ಮಡಿಕೇರಿ, ಮೇ ೨೪: ನಗರದ ಮಾರುಕಟ್ಟೆ ಬಳಿಯ ಖಾಲಿ ಜಾಗದಲ್ಲಿ ಬೆಳೆಯುತ್ತಿದ್ದ ಕಸದ ಗುಡ್ಡದಿಂದ ಕಸ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳೆಯುತ್ತಿದ್ದ ಕಸದ ಗುಡ್ಡದ ಕುರಿತು ತಾ.೨೩ ರಂದು ‘ಶಕ್ತಿ’ ವರದಿ ಪ್ರಕಟಿಸಿತ್ತು.

ಇದಕ್ಕೆ ನಗರಸಭೆಯಿಂದ ಸ್ಪಂದನ ದೊರಕಿದ್ದು, ಜೆ.ಸಿ.ಬಿ ಹಾಗೂ ಟ್ರಾö್ಯಕ್ಟರ್ ಬಳಸಿ ಈ ಪ್ರದೇಶದಲ್ಲಿದ್ದ ರಾಶಿ-ರಾಶಿ ಕಸ ತೆರವು ಕಾರ್ಯ ಆರಂಭಗೊAಡಿದೆ. ತಾ.೨೫ ರಂದು (ಇಂದು) ಸಂಪೂರ್ಣವಾಗಿ ಕಸ ವಿಲೇವಾರಿಯಾಗಲಿದ್ದು, ಸ್ಟೋನ್‌ಹಿಲ್‌ನಲ್ಲಿನ ಕಸ ವಿಲೇವಾರಿ ಘಟಕಕ್ಕೆ ಇಲ್ಲಿನ ಕಸ ಸಾಗಾಟವಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಕಲಾವತಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಮುಂದೆ ಈ ಜಾಗದಲ್ಲಿ ಯಾರೂ ಕಸ ಎಸೆಯದಂತೆ ಗೇಟ್ ಅಳವಡಿಸುವ ಚಿಂತನೆ ಇದೆ. ಈ ಬಗ್ಗೆ ಜೂನ್ ೨ ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.