ಪೊನ್ನಂಪೇಟೆ, ಮೇ ೨೮: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ (ಪ್ಯಾಕ್ಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋಳೆರ ಸಿ. ದಿನು ನೂತನ ಅಧ್ಯಕ್ಷರಾಗಿ ಹಾಗೂ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳು ಮುಂದಿನ ಎರಡೂವರೆ ವರ್ಷಗಳ ಕಾಲ ಸಂಘದ ಆಡಳಿತ ನಿರ್ವಹಿಸಲಿದ್ದಾರೆ.

ಸಂಘದ ಅಧ್ಯಕ್ಷರಾಗಿ ೯ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಚೀರಂಡ ಕಂದಾ ಸುಬ್ಬಯ್ಯ ಅವರು ಮಾರ್ಚ್ ೧೨ ರಂದು ನಿಧನರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಕೋಳೆರ ಸಿ. ದಿನು ಹಾಗೂ ಮಚ್ಚಿಯಂಡ ಸುವಿನ್ ಮಾಚಯ್ಯ ಸ್ಪರ್ಧಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಅಡ್ಡಂಡ ಜಾಲಿ ತಿಮ್ಮಯ್ಯ ಮತ್ತು ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸ್ಪರ್ಧಿಸಿದ್ದರು. ಸಂಘದ ಕಚೇರಿಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಅಧೀಕ್ಷಕಿ ಆಶಾ ಪಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಆರಂಭದಲ್ಲಿ ಒಮ್ಮತದ ಆಯ್ಕೆಗೆ ಪ್ರಯತ್ನ ನಡೆದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಗುಪ್ತ ಮತದಾನ ನಡೆದು ಮತ ಎಣಿಕೆಯ ನಂತರ ಕೋಳೆರ ಸಿ. ದಿನು ಅಧ್ಯಕ್ಷರಾಗಿ ಹಾಗೂ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಆಶಾ ಘೋಷಿಸಿದರು.

ಸಂಘದ ನಿರ್ದೇಶಕರಾಗಿ ಮಚ್ಚಿಯಂಡ ಸುವಿನ್ ಮಾಚಯ್ಯ, ಅಡ್ಡಂಡ ಜಾಲಿ ತಿಮ್ಮಯ್ಯ, ಕಾಕೇರ ತಾರಾ, ಮೂಕಳೇರ ಸರಸ್ವತಿ, ಮಂಜುವAಡ ಅರುಣ್ ಬೆಳ್ಳಿಯಪ್ಪ, ಎಚ್.ಟಿ. ವಿಠಲ, ಪಡಿಞರಂಡ ಗಿರೀಶ್, ಚೀರಂಡ ಎಂ. ಚಂಗಪ್ಪ, ಬಿ.ವಿ. ಸುಮಿತ್ರಾ, ಆಲೀರ ಅಝೀಝ್ ಹಾಗೂ ಚೀರಂಡ ಎಸ್. ಅಯ್ಯಪ್ಪ ಮುಂದುವರಿಯಲಿದ್ದಾರೆ. ಚುನಾವಣಾಧಿಕಾರಿ ಆಶಾ ಪಿ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಗೆ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ನಾಯ್ಡು ಹಾಗೂ ಸಿಬ್ಬಂದಿ ಸಹಕರಿಸಿದರು.

ಕರ್ನಾಟಕದ ಸಿಎಂ ಕುರ್ಚಿಯ ಮೇಲೆ ಬಂಡೆ ಬಿದ್ದಿದೆ - ಅಲುಗಾಡಿಸುವ ಧೈರ್ಯ ಯಾರಿಗಿದೆ?!