ಬೆಂಗಳೂರು, ಮೇ ೨೮: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಾಜಕೀಯ ಧುರೀಣ, ಕಾಂಗ್ರೆಸ್ ಪ್ರಮುಖ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪ್ರಸಕ್ತ ಅವಧಿಯಲ್ಲಿ ೩ ವರ್ಷಗಳನ್ನು ಪೂರೈಸಿದ ಕಾಂಗ್ರೆಸ್ ಸರಕಾರದಲ್ಲಿ ಇನ್ನೆರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಡಳಿತ ಸೂತ್ರ ವಹಿಸಿಕೊಳ್ಳುವುದು ಖಚಿತಗೊಂಡಿದೆ. ಮೂಲಗಳ ಪ್ರಕಾರ ಅವರು ಸೋಮವಾರ ದಿನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಇಂದು ಮುಖ್ಯಮಂತ್ರಿಯವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಮಧ್ಯಾಹ್ನ ೨.೩೦ ರ ವೇಳೆ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಸಲ್ಲಿಸಿದರು. ಆದರೆ, ಅವರು ರಾಜ್ಯಪಾಲರೇ ಇದನ್ನು ಅಂಗೀಕರಿಸಬೇಕಾಗಿರುವುದರಿAದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಪತ್ರವನ್ನು ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದೋರ್‌ಗೆ ತೆರಳಿದ್ದುದರಿಂದ ಅವರು ರಾತ್ರಿ ಆಗಮಿಸಿದ ಬಳಿಕ ಅದನ್ನು ಅಂಗೀಕರಿಸಲಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲ್ಲಿಯೇ ಸೇವೆ

ರಾಜೀನಾಮೆ ಬಳಿಕ ವಿಧಾನಸೌಧÀದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. ಪಕ್ಷದ ಹೈಕಮಾಂಡ್ ನಿರ್ದೇಶನದ ಮೇರೆಗೆ ತಾನು ರಾಜೀನಾಮೆ ನೀಡಿದುದಾಗಿ ಘೋಷಿಸಿದರು. ರಾಜ್ಯಸಭಾ ಸದಸ್ಯತ್ವ ಕಲ್ಪಿಸುವುದಾಗಿ ಹೈಕಮಾಂಡ್ ಹೇಳಿದ್ದರೂ ತನಗೆ ರಾಷ್ಟç ರಾಜಕಾರಣದಲ್ಲಿ ಆಸಕ್ತಿಯಿಲ್ಲ. ಇನ್ನೂ ಎರಡು ವರ್ಷ ಪಕ್ಷದ ಅಧಿಕಾರಾವಧಿಯಿದ್ದು, ರಾಜ್ಯದಲ್ಲಿ ಹಾಗೂ ತನ್ನ ಕ್ಷೇತ್ರದ ಮತದಾರರ ಪರವಾಗಿ ಕಾರ್ಯ ನಿರ್ವಹಿಸುವುದಾಗಿ ಸ್ಪಷ್ಟಪಡಿಸಿದರು. ಸರ್ವಸಮಾನತೆಯನ್ನು ಬಿಂಬಿಸುವ ಬುದ್ಧ, ಬಸವ, ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ತತ್ವ್ವದಲ್ಲಿ ವಿಶ್ವಾಸ ಹೊಂದಿರುವ ತಾನು ಇನ್ನು ಮುಂದಕ್ಕೂ ಅದೇ ತತ್ವವನ್ನು ಅಳವಡಿಸಿಕೊಂಡು ಜನತೆಯಲ್ಲಿ ಸಮಾನತ್ವವನ್ನು ಜಾರಿಗೊಳಿಸಿಸಲು ಹೋರಾಟ ಮಾಡುವುದಾಗಿ ತಿಳಿಸಿದರು. ಕೋಮುವಾದಿತ್ವವನ್ನು ವಿರೋಧಿಸುವ ತಾನು ಮುಂದೆಯೂ ಅದರ ವಿರುದ್ಧ ಹೋರಾಡುವುದಾಗಿ ಪ್ರಕಟಿಸಿದರು. ೧೯೭೮ರಲ್ಲಿ ರಾಜಕೀಯ ಪ್ರವೇಶಿಸಿ ಸುಮಾರು ೫೦ ವರ್ಷಗಳ ಕಾಲ ರಾಜಕೀಯ ಜೀವನದ ಆಗುಹೋಗುಗಳ ಬಗ್ಗೆ ಸಿದ್ದರಾಮಯ್ಯ ಮೆಲುಕು ಹಾಕಿದರು.

ಜೆಡಿಎಸ್‌ನಲ್ಲಿದ್ದ ತಾನು ೨೦೦೬ರಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆೆಸ್ ಸೇರ್ಪಡೆಯಾದುದನ್ನು ಸ್ಮರಿಸಿದರು. ೨೦೧೩ ರಿಂದ ಇಲ್ಲಿವರೆಗೆ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಕಾರ್ಯಗಳು ತೃಪ್ತಿ ತಂದಿವೆÀ ಎಂದರು. ತಾನು ಗೋಷ್ಠಿ ಮುಗಿದ ಬಳಿಕ ದೆಹಲಿಗೆ ತೆರಳಿ ತನಗೆ ಇದುವರೆಗೆ ಅವಕಾಶ ಕಲ್ಪಿಸಿದ ಸೋನಿಯಾ, ರಾಹುಲ್, ಖರ್ಗೆ ಅವರುಗಳಿಗೆ ಕೃತಜ್ಞತೆ ಸಲ್ಲಿಸಲಿರುವುದಾಗಿ ನುಡಿದರು. ಗೋಷ್ಠಿಯಲ್ಲಿ ಸನಿಹದಲ್ಲಿಯೇ ಶಿವಕುಮಾರ್ ಅವರು ಉಪಸ್ಥಿತರಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂದು ಪತ್ರಕರ್ತರು ಪ್ರಶ್ನಿಸಿದಾಗ ಡಿಕೆಶಿಯತ್ತ ನೋಡಿದರೂ ಅವರ ಹೆಸರು ಹೇಳಲಿಲ್ಲ. ಆದರೆ, ಹೈಕಮಾಂಡ್ ಹಾಗೂ ಶಾಸಕಾಂಗ ಪಕ್ಷ ನಿರ್ಧರಿಸಿದವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತಾ ಸುದ್ದಿಗೋಷ್ಠಿಯಿಂದ ನಿರ್ಗಮಿಸಿದರು. ಇದಕ್ಕೂ ಮುನ್ನ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಸಿಎಂ ಕರೆದಿದ್ದ ಬೆಳಗಿನ ಉಪಾಹಾರ ಸಭೆಗೆ ಕೇವಲ ಇಬ್ಬರು ಸಚಿವರನ್ನು ಹೊರತುಪಡಿಸಿ ಉಳಿದೆಲ್ಲಾ ಸಚಿವರು ಹಾಜರಾಗಿದ್ದರು. ಈ ಸಭೆಗೆ ಮುನ್ನ ಡಿ.ಕೆ. ಶಿವಕುಮಾರ್ ೪ಐದನೇ ಪುಟಕ್ಕೆ

೪ಐದನೇ ಪುಟಕ್ಕೆ ಅವರು ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುವ ಮೂಲಕ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನೆರವೇರಲಿದೆ ಎಂಬ ಬಲವಾದ ಸುಳಿವು ನೀಡಿದ್ದಾರೆ. ಅಲ್ಲದೆ, ಇಬ್ಬರು ನಾಯಕರೂ ಪರಸ್ಪರ ಆಲಿಂಗಿಸಿಕೊAಡು ಮಿತೃತ್ವ ಮೆರೆದಿರುವುದು ಮತ್ತೊಂದು ವಿಶೇಷ.

ಈ ನಡುವೆ, ಕಾವೇರಿ ನಿವಾಸದ ಮುಂದೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸೇರಿದ್ದು ಅವರು ಯಾವುದೇ ಕಾರಣಕ್ಕಾಗಿ ರಾಜೀನಾಮೆ ಕೊಡಬಾರದು ಎಂದು ಆಗ್ರಹಿಸಿದರು. ಡಿ.ಕೆ. ಶಿವಕುಮಾರ್ ಅವರ ಅಭಿಮಾನಿಗಳು ಕೂಡಾ ಆಗಮಿಸಿ ಡಿಕೆಶಿಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದರು. ‘ಕಾವೇರಿ'ಯಲ್ಲಿ ನಡೆದ ಉಪಾಹಾರ ಕೂಟದ ಬಳಿಕ, ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಅವರು ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಈ ನಡುವೆ ರಾಜ್ಯದ ಹಲವೆಡೆ ಅಹಿಂದ ಒಕ್ಕೂಟದಿಂದ ಹೈಕಮಾಂಡ್ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಯಿತು. ರಾಯಚೂರಿನಲ್ಲಿ ಕುರುಬ ಸಮುದಾಯದ ಒಕ್ಕೂಟದಿಂದ ಪ್ರತಿಭಟನೆ ನಡೆದು ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಘೋಷಣೆÉ ಕೇಳಿಬಂದಿತು. ಅಲ್ಲದೆ, ರಾಹುಲ್ ಅವರ ಭಾವಚಿತ್ರಕ್ಕೆ ಬೆಂಕಿಯಿಡಲು ಯತ್ನಿಸಿದಾಗ ಪೊಲೀಸರು ಅದನ್ನು ವಿಫಲಗೊಳಿಸಿದರು.

ಆಶ್ಚರ್ಯವೆಂದರೆ ಯಾವ ಸಂದರ್ಭವೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡದೆ ಮೌನವಹಿಸಿದ್ದುದು. ಆದರೆ, ಮುಖ್ಯಮಂತ್ರಿ ಮತ್ತು ಅವರು ಸಹಜ ನಗುಮೊಗದಿಂದಲೇ ಸನಿಹದಲ್ಲಿ ಕುಳಿತು ಗೋಷ್ಠಿ ನಡೆಸಿದ್ದುದು ವಿಶೇಷವಾಗಿತ್ತು.