(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮೇ ೨೪: ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಇದೀಗ ವಯಸ್ಸಿನಲ್ಲಿ ಹಿರಿಯರಾಗುತ್ತಿದ್ದರೂ ಈ ಹಾಕಿ ಕ್ರೀಡೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಹಾಗೂ ಆಟಗಾರರ ಪರಸ್ಪರ ಬಾಂಧವ್ಯದ ಚಿಂತನೆಯೊAದಿಗೆ ಕಳೆದೆರಡು ವರ್ಷಗಳಿಂದ ಕೂರ್ಗ್ ಹಾಕ್ಸ್ ಹಾಕಿ ಕ್ಲಬ್ ಹಾಗೂ ಯುನೈಟೆಡ್ ತಲಶೇರಿ ಸ್ಪೋರ್ಟ್ಸ್ ಕ್ಲಬ್ (ಗ್ಲೋಬಲ್) ಪ್ರಾರಂಭಿಸಿರುವ ಕೂರ್ಗ್ ಹಾಕ್ಸ್ - ಯುಟಿಎಸ್‌ಸಿ ಮಾಸ್ಟರ್ಸ್ ಹಾಕಿ ಪಂದ್ಯಾವಳಿ ಈ ಬಾರಿಯೂ ಆಯೋಜನೆಗೊಳ್ಳುತ್ತಿದೆ.
ಹಾಕಿ ಕರ್ನಾಟಕದ ಸಹಯೋಗದಲ್ಲಿ ಬೆಂಗಳೂರಿನ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಜೂನ್ ೨೬ ರಿಂದ ಈ ಪಂದ್ಯಾವಳಿ ನಡೆಯಲಿದ್ದು, ತಂಡಗಳ ಸಿದ್ಧತೆ ನಡೆದಿದೆ. ೨೦೨೪ ರಲ್ಲಿ ಪೊನ್ನಂಪೇಟೆಯಲ್ಲಿ ಈ ಪಂದ್ಯಾವಳಿ ಹಿರಿಯ ಹಾಕಿಪಟು - ಹಾಕಿ ಅಭಿಮಾನಿ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರ ಪರಿಕಲ್ಪನೆಯೊಂದಿಗೆ ಪ್ರಾರಂಭಗೊAಡಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಪಂದ್ಯಾಟದಲ್ಲಿ ಕೊಡಗು ಸೇರಿದಂತೆ ವಿವಿಧೆಡೆಯ ೩೪ ತಂಡಗಳು ಭಾಗಿಯಾಗಿದ್ದವು. ಈ ಬಾರಿಯೂ ಬೆಂಗಳೂರಿನಲ್ಲಿ ಜೂನ್ ೨೬ ರಿಂದ ೨೮ ರತನಕ ಈ ಪಂದ್ಯಾವಳಿ ಜರುಗಲಿದೆ.
ಪುರುಷರ ವಿಭಾಗದಲ್ಲಿ ೪೦+, ಮಹಿಳಾ ವಿಭಾಗದಲ್ಲಿ ೩೫+ ಹಾಗೂ ಕಿರಿಯರಲ್ಲಿ ೧೬ ರ ವಯೋಮಿತಿಯೊಳಗಿನ ತಂಡಗಳ ನಡುವೆ ಬೆಸುಗೆಯ ಚಿಂತನೆಯ ಹಾಕಿ ಪಂದ್ಯ ನಡೆಯಲಿದೆ. ಪುರುಷರ ವಿಭಾಗದಲ್ಲಿ ೧೭, ಮಹಿಳಾ ವಿಭಾಗದಲ್ಲಿ ೧೦ ಹಾಗೂ ೧೬ ರ ವಯೋಮಿತಿಯೊಳಗಿನ ೧೦ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ.
ಕೊಡಗಿನ ತಂಡಗಳು
ಪುರುಷರ ವಿಭಾಗದ ೪೦+ ಪಂದ್ಯಾವಳಿಯಲ್ಲಿ ಕೂರ್ಗ್ ಹಾಕ್ಸ್, ಕೊಡವ ಹಾಕಿ ಅಕಾಡೆಮಿ, ಪಳೇ ತಾಲೂಕ್ ಕೂರ್ಗ್, ಮಹಿಳಾ ವಿಭಾಗ(೩೫+)ದಲ್ಲಿ ಹಾಕಿ ಥಂರ‍್ಸ್ ಕೂರ್ಗ್, ಕೊಡಗು ವಂಡರ್ ವಿಮೆನ್ ಹಾಗೂ ೧೬ ರ ವಯೋಮಿತಿಯೊಳಗಿನ ತಂಡದಲ್ಲಿ ಕಾಲ್ಸ್ ಗೋಣಿಕೊಪ್ಪ, ಅಪ್ಪಚ್ಚಕವಿ ಪೊನ್ನಂಪೇಟೆ, ಸ್ಪೋರ್ಟ್ಸ್ ಹಾಸ್ಟೆಲ್ ಪೊನ್ನಂಪೇಟೆ ಸೇರಿದಂತೆ ಕೊಡಗಿನ ಒಟ್ಟು ೮ ತಂಡಗಳು ಭಾಗವಹಿಸಲಿವೆ.
ಇನ್ನಿತರ ತಂಡಗಳು
ಪುರುಷರ ವಿಭಾಗದಲ್ಲಿ ಜೂಡ್ ಫೆಲಿಕ್ಸ್ ಹಾಕಿ ಅಕಾಡೆಮಿ ಬೆಂಗಳೂರು, ಹಾಕಿ ಧಾರವಾಡ, ರಾಯಲ್ಸ್ ಹೈದರಾಬಾದ್, ಕಡಕಿ ಯುನೈಡೆಟ್ ಪುಣೆ, ವಾಂಡರರ್ಸ್ ಮುಂಬೈ, ಮುಂಬೈ ಕಸ್ಟಮ್ಸ್, ಪುಣೆ ಡ್ರಿಬ್ರ‍್ಸ್, ಯುಟಿಎಸ್‌ಸಿ ಕೇರಳ, ಪ್ರೆöÊಮ್ ರೋಸ್ ಬೆಂಗಳೂರು, ರಿಸರ್ವ್ ಲೈನ್ ಎಸ್.ಸಿ. ಮಧುರೈ, ಇ.ಹೆಚ್.ಎಲ್. ಕೊಚ್ಚಿ, ವೈಲ್ಡ್ಬೋರ್ ಬೆಂಗಳೂರು, ಅನಂತಪುರ್ ಹಾಕಿ, ಮುಂಬೈ ಪೋರ್ಟ್ ಟ್ರಸ್ಟ್ ತಂಡಗಳಿವೆ.
ಮಹಿಳಾ ವಿಭಾಗ
ಮಹಿಳಾ ವಿಭಾಗದಲ್ಲಿ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು, ಕೇರಳ ಸ್ಪೆöÊಸ್ ವಾರಿಯರ್ಸ್, ಸ್ಲಾಕ್ ಹಾಕಿ ಕ್ಲಬ್ ಬೆಂಗಳೂರು, ರಿಪಬ್ಲಿಕನ್ಸ್ ಮುಂಬೈ, ವಿಮೆನ್ ವಾರಿಯರ್ಸ್, ಬೆಂಗಳೂರು ರಾಯಲ್ಸ್ ತಂಡಗಳು ಪಾಲ್ಗೊಳ್ಳಲಿವೆ.
೧೬ ರ ವಯೋಮಿತಿ
೧೬ರ ವಯೋಮಿತಿ ಬಾಲಕರ ತಂಡದಲ್ಲಿ ಜೂಡ್ ಫೆಲಿಕ್ಸ್, ಯುಟಿಎಸ್‌ಸಿ, ಪತ್ತಿರಿಯಾಟ್ ಹಾಕಿ ಅಕಾಡೆಮಿ, ರಿಪಬ್ಲಿಕನ್ ಮುಂಬೈ, ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ, ಸಾಯಿ ಬೆಂಗಳೂರು, ಡಿ.ವೈ.ಇ.ಎಸ್. ಬೆಂಗಳೂರು ತಂಡಗಳು ಪಾಲ್ಗೊಳ್ಳುತ್ತಿರುವುದಾಗಿ ಮೇಕೇರಿರ ಬೆಲ್ಲು ಕುಟ್ಟಪ್ಪ ಅವರು ತಿಳಿಸಿದ್ದಾರೆ.
ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ಬಹುಮಾನವಿದೆ. ಹಳೆಯ ಹಾಕಿ ಪಟುಗಳಲ್ಲಿ ಮತ್ತೆ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಆರೋಗ್ಯ - ದೈಹಿಕ ಕ್ಷಮತೆ ಮೂಡಿಸುವುದು, ಯುವ ಹಾಕಿ ಪ್ರತಿಭೆಗಳಲ್ಲಿ ಹುಮ್ಮಸ್ಸು ತರಿಸುವ ಚಿಂತನೆಯ ಕ್ರೀಡಾಕೂಟ ಇದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.