ಮಡಿಕೇರಿ, ಮೇ ೨೯: ಹಾಕಿ ಕರ್ನಾಟಕ ವತಿಯಿಂದ ಏðಡಿಸಲಾಗಿರುವ ೧೬ ವರ್ಷದೊಳಗಿನವರ ರಾಜ್ಯಮಟ್ಟದ ಹಾಕಿ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯಾವಳಿ ತಾ. ೩೦ ರಂದು (ಇಂದು) ನಡೆಯಲಿದ್ದು, ಕೂಡಿಗೆ ಕ್ರೀಡಾ ವಸತಿ ಶಾಲೆ ಹಾಗೂ ಹಾಸನ ಕ್ರೀಡಾ ವಸತಿ ಶಾಲೆ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯು ಇಂದು ನಡೆದ ಸೆಮಿಫೈನಲ್‌ನಲ್ಲಿ ಹಾಸನ ತಂಡ ಮಡಿಕೇರಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ತಂಡವನ್ನು ಶೂಟೌಟ್‌ನಲ್ಲಿ ೬-೪ ಗೋಲುಗಳಿಂದ ಸೋಲಿಸಿ ಫೈನಲ್‌ಗೇರಿತು. ಹಾಸನ ಪರ ಸರಸ್ವತಿ, ಅನುಷ್ಕ, ಮಾಧರ‍್ಯ. ಗಗನಶ್ರೀ ಗೋಲು ದಾಖಲಿಸಿದರು. ಸಾಯಿ ತಂಡದ ಪರ ನೀಲಮ್ಮ, ಶೇಖ್ ಸುಮಿಯ, ಬೋಯ ಶೃತಿ, ಸಬಿತ ಗೋಲು ಬಾರಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಕೂಡಿಗೆ ಕ್ರೀಡಾಶಾಲೆ ತಂಡ ಹಾಕಿ ಬೆಳಗಾಂ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಫೈನಲ್‌ಗೇರಿತು. ಕೂಡಿಗೆ ತಂಡದ ಪರ ಯಶಿಕ ೩, ಪಾವನ ಒಂದು ಗೋಲು ಬಾರಿಸಿದರು. ಕೂಡಿಗೆ ತಂಡದ ತರಬೇತುದಾರರಾಗಿ ದಿನಮಣಿ ಕಾರ್ಯನಿರ್ವಹಿಸಿದರು. ತಾ. ೩೦ ರಂದು (ಇಂದು) ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ಹಾಕಿ ಬೆಳಗಾಂ ಹಾಗೂ ಮಡಿಕೇರಿ ಸಾಯಿ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಬಳಿಕ ಅಂತಿಮ ಪಂದ್ಯಾಟ ನಡೆಯಲಿದೆ ಎಂದು ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.
ನಿವೇಶನಕ್ಕಾಗಿ ಒತ್ತಾಯ : ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ
ರಾಷ್ಟಿçÃಯ ಐಸ್ ಸ್ಕೇಟಿಂಗ್‌ಗೆ ಸಾಧನಾ ಆಯ್ಕೆ
ಕೂಡಿಗೆ, ಮೇ ೨೯: ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ಸ್ಕೇಟಿಂಗ್ ಪಟು ತೊರೆನೂರು ಗ್ರಾಮದ ಸಾಧನಾ, ತಾ.೨೬ ಮತ್ತು ೨೭ ರಂದು ಡೆಹರಾಡೂನ್‌ನ ಹಿಮಾದ್ರಿ ಐಸ್ ರಿಂಕ್‌ನಲ್ಲಿ ನಡೆದ ಕರ್ನಾಟಕ ಐಸ್ ಸ್ಕೇಟಿಂಗ್ ಅಸೋಸಿಯೇಷನ್ (ಏISಂ) ಆಯೋಜಿತ ಕರ್ನಾಟಕ ರಾಜ್ಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶಾರ್ಟ್ ಟ್ರ‍್ಯಾಕ್ ಮತ್ತು ಲಾಂಗ್ ಟ್ರ‍್ಯಾಕ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಜೂನ್ ತಿಂಗಳಲ್ಲಿ ನಡೆಯಲಿರುವ ರಾಷ್ಟಿçÃಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ ಸಾಧನಾ, ಶಾರ್ಟ್ ಟ್ರ‍್ಯಾಕ್ ಮತ್ತು ಲಾಂಗ್ ಟ್ರ‍್ಯಾಕ್ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ, ೧೧ ರಿಂದ ೧೩ ವರ್ಷ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಯಸ್ಸಿನ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ೫೦೦ ಮೀ ಮತ್ತು ೧೦೦೦ ಮೀ ಲಾಂಗ್ ಟ್ರ‍್ಯಾಕ್ ಸ್ಪರ್ಧೆಗಳಲ್ಲಿ ೨ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಸಾಧನಾ ಅವರು, ಮೈಸೂರು ನಗರದ ಸಿಟಿರನ್ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ, ಏಕಲವ್ಯ ಪ್ರಶಸ್ತಿ ವಿಜೇತ ತರಬೇತುದಾರೆ ವರ್ಷಾ ಎಸ್. ಪುರಾಣಿಕ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಸಾಧನಾ, ಕುಶಾಲನಗರದ ಯೂನಿಕ್ ಅಕಾಡೆಮಿ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿದ್ದು, ಟಿ.ವಿ. ರವಿ ಮತ್ತು ಸುಪ್ರೀತಾ ಎ.ಎಸ್ ದಂಪತಿಯ ಪುತ್ರಿ