ಮಡಿಕೇರಿ, ಮೇ ೨೪: ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸಿಗೆ ಸುಖ-ಶಾಂತಿ, ನೆಮ್ಮದಿ ದೊರೆಯುವುದರೊಂದಿಗೆ ಮನೆಯ ವಾತಾವರಣವು ಬೆಳಗುವುದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಿಸಿದರು.
ಚೇರಂಬಾಣೆಯ ಬೇಂಗ್ನಾಡ್ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ೧೦ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಎಂಬುದು ಜ್ಞಾನದ ದೀವಿಗೆಯಿದ್ದಂತೆ. ಇದರಿಂದ ಓದುಗರ ಜ್ಞಾನ ವೃದ್ಧಿಸುತ್ತದೆ. ಕೊಡವರ ವಿಚಾರವಾಗಿ ಕಾವೇರಿ ಪುರಾಣ, ಸ್ಕಂದ ಪುರಾಣಗಳಲ್ಲಿ ಉಲ್ಲೇಖವಿದ್ದು, ೨ನೇ ಶತಮಾನದ ತಮಿಳು ಸಂಗA ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಇಂತಹ ಜನಾಂಗದ ಸಾಹಿತ್ಯ, ಸಂಸ್ಕೃತಿಯ ವಿಚಾರವಾಗಿ ಪ್ರತಿಯೊಬ್ಬರೂ ಅರಿತಿರಬೇಕು. ಮಕ್ಕಳನ್ನು ಕೊಡವಾಮೆಯ ಪಥದಲ್ಲಿ ಬೆಳೆಸುವುದು ಕರ್ತವ್ಯವಾಗಿದ್ದು, ಇದೊಂದು ಜೀವನ ಕ್ರಮವಾಗಿರಬೇಕು. ಬಾಲ್ಯದಲ್ಲಿಯೇ ಬಾಳೋಪಾಟ್, ಕೊಡಗಿನ ಚರಿತ್ರೆ, ಪೂರ್ವಜರ ಸಾಧನೆಗಳು ಹಾಗೂ ಸಂಸ್ಕೃತಿಯ ಬಗ್ಗೆ ಅರಿತಿದ್ದರೆ ಭವಿಷ್ಯದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆಯ ಬದುಕು ರೂಪುಗೊಳ್ಳಲು ಕಾರಣವಾಗುವುದು. ಬೇಂಗ್ನಾಡ್ ಜನರಲ್ಲಿ ಸಾಹಿತ್ಯದ ಬಗ್ಗೆ ಇರುವ ಒಲವಿಗೆ ಇಲ್ಲಿನ ಕೊಡವ ಸಮಾಜದಲ್ಲಿ ಸ್ಥಾಪನೆಗೊಂಡಿರುವ ೧೦ನೇ ಪುಸ್ತಕ ಪತ್ತಾಯ ಸಾಕ್ಷಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾದ್ಯಾಯ ಅಯ್ಯಂಡ ರಾಮಕೃಷ್ಣ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪತ್ತಾಯ ಕೇವಲ ಪುಸ್ತಕಗಳ ಭಂಡಾರವಲ್ಲ, ಇದೊಂದು ಜ್ಞಾನ ಭಂಡಾರ. ಸರಸ್ವತಿ ನೆಲೆಸುವ ಸ್ಥಳವಾಗಿದೆ. ಕೊಡಗಿನ ಕೃಷಿಗೆ ಸಂಬAಧಿಸಿದAತೆ ಪತ್ತಾಯವನ್ನು ಭತ್ತದ ದಾಸ್ತಾನಿರಿಸಲು ಬಳಸಲಾಗುತ್ತಿತ್ತು. ಅಕಾಡೆಮಿಯ ಪತ್ತಾಯವು ಸರಸ್ವತಿ ನೆಲೆಸಿರುವ ತಾಣವಾಗಿ ಮಾಡುತ್ತಿರುವುದು ಶ್ಲಾಘನೀಯ. ಇಲ್ಲಿ ಜ್ಞಾನವು ವೃದ್ಧಿಸುತ್ತಲೇ ಇರುತ್ತದೆ. ಇಂತಹ ಪತ್ತಾಯವು ಪ್ರತಿಯೊಂದು ಸಮಾಜದಲ್ಲಿ, ಐನ್ಮನೆಗಳಲ್ಲಿ, ಪುಸ್ತಕ ಪ್ರೇಮಿಗಳ ಮನೆಗಳಲ್ಲಿ ಸ್ಥಾಪನೆಗೊಂಡಷ್ಟು ಸಮಾಜದಲ್ಲಿ ಜ್ಞಾನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕೊಡವ ಭಾಷೆ-ಸಾಹಿತ್ಯ ಹಾಗೂ ಈ ನೆಲ-ಜಲದ ರಕ್ಷಣೆ-ಪೋಷಣೆ ಹಾಗೂ ಬೆಳವಣಿಯಲ್ಲಿ ಕೊಡವ ಪತ್ರಿಕೆಗಳ ಕೊಡುಗೆ ಮಹತ್ವದ್ದಾಗಿದೆ. ಕೊಡವ ಭಾಷೆಯಲ್ಲಿ ತನ್ನದೇ ಆದ ಹಲವು ಶಬ್ದಗಳಿದ್ದು ಅಂತಹವುಗಳ ಸದ್ಬಳಕೆ ಆಗಬೇಕಾಗಿದೆ. ಅವೆಲ್ಲವೂ ಪುಸ್ತಕಗಳ ಓದಿನಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೇಂಗ್ನಾಡ್ ಕೊಡವ ಸಮಾಜ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಪುಸ್ತಕ ಪತ್ತಾಯವು ಅಗ್ರಸ್ಥಾನದ್ದಾಗಿದೆ. ಬೇಂಗ್ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ಪ್ರಯೋಜನವನ್ನು ಈ ನಾಡಿನ ಜನತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯತೆಯೊಂದಿಗೆ ನಾಳಿನ ಒಳ್ಳೆಯ ಭವಿಷ್ಯಕ್ಕೆ ನಾಂದಿಯಾಗಿದೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗೆ ಸಾಹಿತ್ಯದ ಜ್ಞಾನ ಅವಶ್ಯ ಎಂದರು.
ನಿವೃತ್ತ ಶಿಕ್ಷಕಿ ಬಡ್ಡಿರ ನಳಿನಿ ಪೂವಯ್ಯ ಮಾತನಾಡಿ, ಪುಸ್ತಕ ಪತ್ತಾಯದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರರ ‘ಚಿಕ್ಕ ವೀರರಾಜೇಂದ್ರ’, ಐ.ಮಾ. ಮುತ್ತಣ್ಣರ ಕೃತಿಗಳು ಲಭ್ಯವಿರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನಾಪಂಡ, ಚೀಯಬೆರ, ಕೊಟ್ಟ್ಕತ್ತಿರ, ಮಣವಟ್ಟಿರ, ತೇಲಪಂಡ ಕುಟುಂಬಗಳಿಗೆ ದುಡಿಗಳನ್ನು ವಿತರಿಸಲಾಯಿತು.
ಅಕಾಡೆಮಿ ಸದಸ್ಯರುಗಳಾದ ಕಂಬೆಯAಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕುಡಿಯರ ಎಂ. ಕಾವೇರಪ್ಪ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಬೇಂಗ್ನಾಡ್ ತಕ್ಕರಾದ ತೇಲಪಂಡ ನಂದ, ಸಮಾಜ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪೊಮ್ಮಕ್ಕಡ ಕೂಟದ ಸದಸ್ಯೆಯರು ಹಾಜರಿದ್ದರು.
ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಅತಿಥಿಗಳನ್ನು ಸ್ವಾಗತಿಸಿದರು. ಬೇಂಗ್ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು ಪ್ರಾರ್ಥಿಸಿದರು. ನಾಪಂಡ ಸಿ. ಗಣೇಶ್ ವಂದಿಸಿದರು.