ಮಡಿಕೇರಿ, ಮೇ. ೨೮: ನಗರದ ತ್ಯಾಗರಾಜ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್‌ಆರ್‌ಟಿ ಲಾರ್ವಾ ಸಮೀಕ್ಷಾ ತಂಡಗಳು ಬುಧವಾರ ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಜ್ವರ, ಚಿಕೂನ್ ಗುನ್ಯಾ ಜ್ವರ ಹಾಗೂ ಮಲೇರಿಯಾ ಜ್ವರದ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕರಪತ್ರಗಳನ್ನು ಹಂಚುವುದರ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ ನೀಡಿದವು.

ಜಿಲ್ಲಾ ಎಂಟಾಮಾಲಜಿಸ್ಟ್ ಮಂಜುನಾಥ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿಗಳು ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯೇಂದ್ರ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಜಿಲ್ಲಾ ಎಪಿಡಮಾಲಜಿಸ್ಟ್, ಕೀಟ ಸಹಾಯಕರುಗಳು, ಆರ್‌ಆರ್‌ಟಿ ತಂಡದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು.