ಕರಿಕೆ, ಮೇ. ೨೮: ಜಿಲ್ಲೆಯ ಪ್ರಮುಖ ಅಂತರರಾಜ್ಯ ಸಂಪರ್ಕ ರಸ್ತೆಯಾದ ಭಾಗಮಂಡಲ, ಕರಿಕೆ, ಪಾಣತ್ತೂರ್ ಅಂತರರಾಜ್ಯ ಸಂಪರ್ಕ್ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಕೆಲವು ಕಡೆ ವಾಹನ ಓಡಾಡುವುದು ಪ್ರಯಾಸಕರವಾಗಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಸಂಬAಧಿಸಿದ ಜನಪ್ರತಿನಿಧಿ ಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸ.

ಮಾತ್ರವಲ್ಲದೆ ಕಳೆದ ಒಂದೂವರೆ ವರ್ಷದಿಂದÀ ರಸ್ತೆ ಬದಿ ಕಾಡುಕಡಿದು ಚರಂಡಿ ನಿರ್ಮಾಣ, ಮಳೆಗಾಲದಲ್ಲಿ ಗುಡ್ಡ ಕುಸಿದು ಬಿದ್ದ ಮಣ್ಣು, ಕಲ್ಲು, ಮರಗಳನ್ನು ತೆರವು ಮಾಡದೇ ರಸ್ತೆ ಬದಿಯಲ್ಲಿ ವಾಹನಗಳು ಸಂಚರಿಸುವಾಗ ವಾಹನಗಳಿಗೆ ಹಾನಿಯಾಗುತ್ತಿದೆ.

ಇದೀಗ ಮಳೆಯಾಗುತ್ತಿದ್ದು, ನೀರು ರಸ್ತೆ ಮೇಲೆ ತುಂಬಿ ಹರಿದು ರಸ್ತೆ ಹಳ್ಳದಂತಾಗಿದ್ದು, ಕೂಡಲೇ ಸಂಬAಧಿಸಿದ ಅಧಿಕಾರಿಗಳು ಎಚ್ಚೆತ್ತು ರಸ್ತೆ ಸರಿಪಡಿಸುವಂತೆ ಗಮನಹರಿಸಬೇಕಿದೆ.

-ಸುಧೀರ್