ಚೆಟ್ಟಳ್ಳಿ, ಮೇ ೨೮: ಕಾಫಿ ತೋಟಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೬-೨೭ನೇ ಸಾಲಿನ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕಾಫಿ ಮಂಡಳಿಯ ಕೇಂದ್ರ ಕಚೇರಿಯಿಂದ ಸಹಾಯಧನಕ್ಕೆ ಅನುಮೋದನೆ ದೊರೆತಿದ್ದು, ಅರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯೋಜನೆಯಡಿ ಕಾಫಿ ಮರುನಾಟಿ, ನೀರಾವರಿ ಸೌಲಭ್ಯಗಳಾದ ಕೆರೆ, ತೆರೆದ ಬಾವಿ, ರಿಂಗ್ ಬಾವಿ, ಸ್ಪಿçಂಕ್ಲರ್ ಹಾಗೂ ಹನಿ ನೀರಾವರಿ ವ್ಯವಸ್ಥೆ, ಕಾಫಿ ಗೋದಾಮು, ಕಾಫಿ ಕಣ, ಪಲ್ಪರ್ ಯುನಿಟ್ ನಿರ್ಮಾಣ, ಇಕೋಪಲ್ಪರ್, ಮೆಕಾನಿಕಲ್ ಡ್ರೆöÊಯರ್, ಸೋಲಾರ್ ಟನೆಲ್ ಡ್ರೆöÊಯರ್ ಹಾಗೂ ಕಾಫಿ ತೋಟದಲ್ಲಿ ಬಳಸಬಹುದಾದ ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ.

೨೫ ಹೆಕ್ಟೇರ್ (೬೨ ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಅರ್ಹ ಕಾಫಿ ಬೆಳೆಗಾರರು ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ ೩೦, ೨೦೨೬ ಕೊನೆ ದಿನವಾಗಿದೆ. ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ, ೨೦೨೬-೨೭ನೇ ಸಾಲಿನ ಪಹಣಿ , ಖಾತಾ ನಕಲು, ತೋಟದ ಅಂದಾಜು ನಕ್ಷೆ, ಸಂಬAಧಿತ ಕಾಮಗಾರಿಯ ಕೋಟೇಷನ್ ಅಥವಾ ಯೋಜನಾ ಅಂದಾಜು ಪತ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬೆಳೆಗಾರರು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ.

ಕಾಫಿ ತೋಟಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ನೀರಾವರಿ ಸೌಲಭ್ಯ ವಿಸ್ತರಣೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುವ ಈ ಯೋಜನೆಯ ಸದುಪಯೋಗವನ್ನು ಅರ್ಹ ಬೆಳೆಗಾರರು ಪಡೆದುಕೊಳ್ಳುವಂತೆ ಕಾಫಿ ಮಂಡಳಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಿರಿಯ ಸಂಪರ್ಕಾಧಿಕಾರಿ ಅನಿಲ್ ಚಿಕ್ಕಲಕಿ ೯೭೪೧೮೭೨೩೨೫ ಅಥವಾ ವಿಸ್ತರಣಾ ಅಧಿಕಾರಿ ಸಾಯಿ ಪ್ರೀತ್ ೮೧೨೬೫೨೯೭೩೬ ಅವರನ್ನು ಸಂಪರ್ಕಿಸಬಹುದಾಗಿದೆ.