ಎನ್.ಎನ್. ದಿನೇಶ್

*ಗೋಣಿಕೊಪ್ಪಲು, ಮೇ ೨೮: ಎದುರಿಗೆ ಸಿಕ್ಕಿದವರನ್ನು ನಿಂದಿಸುತಲೇ ಭದ್ರಕಾಳಿ ಅಯ್ಯಪ್ಪ ದೇವರ ಹರಕೆಯನ್ನು ಪೂರೈಸಿಕೊಳ್ಳುವ ಕಾಡು ಜನರ ಬೇಡು ಹಬ್ಬ ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಿತು.

ಗಿಲಿಗಿಲಿ ಭೋರ್ಗರೆತದ ನಾದವಾಗಿಸುತ್ತಾ, ತೆಗಳಿಕೆ, ಜರಿಯುವಿಕೆಯಿಂದ ಭದ್ರಕಾಳಿ ಅಯ್ಯಪ್ಪ ದೇವರ ವೇಷಧಾರಿ ಭಕ್ತಾದಿಗಳು ದೇವರ ಮಂತ್ರಜಪ ಕುಂಡೆ ಪದ ಬಳಕೆಯೊದಿಗೆ ಎದುರಿಗೆ ಸಿಕ್ಕ ಜನರಿಗೆ ವಾಚಮಗೋಚಾರವಾಗಿ ಬಯ್ಯುತ್ತಾ ಸಂಕೋಚಿತರನ್ನಾಗಿ ಮಾಡಿದರು.

ಲಜ್ಜೆಯಿಂದಲೇ ಜನರು ವೇಷಧಾರಿ ಭಕ್ತಾದಿಗಳಿಗೆ ಕಾಣಿಕೆ ನೀಡುವ ಮೂಲಕ ಕಾಡು ಮಕ್ಕಳ ಕುದುರೆ ಬೇಡು ಹಬ್ಬವನ್ನು ಸಂಭ್ರಮಿಸಿದರು.

ಅಶ್ಲೀಲ ಬೈಗುಳ, ಸೂರೆ ಬುರುಡೆಯ ಶಬ್ದಕ್ಕಿಂತ ಹೆಚ್ಚಾಗಿ ತುತ್ತೂರಿ, ಬ್ಯಾಂಡ್ ಸೆಟ್ಟಿನ ಶಬ್ದಗಳು ಹೆಚ್ಚಾಗಿದ್ದವು. ಪೊಲೀಸರ ಬಿಗಿ ನಿಯಂತ್ರಣದಿAದ ಮತ್ತು ಮದ್ಯಪಾನ ನಿಷೇಧದಿಂದ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ ಭಾಗಗಳಲ್ಲಿ ವೇಷಧಾರಿಗಳ ಭಾಗವಹಿಸುವಿಕೆ ವಿರಳವಾಗಿತ್ತು. ವೇಷಧಾರಿಗಳು ಪಿರಿಯಾಪಟ್ಟಣ, ಕುಶಾಲನಗರ, ಹೆಚ್.ಡಿ. ಕೋಟೆ ಭಾಗಗಳಿಂದ ನೇರವಾಗಿ ಪಿಕ್‌ಅಪ್ ಜೀಪುಗಳಲ್ಲಿ ಬಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಇದ್ದರೂ ಜೀಪ್‌ಗಳ ಮೇಲ್ಬಾಗದಲ್ಲಿ ಸಂಖ್ಯೆಗಿAತ ಅಧಿಕವಾಗಿ ವೇಷಧಾರಿಗಳು ಕುಳಿತು ಸಂಚಾರ ಉಲ್ಲಂಘನೆ ಮಾಡುತ್ತಿರುವುದು ಕಂಡುಬAದಿತು. ಹೆಲ್ಮೆಟ್ ಧರಿಸದೇ ದ್ವಿಚಕ್ರ ಸವಾರರ ಸವಾರಿಯೂ ಅಧಿಕವಾಗಿತ್ತು. ಆದರೂ ಪೊಲೀಸರು ಈ ಬಗ್ಗೆ ಗಮನ ಹರಿಸಲಿಲ್ಲ.

ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷಧಾರಿಗಳು ಸೊಪ್ಪು, ಹರಿದ ಬಟ್ಟೆ, ಸ್ತಿçà ರೂಪಧಾರಿಗಳು, ದೇವರ ಅವತಾರ, ತುಂಡುಡುಗೆ, ವಿಭಿನ್ನ ಶೈಲಿಯಲ್ಲಿ ಆದಿವಾಸಿಗಳು ಡೋಲು ಬಾರಿಸುವುದರೊಂದಿಗೆ ನೃತ್ಯ ಮಾಡಿ ಹರಕೆ ಪೂರೈಸಿದರು.

ಅಶ್ಲೀಲ ಬೈಗುಳವೇ ಪ್ರಾರ್ಥನೆಯಾಗಿರುವ ಆದಿವಾಸಿಗಳ ವಿಭಿನ್ನ ಆಚರÀಣೆಯ ಬೇಡು ಹಬ್ಬದಲ್ಲಿ ಹಿಂದಿನ ಆಚರಣೆಯ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಗಿತ್ತು. ಡೋಲು ಮತು ತುತ್ತೂರಿ ಬಳಕೆಗಳ ಶಬ್ದದ ಕರ್ಕಶ ಏರುಗತಿಯಲ್ಲಿತ್ತು. ವೇಷಧಾರಿಗಳಿಂತ ಈ ಬಾರಿ ಭಕ್ತಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ

೪ಐದನೇ ಪುಟಕ್ಕೆ

೪ಐದನೇ ಪುಟಕ್ಕೆ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ ಸಹಸ್ರಾರು ಜನರು ದೂರದ ಊರಿನಿಂದ ಬಂದು ಸೇರಿದ್ದರು.

ಇದಕ್ಕೂ ಮೊದಲು ಅಲ್ಲಿನ ಅಂಬಲದಿAದ ಭದ್ರಕಾಳಿ ದೇವರು ವ್ಯಕ್ತಿಯ ಮೈಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ವ್ಯಕ್ತಿಗಳು ದೇವರ ಮೊಗವನ್ನು ತೆಗೆದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳಿದರು. ಇಬ್ಬರು ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕ ಮುಖ್ಯಸ್ಥರು ತೆರಳಿದರು.

ದೇವರ ವಿಧಿವಿಧಾನದೊಂದಿಗೆ ನಡೆಯುವ ಈ ಹಬ್ಬದಲ್ಲಿ ಭಂಡಾರ ಪೆಟ್ಟಿಗೆ, ಬಿದಿರಿನಿಂದ ತಯಾರಿಸಿದ ಕೃತಕ ಕುದುರೆಯನ್ನು ಸಣ್ಣುವಂಡ ಅಯ್ಯಪ್ಪ, ಕಳ್ಳಿಚಂಡ ನೂತನ್ ಮನೆತನದ ಸದಸ್ಯರು ಹೊತ್ತು ದೇವಸ್ಥಾನದ ಕಣದಲ್ಲಿ ವೇಷಧಾರಿಗಳೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಮತ್ತಷ್ಟು ಭಕ್ತಿಯ ಪರಾಮರ್ಷೆಯನ್ನು ತಂದರು. ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಏಳು ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.