ಸಿದ್ದಾಪುರ, ಮೇ ೨೪: ದುಬಾರೆ ಪ್ರವಾಸ ತಾಣದಲ್ಲಿ ಪ್ರವಾಸಿಗರ ಕೊರತೆಯಿಂದಾಗಿ ಬಿಕೋ ಎನ್ನುತ್ತಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಸಂಭವಿಸಿದ ಸಾಕಾನೆಗಳ ಸಂಘರ್ಷಣೆಯಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಮಾರ್ತಾಂಡ ಆನೆ ಸಾವನ್ನಪ್ಪಿರುವ ಘಟನೆಯ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆಗಳ ಶಿಬಿರದಲ್ಲಿ ಪ್ರವಾಸಿಗರಿಗೆ ಶಿಬಿರಕ್ಕೆ ತೆರಳಲು ಸರಕಾರ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಇದೀಗ ದುಬಾರೆ ಪ್ರವಾಸ ತಾಣದಲ್ಲಿ ಪ್ರವಾಸಿಗರ ಕೊರತೆ ಕಂಡುಬAದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ.

ಕಳೆದ ೫ ದಿನಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ನಡೆದ ಎರಡು ಆನೆಗಳ ಕಾದಾಟದಿಂದಾಗಿ ಪ್ರವಾಸಿ ಮಹಿಳೆ ಸಾವನ್ನಪ್ಪಿದ ಘಟನೆ ಮತ್ತು ಕಾದಾಟದಲ್ಲಿ ಗಾಯಗೊಂಡ ಆನೆಗಳ ಪೈಕಿ ಮಾರ್ತಾಂಡ ಆನೆ ಸಾವನ್ನಪ್ಪಿದ ಘಟನೆಯನ್ನು ಮುಂದಿಟ್ಟು ಇದೀಗ ರಾಜ್ಯ ಸರಕಾರವು ಅರಣ್ಯ ಇಲಾಖೆಯ ದುಬಾರೆ ಸಾಕಾನೆ ಶಿಬಿರದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ.

ಅಲ್ಲದೆ ಆನೆ ಶಿಬಿರಕ್ಕೆ ತೆರಳದಂತೆ ಹೊಸ ನಿಯಮ ಈ ಹಿನ್ನಲೆಯಲ್ಲಿ ದುಬಾರೆ ಪ್ರವಾಸ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ದೇಶ - ವಿದೇಶಗಳಿಂದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಹೆಸರು ವಾಸಿಯಾಗಿರುವ ದುಬಾರೆ ಆನೆ ಶಿಬಿರಕ್ಕೆ ದೇಶ - ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಇದೀಗ ಇತ್ತೀಚೆಗೆ ನಡೆದ ಘಟನೆಯಿಂದಾಗಿ ಸರಕಾರವು ನಿಯಮವನ್ನು ಜಾರಿಗೊಳಿಸಿದೆ. ದೇಶ ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಬಂದAತಹ ಪ್ರವಾಸಿಗರು ಕಾವೇರಿ ನದಿಯಲ್ಲಿ ಆನೆಗಳನ್ನು ಸ್ನಾನ ಮಾಡಿಸುವ ದೃಶ್ಯಗಳನ್ನು ಕಣ್ತುಂಬ ನೋಡಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದರು.

ಅಲ್ಲದೆ ಸಮೀಪಕ್ಕೆ ತೆರಳಿ ಆನೆಗಳ ನಡುವೆ ಬೆಸುಗೆ ಕಲ್ಪಿಸಿಕೊಂಡು ಆನೆಗಳ ಜೊತೆಗೆ ತಮ್ಮ ಫೋಟೋಗಳನ್ನು ತೆಗೆಸಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ದುಬಾರೆ ಕಾವೇರಿ ನದಿಯಲ್ಲಿ ಕೆಲಕಾಲ ನೀರಿನಲ್ಲಿ ಆಟವಾಡಿ ಬೋಟ್‌ಗಳಲ್ಲಿ ಸುತ್ತಾಡಿಕೊಂಡು ಬರುವುದಕ್ಕೆ ಸೀಮಿತವಾಗಿದೆ. ಆದರೆ ಆನೆ ಶಿಬಿರಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಅತ್ತ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಹುತೇಕ ಪ್ರವಾಸಿಗರು ದುಬಾರೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ದೃಶ್ಯ ಕಂಡುಬAದಿತು.

ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ಪ್ರವಾಸಿಗರು ಹಾಗೂ ವಾರಾಂತ್ಯದಲ್ಲಿ ಸುಮಾರು ಎಂಟರಿAದ ಹತ್ತು ಸಾವಿರ ಪ್ರವಾಸಿಗರು ದುಬಾರೆಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಇರುವ ವ್ಯಾಪಾರಸ್ಥರಿಗೆ ಪ್ರವಾಸಿಗರ ವ್ಯಾಪಾರ ಲಾಭ ತರುತ್ತಿತ್ತು. ಅಲ್ಲದೆ ಇದೀಗ ರಜೆ ದಿನಗಳು ಆದರೂ ಕೂಡ ಸಾಕಾನೆಗಳ ಶಿಬಿರಕ್ಕೆ ತೆರಳುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಕಾವೇರಿ ನದಿಯಲ್ಲಿ ಸ್ನಾನ ಮಾಡುವ ಮಂದಿ ಕೂಡ ಕಡಿಮೆಯಾಗಿದ್ದು, ರಿವರ್ ಬೋಟಿಂಗ್ ಹಲವು ಪ್ರವಾಸಿಗರಿಲ್ಲದೆ ಸ್ಥಳದಲ್ಲೇ ನಿಲ್ಲಿಸಿದ್ದಾರೆ. ದುಬಾರೆ ನದಿ ಸಮೀಪವಿರುವ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಪ್ರವಾಸಿಗರನ್ನು ನಂಬಿಕೊAಡು ಜೀವನ ಮಾಡುತ್ತಿರುವ ಇಲ್ಲಿನ ವರ್ತಕರು ಬಂಡವಾಳ ಹಾಕಿ ವಸ್ತುಗಳು ವ್ಯಾಪಾರವಾಗದೆ ದಿನದೂಡುತ್ತಿದ್ದಾರೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದರು.

ವನಜಾ ಎಂಬವರು ಮಾತನಾಡಿ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇತ್ತೀಚೆಗೆ ನಡೆದ ಆನೆಗಳ ಸಂಘರ್ಷದಿAದ ಮಹಿಳೆ ಹಾಗೂ ಆನೆ ಸತ್ತಬಳಿಕ ಆನೆ ಶಿಬಿರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ.ಎAದರು.

ಯಾವ ಆನೆಗಳು ಕೂಡ ದುಬಾರೆ ಕಾವೇರಿ ನದಿಯಲ್ಲಿ ಕಂಡು ಬರಲಿಲ್ಲ. ಶಿಬಿರದಲ್ಲಿ ಇರುವ ಆನೆಗಳನ್ನು ಸಮೀಪದ ಕಾಡುಗಳಿಗೆ ಮೇಯಲು ಬಿಟ್ಟು ಅವುಗಳನ್ನು ಆನೆ ಕಾವಾಡಿಗರು ಮಾವುತರು ನೋಡಿಕೊಳ್ಳುತ್ತಿದ್ದಾರೆ. ಸಂಜೆ ಅವುಗಳಿಗೆ ಶಿಬಿರದಲ್ಲಿ ಆಹಾರ ನೀಡುತ್ತಿದ್ದಾರೆ. ಅತ್ತ ಸುಳಿಯಲು ಯಾರನ್ನು ಕೂಡ ಬಿಡುತ್ತಿಲ್ಲ. ಸರಕಾರ ಮುಂದಿನ ಯಾವ ನಿರ್ಧಾರವನ್ನು ಕೈಗೊಂಡು ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವುದು ಯಾವಾಗ ಎಂದು ಕಾದುನೋಡಬೇಕು.

-ಚಿತ್ರ : ವರದಿ ವಾಸು ಎ.ಎನ್.