣಯ ಮಂಡನೆಯನ್ನು ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ನಡೆಸಲಿದ್ದಾರೆ.

ತಾಲೂಕಿನಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೩ ಜನರನ್ನು ಸನ್ಮಾನಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವೈದ್ಯ ಡಾ. ಕೆ.ಕೆ ಶಿವಪ್ಪ ಅವರು ವಹಿಸಿಕೊಳ್ಳಲಿದ್ದು, ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಜಿ ಮಹಾರಾಜ್ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಉಳುವಂಗಡ ಕಾವೇರಿ ಉದಯ, ಶಿಕ್ಷಣ ಕ್ಷೇತ್ರದಲ್ಲಿ ಮುಲ್ಲೇಂಗಡ ಮುತ್ತಣ್ಣ, ಸಹಕಾರ ಕ್ಷೇತ್ರದಲ್ಲಿ ಮಚ್ಚಮಾಡ ಕಂದ ಭೀಮಯ್ಯ, ಸಮಾಜ ಸೇವಾ ಕ್ಷೇತ್ರದಲ್ಲಿ ವಸುರಾಜ್, ರಂಗಭೂಮಿ ಕ್ಷೇತ್ರದಲ್ಲಿ ಕೋಳೆರ ಸನ್ನು, ಜನಪದ ಕ್ಷೇತ್ರದಲ್ಲಿ ಹುದಿಕೇರಿಯ ಚಂಗುಲAಡ ಸುರಜ್, ಕೃಷಿ ಕ್ಷೇತ್ರದಲ್ಲಿ ಹಳ್ಳಿಕಟ್ಟಿನ ರವಿಶಂಕರ್, ಮಾಧ್ಯಮ ಕ್ಷೇತ್ರದಲ್ಲಿ ಐನಂಡ ಬೋಪಣ್ಣ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮುಕ್ಕಾಟಿರ ಗ್ರೀಷ್ಮ, ನಾಟಿವೈದ್ಯ ಕ್ಷೇತದಲ್ಲಿ ಮೇಲತಂಡ ಚೋಂದಮ್ಮ, ಕ್ರೀಡಾ ಕ್ಷೇತ್ರದಲ್ಲಿ ಹುದಿಕೇರಿಯ ಮಾರಮಾಡ ಮಾಚಮ್ಮ, ಬಾಳೋಪಾಟ್ ಕ್ಷೇತ್ರದಲ್ಲಿ ಹೈಸೊಡ್ಲೂರು ಗ್ರಾಮದ ಬಲ್ಯಮೀದೇರಿದ ಚಿಟ್ಟಿಯಪ್ಪ, ಭರತನಾಟ್ಯ ಕ್ಷೇತ್ರದಲ್ಲಿ ಪ್ರೇಕ್ಷಾ ಭಟ್ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಹುದಿಕೇರಿಯ ಮಾಜಿ ಸೈನಿಕರ ಸಂಘ, ಅಂಜಿಗೇರಿ ನಾಡು ಕೂಟ, ಹುದಿಕೇರಿಯ ಲಿಟಲ್ ಫ್ಲವರ್ಸ್ ಶಾಲೆಯನ್ನು ಗೌರವಿಸಲಾಗುವುದು.

ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ವಹಿಸಲಿದ್ದು ಸಮ್ಮೇಳನ ಅಧ್ಯಕ್ಷ ಟಿ.ಎಸ್. ಗೋಪಾಲ್ ಸಮ್ಮೇಳನದ ಕುರಿತು ಮಾತನಾಡಲಿದ್ದಾರೆ. ಸಮ್ಮೇಳನದ ಸಮಾರೋಪ ಭಾಷಣವನ್ನು ವೀರಾಜಪೇಟೆ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸಾಹಿತಿಗಳಾದ ಡಾ. ಜೆ ಸೋಮಣ್ಣ ಮಾಡಲಿದ್ದಾರೆ. ಸಮ್ಮೇಳನದ ಕುರಿತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಗೌರವಾಧ್ಯಕ್ಷರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌ಎಸ್ ಬೋಸರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯನಿರ್ವಹಿಸಲಿದ್ದಾರೆ.

ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಮಹಾಪೋಷಕರಾಗಿದ್ದು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಕಾರ್ಯಾಧ್ಯಕ್ಷರಾಗಿ, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾನಂಗಡ ಅರುಣ್ ಉಪಾಧ್ಯಕ್ಷರಾಗಿ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಹಾಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.