ಮಾಲ್ದಾರೆ, ಮೇ ೨೭: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅನುದಾನದ ಸಹಯೋಗದಲ್ಲಿ ಓ.ಡಿ.ಪಿ ಸಂಸ್ಥೆಯ ವತಿಯಿಂದ ಮಾಲ್ದಾರೆಯಲ್ಲಿ ರೈತ ಉತ್ಪಾದಕ ಸಂಘಟನೆ (ಎಫ್.ಪಿ.ಒ) ಉದ್ಘಾಟನಾ ಸಮಾರಂಭವು ಸ್ಥಳೀಯ ಮುತ್ತಪ್ಪ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ನಬಾರ್ಡ್ ಸಂಸ್ಥೆಯ ಡಿಡಿಎಂ ರಮೇಶ್ ಬಾಬು, ಕೃಷಿ ಕ್ಷೇತ್ರದಲ್ಲಿ ರೈತ ಉತ್ಪಾದಕರ ಸಂಸ್ಥೆಗಳು ಮಾದರಿಯಾಗಿ ಬೆಳೆಯಬೇಕಿದ್ದು, ಬಾಳೆಗುಂಡಿ ಹಾಡಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಯನ್ನು ಸದುಪಯೋಗಪಡಿಸಿಕೊಂಡು ರೈತರು ಸ್ವಾವಲಂಬಿಗಳಾಗಿ ಮುಖ್ಯವಾಹಿನಿಗೆ ಬರುವುದರ ಮೂಲಕ ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಮಾರಾಟ ಮಾಡುವಂತಾಗಬೇಕು ಎಂದು ಕರೆ ನೀಡಿದರು. ನಬಾರ್ಡ್ ಹಾಗೂ ಓ.ಡಿ.ಪಿ ಸಂಸ್ಥೆ ಮೂರು ವರ್ಷಗಳ ಕಾಲ ರೈತರಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಲಿದ್ದು, ಬಳಿಕ ರೈತರು ಸ್ವತಂತ್ರವಾಗಿ ಸಂಸ್ಥೆಯನ್ನು ಮುನ್ನಡೆಸುವಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಓ.ಡಿ.ಪಿ ಸಂಸ್ಥೆಯ ನಿರ್ದೇಶಕ ಟೆನ್ನಿ ಕುರಿಯನ್ ಮಾತನಾಡಿ, ಓ.ಡಿ.ಪಿ ಸಂಸ್ಥೆಯು ಕಳೆದ ೪೨ ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಸಾಮರ್ಥ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯು ಜಲಾನಯನ ಅಭಿವೃದ್ಧಿ, ಸುಸ್ಥಿರ ಕೃಷಿ, ಅರಣ್ಯೀಕರಣ, ತೋಟಗಾರಿಕೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬAಧಿಸಿದAತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ತೋಟಗಾರಿಕಾ ತಜ್ಞ ಡಾ. ಪ್ರಭಾಕರ್, ಮಣ್ಣು ವಿಜ್ಞಾನಿ ಡಾ. ಮೋಹನ್, ದಕ್ಷಿಣ ಕೊಡಗು ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಶ್ರೀದೇವಿ ಹಾಗೂ ಯೋಜನಾ ಅಧಿಕಾರಿ ಅನ್ನಮ್ಮ ರೈತರಿಗೆ ವಿವಿಧ ಕೃಷಿ ವಿಷಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಫ್.ಪಿ.ಒ ಕಾರ್ಯಕ್ರಮ ಸಂಯೋಜಕ ಜಯರಾಮು, ಡಾಕ್ಯುಮೆಂಟೇಶನ್ ಮತ್ತು ಫಂಡ್ ರೈಸಿಂಗ್ ಅಧಿಕಾರಿ ಲೀಮಾ ಜೋಸೆಫ್, ಪ್ರಾಜೆಕ್ಟ್ ಫೀಲ್ಡ್ ಅಸೋಸಿಯೇಟ್ ಸಿದ್ದರಾಜು, ವಲಯ ಸಂಯೋಜಕ ಜಾಯ್ಸ್, ಯತೀಶ್, ಕೊಡಗು ವಲಯದ ಕಮ್ಯುನಿಟಿ ಎಜುಕೇಟರ್ ಧನುಕುಮಾರ್, ಕಾಫಿ ಬೋರ್ಡ್ನ ರಮಣ, ಸ್ಥಳೀಯ ರೈತರು ಹಾಗೂ ಓ.ಡಿ.ಪಿ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.