ಮಡಿಕೇರಿ, ಮೇ ೨೪: ಕುಶಾಲನಗರ ಪಟ್ಟಣದಲ್ಲಿ ಈಗಾಗಲೇ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು, ಮನೆಯ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಈ ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿಕೊಳ್ಳಬೇಕಿದೆ.

ಸಂಪರ್ಕವನ್ನು ಕುಶಾಲನಗರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಪಡೆಯಬೇಕಾಗಿದ್ದು, ಪುರಸಭೆಗೆ ಈ ಕೆಳಕಂಡ ಶುಲ್ಕಗಳನ್ನು ಪಾವತಿಸಿ ಸಂಪರ್ಕ ನೀಡುವ ಬಗ್ಗೆ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಪಡೆಯಬೇಕಿದೆ.

ಆದ್ದರಿಂದ ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಂಡು ಯೋಜನೆ ಯಶಸ್ವಿಗೊಳಿಸಲು ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ವಾಣಿಜ್ಯ ಮತ್ತು ವಸತಿ ಸಂಪರ್ಕ ಶುಲ್ಕ ಒಂದು ಬಾರಿ ಮತ್ತು ನಿರ್ವಹಣಾ ಶುಲ್ಕ (ವಾರ್ಷಿಕ) ದರ ನಿಗದಿಪಡಿಸಿದ ವಿವರ ಇಂತಿದೆ.

ಉದ್ದಿಮೆಗಳ ವಿವರ:

ಗ್ರೇಡ್-೧ ಕಲ್ಯಾಣ ಮಂಟಪ/ ಹೊಟೇಲ್ ಮತ್ತು ವಸತಿ ಗೃಹಗಳು ೧೦ ಕೊಠಡಿಗಳ ಮೇಲ್ಪಟ್ಟು ಸಂಪರ್ಕ ಶುಲ್ಕ (ಒಂದು ಬಾರಿ) ರೂ. ೧೦ ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ. ೧೦ ಸಾವಿರ,

ಗ್ರೇಡ್-೨ ಹೊಟೇಲ್ ಮತ್ತು ವಸತಿ ಗೃಹ ೧ ರಿಂದ ೧೦ ಕೊಠಡಿಗಳ ಒಳಗೊಂಡಿರುವುದು. ಸಂಪರ್ಕ ಶುಲ್ಕ (ಒಂದು ಬಾರಿ) ರೂ. ೫ ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ. ೫ ಸಾವಿರ,

ಗ್ರೇಡ್-೩ ಇತರೆ ಎಲ್ಲಾ ಸಣ್ಣ ಉದ್ದಿಮೆಗಳು ಸಂಪರ್ಕ ಶುಲ್ಕ (ಒಂದು ಬಾರಿ) ರೂ. ೩ ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ. ೩ ಸಾವಿರ. ೨೪೦೦ ಚದರಡಿ ಮೇಲ್ಪಟ್ಟಿರುವ ವಾಸದ ಮನೆಗಳಿಗೆ ಗೃಹ ಬಳಕೆ ಸಂಪರ್ಕ ಶುಲ್ಕ (ಒಂದು ಬಾರಿ) ರೂ. ೩ ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ. ೩ ಸಾವಿರ,

೨೪೦೦ ಚದರಡಿ ಕೆಳಗಿರುವ ವಾಸದ ಮನೆಗಳಿಗೆ ಗೃಹಬಳಕೆ ಸಂಪರ್ಕ ಶುಲ್ಕ ರೂ. ೨ ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ. ೨ ಸಾವಿರ ಆಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಸಂಪರ್ಕಗಳಿಗೆ ಸಂಪರ್ಕ ಶುಲ್ಕವನ್ನು ಕುಶಾಲನಗರ ಪುರಸಭೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ನಿಧಿಯಿಂದ ಭರಿಸಲಾಗುವುದು (ಕಟ್ಟಡವನ್ನು ಬಾಡಿಗೆಗೆ ನೀಡಿದ್ದಲ್ಲಿ ಅನ್ವಯಸುವುದಿಲ್ಲ) ನಿರ್ವಹಣಾ ಶುಲ್ಕ ೧೦೦೦ (ವಾರ್ಷಿಕ ಪಾವತಿಸಬೇಕಾಗಿರುತ್ತದೆ) ಸ್ವಂತ ವಾಸವಿರುವ ಮನೆ (೨೪೦೦ ಚದರಡಿ ಕಡಿಮೆ ಇರುವ ವಾಸದ ಮನೆಗಳಿಗೆ) ಆಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ತಿಳಿಸಿದ್ದಾರೆ.