ಮಡಿಕೇರಿ, ಮೇ. ೨೭: ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್‌ಎಸ್‌ಎಲ್‌ಸಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆದೇಶವಿದೆ. ಎಸ್‌ಎಸ್‌ಎಲ್‌ಸಿ ಶೇ.೬೦-೭೪.೫೦, ೭,೫೦೦ ರೂ. ಬಹುಮಾನ, ಶೇ.೭೫ ಕ್ಕಿಂತ ಹೆಚ್ಚು ರೂ. ೧೫ ಸಾವಿರ ಬಹುಮಾನ, ದ್ವಿತೀಯ ಪಿಯುಸಿ ರೂ.೨೦ ಸಾವಿರ, ಡಿಗ್ರಿ ರೂ.೨೫ ಸಾವಿರ, ಯಾವುದೇ ಗ್ರಾಜ್ಯುವೇಟ್ ಕೋರ್ಸ್ ಎಂ.ಎ., ಎಂ.ಎಸ್ಸಿ, ರೂ.೩೦ ಸಾವಿರ, ಕೃಷಿ, ಎಂಜಿನಿಯರಿAಗ್, ವೆಟರ್ನರಿ, ಮೆಡಿಸಿನ್ ರೂ.೩೫ ಸಾವಿರ ಪ್ರೋತ್ಸಾಹ ನೀಡಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ತರಗತಿಯವರಿಗೆ ಅಭ್ಯರ್ಥಿಯ ಪೋಟೋ, ಎಸ್‌ಎಸ್ ಎಲ್‌ಸಿ ಅಂಕಪಟ್ಟಿ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಸಲ್ಲಿಸಬೇಕು.
ದ್ವಿತೀಯ ಪಿಯುಸಿಯ ಅಭ್ಯರ್ಥಿಯ ಫೋಟೊ, ದ್ವಿತೀಯ ಪಿಯುಸಿ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಸಲ್ಲಿಸಬೇಕು.
ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಪಶುಸಂಗೋಪನೆ, ಎಂಜಿನಿಯರಿAಗ್, ಮೆಡಿಕಲ್ ಅವರಿಗೆ ಅಭ್ಯರ್ಥಿಯ ಫೋಟೋ, ಎಲ್ಲಾ ಸೆಮ್‌ಗಳ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಸಲ್ಲಿಸಬೇಕು. ವಿದ್ಯಾರ್ಥಿಗಳು ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಯಾವುದಾದರೂ ತಾಂತ್ರಿಕ ತೊಂದರೆಯಾದಲ್ಲಿ ಇಲಾಖೆಯ ಟೋಲ್‌ಫ್ರೀ ದೂ.ಸಂ.೦೮೦-೨೨೬೩೪೩೦೦, ೦೮೦-೨೨೩೫೩೭೫೭ ಅಥವಾ ಸಹಾಯಕ ನಿರ್ದೇಶಕರು(ಗ್ರೇಡ್-೨) ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಅವರ ದೂ.ಸಂ. ೯೪೮೦೮೪೩೧೫೬ ಮತ್ತು ೦೮೨೭೬-೨೮೧೧೧೫ ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.