ಮಡಿಕೇರಿ, ಮೇ ೨೮: ಜಿಲ್ಲೆಯಲ್ಲಿ ಇಂದು ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಬಕ್ರೀದ್ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಬಕ್ರೀದ್ ಆಚರಣೆ ನಡೆಯಿತು. ನಗರದ ಜಾಮೀಯಾ ಮಸೀದಿಯಲ್ಲಿ ಹಫೀಜ್ ನಸೀಮ್ ಅಕ್ತರ್ ರಝ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಎರಡನೇ ಹಂತದ ಪ್ರಾರ್ಥನೆಯು ಹಫೀಜ್ ಸದ್ದಾಂ ಹುಸೇನ್ ಅವರ ನೇತೃತ್ವದಲ್ಲಿ ನೆರವೇರಿತು. ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಂ ಸಮುದಾಯದವರು ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರವಾದಿ ಇಬ್ರಾಹಿಂ ಹಾಗೂ ಇಸ್ಮಾಯೀಲ್ ರವರ ಸ್ಮರಣೆಯ ಭಾಗವಾಗಿ ಈದುಲ್ ಅಝ್ಹಾ ವನ್ನು ಆಚರಿಸಲಾಗುತ್ತದೆ. ವೃದ್ಧಾಪ್ಯದಲ್ಲಿ ಸಂತಾನ ಭಾಗ್ಯ ಲಭಿಸಿದ ಪುತ್ರ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಅಲ್ಲಾಹನು ಆಜ್ಞೆ ಮಾಡಿದಾಗ ತಕ್ಷಣ ಅದಕ್ಕಾಗಿ ಸಿದ್ದರಾದ ಆ ಮಹಾನು ಭಾವ ಪ್ರವಾದಿ ಇಬ್ರಾಹಿಂರ ತ್ಯಾಗಕ್ಕೆ ಮೆಚ್ಚಿ ಮಗನ ಬದಲಾಗಿ ಒಂದು ಆಡನ್ನು ಬಲಿ ನೀಡಲು ಆಜ್ಞಾಪಿಸುತ್ತಾನೆ. ಅದರ ಭಾಗವಾಗಿ ಲೋಕಾದ್ಯಂತ ವಿಶ್ವಾಸಿಗಳು ಈದುಲ್ ಅಝ್ಹಾವನ್ನು ಆಚರಿಸುತ್ತಾರೆ ಎಂದು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉಮ್ಮರ್ ಮೌಲವಿ ಹೇಳಿದರು.

ಬಲಿ ಎಂದರೆ ಒಂದು ಪ್ರಾಣಿಯನ್ನು ಕುಯ್ಯುವುದು ಮಾತ್ರವಲ್ಲ ಬದಲಾಗಿ ಮನಸ್ಸನ್ನು ಶುದ್ಧಿಗೊಳಿಸುವುದಾಗಿದೆ. ದ್ವೇಷ ಹಗೆತನ, ವಿದ್ವೇಷಗಳನ್ನು ದೂರ ವಿಟ್ಟು ಸತ್ಕರ್ಮಗಳನ್ನು ಮಾಡುವುದೇ ಬಲಿ ಕರ್ಮದ ತಿರುಳಾಗಿದೆ. ಮಡಿಕೇರಿಯ ಮಸ್ಜಿದು ರಹ್ಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲರನ್ನು ಉದ್ದೇಶಿಸಿ ಪ್ರವಚನ ನೀಡಿದರು.