ಮಡಿಕೇರಿ, ಮೇ.೨೯: ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, ಮೈಸೂರು ಸಂಸ್ಥೆಯು ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆಯಾಗಿದ್ದು ಸಂಸ್ಥೆಯಲ್ಲಿ ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಉಚಿತವಾಗಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಭೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ.

೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ೦೫ ವರ್ಷ ೧೦ ತಿಂಗಳಿAದ ೦೯ ವರ್ಷದೊಳಗಿನ ಕಿವುಡ ಬಾಲಕ/ ಬಾಲಕಿಯರು, ವಿಕಲಚೇತನ ಕಾರಣದಿಂದ ಇದುವರೆಗೆ ಶಾಲೆಗೆ ದಾಖಲಾಗದವರನ್ನು ಹಾಗೂ ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಗಂಡು ಮಕ್ಕಳು ಬಯಸಿದ್ದಲ್ಲಿ ಅವರನ್ನು ಸಹ ದಾಖಲು ಮಾಡಿಕೊಳ್ಳಲಾಗುತ್ತದೆ. ಶೈಕ್ಷಣಿಕ ಅವಧಿಯಲ್ಲಿ ಸರ್ಕಾರದ ವತಿಯಿಂದ ಕಿವುಡ ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯ ಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯವನ್ನು ನೀಡಲಾಗುವುದು. ಈಗಾಗಲೇ ತರಗತಿಗಳು ಪ್ರಾರಂಭವಾಗಿದ್ದು, ಶಾಲೆಗೆ ದಾಖಲಾತಿ ಬಯಸುವ ವಿಶೇಷಚೇತನರು ನೇರವಾಗಿ ಶಾಲೆಗೆ ದಾಖಲಾಗಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಧೀಕ್ಷಕರು, ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, ತಿಲಕ್‌ನಗರ, ಮೈಸೂರು, ದೂ.ಸಂ.೦೮೨೧-೨೪೯೪೧೦೪, ಮೊಬೈಲ್ ೯೮೮೬೩೫೩೩೬೮ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.