ಕೂಡಿಗೆ, ಮೇ ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಸಾಲಿನಲ್ಲಿ ವಾಡಿಕೆಗಿಂತ ಮೊದಲೇ ಸಂಪೂರ್ಣವಾಗಿ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹಂತ ಹಂತವಾಗಿ ಹರಿಸಲಾಗಿದೆ. ಹಾರಂಗಿ ಅಣೆಕಟ್ಟೆಯ ಪ್ರಮುಖ ಗೇಟ್ಗಳು ಸುಭದ್ರವಾಗಿದ್ದು, ವರ್ಷಕ್ಕೆ ಎರಡು ಬಾರಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಅಡಿಯಲ್ಲಿ ಗೇಟ್ಗಳ ನಿರ್ವಹಣೆಯನ್ನು ನಡೆಸಲಾಗುತ್ತಿದ್ದು, ಈ ಸಾಲಿನ ದುರಸ್ತಿ ಕಾರ್ಯ ಆರಂಭಗೊAಡಿದೆ. ಹಾರಂಗಿ ಅಣೆಕಟ್ಟೆಯ ಮುಖ್ಯ ಬಾಗಿಲುಗಳ ಮೂಲಕ ನದಿಗೆ ೧ ಲಕ್ಷ ೨೦ ಸಾವಿರ ಕ್ಯೂಸೇಕ್ಸ್ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸುವ ಸಾಮಥ್ರ್ರ್ಯವನ್ನು ಅಣೆಕಟ್ಟೆಯ ಗೇಟ್ಗಳು ಹೊಂದಿವೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯ ಮುಖ್ಯ ೪ ಗೇಟ್ಗಳು ಸುಭದ್ರವಾಗಿದ್ದು, ವರ್ಷಕ್ಕೆ ಎರಡು ಬಾರಿ ಅದರ ನಿರ್ವಹಣೆ ಮತ್ತು ಅದಕ್ಕೆ ಬೇಕಾಗುವ ವೈಯರ್ ರೋಪ್(ಹಗ್ಗ) ಮೂಲಕ ಗೇಟ್ ಎತ್ತುವಿಕೆ ಮತ್ತು ಇಳುಸುವಿಕೆಯ ಕಾರ್ಯ ನಡೆಯುವುದು. ಅದಕ್ಕೆ ಸಂಬAಧಿಸಿದ ನಿಕರವಾದ ದುರಸ್ತಿ ಮತ್ತು ನಿರ್ವಹಣೆ ಕ್ರಮಬದ್ಧವಾಗಿ ನಡೆಸಲಾಗುತ್ತಿದೆ.
ಈಗಾಗಲೇ ಹಾರಂಗಿ ಅಣೆಕಟ್ಟೆಗೆ ೪೩ ವರ್ಷಗಳು ಪೂರ್ಣಗೊಂಡಿವೆ. ೧೯೬೯ರಲ್ಲಿ ನಿರ್ಮಾಣ ಆರಂಭವಾಗಿ ೧೯೮೨ರಲ್ಲಿ ಸಂಪೂರ್ಣವಾಗಿ ಪೂರ್ಣಗೊಂಡಿದೆ. ದಿ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ನಿರ್ಮಾಣಕ್ಕೆ ಚಾಲನೆ ದೊರೆತು, ದಿವಂಗತ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಅವರ ಕಾಲದಲ್ಲಿ ಪೂರ್ಣಗೊಂಡಿತು.
ಅಣೆಕಟ್ಟೆಯಲ್ಲಿ ಪ್ರಮುಖ ದ್ವಾರಗಳಲ್ಲಿ ೪ ಮುಖ್ಯ ಗೇಟ್ಗಳು, ೧ ನಾಲೆಯ ಗೇಟ್ ಅಲ್ಲದೆ ಅಣೆಕಟ್ಟೆಯ ನೀರಿನ ಕೆಳ ಭಾಗದ ನದಿ ನೀರಿನ ಸಮತಟದಲ್ಲಿ ಮೂರು ಗೇಟ್ಗಳಿವೆ. ಎಲ್ಲಾ ಗೇಟ್ಗಳಿಗೆ ವಯರ್ ರೋಪ್ಗಳನ್ನು ಅಳವಡಿಕೆ ಮಾಡಲಾಗಿದೆ.
ಹಾರಂಗಿ ಅಣೆಕಟ್ಟೆ ಒಂದು ಗೇಟ್ನಿಂದ ೨೫ ಸಾವಿರ ಕ್ಯೂಸೇಕ್ಸ್ ನೀರನ್ನು ನದಿಗೆ ಹರಿಸುವ ಸಾಮರ್ಥ್ಯವನ್ನು ಹೊಂದಿದೆ, ಅಲ್ಲದೆ ಅಣೆಕಟ್ಟೆಯ ೪ ಗೇಟ್ಗಳ ಮೂಲಕ ಒಂದೇ ಬಾರಿಗೆ ೧ ಲಕ್ಷದ ೨೦ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುವ ಸಾಮರ್ಥ್ಯವನ್ನು ಅಣೆಕಟ್ಟೆಯ ಬಾಗಿಲುಗಳು ಹೊಂದಿವೆ ಎಂದು ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಸೌಮ್ಯ ತಿಳಿಸಿದ್ದಾರೆ.
ಅಣೆಕಟ್ಟೆಯು ನಿರ್ಮಾಣವಾಗಿ ೪೩ ವರ್ಷಗಳು ಕಳೆದರೂ ಇದುವರೆಗೆ ೨೦೧೮-೧೯ ರಲ್ಲಿ ಇತಿಹಾಸದಲ್ಲಿ ಪ್ರಥಮವಾಗಿ ೨೦೧೮ ಆಗಸ್ಟ್ನಲ್ಲಿ ೮೦ ಸಾವಿರ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗಿತ್ತು.
ಹಾರಂಗಿ ಅಣೆಕಟ್ಟೆಯ ಭಧ್ರತಾ ಹಿತದೃಷ್ಟಿಯಿಂದ ವರ್ಷಕ್ಕೆ ಎರಡು ಬಾರಿ ನಿರ್ವಹಣೆಯ ಜೊತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಲಾಖೆಯ ಗೋದಾಮಿನಲ್ಲಿ ವಯರ್ ರೋಪ್ (ಕಬ್ಬಿಣದ ಸುರುಳಿನ ಹಗ್ಗ) ಅನ್ನು ಹೆಚ್ಚುವರಿಯಾಗಿ ಇಲಾಖೆಯ ನಿಯಮಾನುಸಾರ ದಾಸ್ತಾನು ಇಡಲಾಗಿದೆ.
ಕರ್ನಾಟಕ ರಾಜ್ಯದ ಮೂರು ಅಣೆಕಟ್ಟೆಗಳಾದ ಹಾರಂಗಿ, ಹೇಮಾವತಿ, ಕಬಿನಿ ಅಣೆಕಟ್ಟೆಗಳಲ್ಲಿ ವಯರ್ ರೋಪ್ ಮಾದರಿ ಮುಖ್ಯ ಗೇಟ್ಗಳನ್ನು ಅಳವಡಿಕೆ ಮಾಡಲಾಗಿದೆ. ಅದರ ಮೂಲಕ ಗೇಟ್ ಬಾಗಿಲುಗಳ ಎತ್ತುವಿಕೆ ಮತ್ತು ಇಳಿಸುವಿಕೆಯ ಕಾರ್ಯ ವರ್ಷಂಪ್ರತಿ ನಡೆಯುತ್ತಿದೆ.
ಹಾರಂಗಿ ಅಣೆಕಟ್ಟೆ ೮.೫ ಟಿ.ಎಂ.ಸಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಉಪಯುಕ್ತ ನೀರಿನ ಸಾಮರ್ಥ್ಯ ೭.೭೫ ಟಿ.ಎಂ.ಸಿ. ಅಣೆಕಟ್ಟೆಗೆ ಹೊಂದಿಕೊAಡಿರುವ ಮುಖ್ಯ ನಾಲೆಯ ನೀರನ್ನು ಕೊಡಗು ಜಿಲ್ಲೆ ಸೇರಿದಂತೆ ಹಾಸನ ಮತ್ತು ಮೈಸೂರು ಜಿಲ್ಲೆಯ ೧ ಲಕ್ಷದ ೩೪ ಸಾವಿರದ ೮೯೫ ಎಕರೆಗಳಷ್ಟು ಪ್ರದೇಶದ ಜಮೀನಿಗೆ ಬೇಸಾಯಕ್ಕೆ ಒದಗಿಸಲಾಗುತ್ತಿದೆ.
೨೦೨೫ರ ಸಾಲಿನಲ್ಲಿ ಅಣೆಕಟ್ಟೆಗೆ ೪೮.೪೧೩ ಟಿ.ಎಂ.ಸಿ ನೀರು ಬಂದಿದ್ದು, ಅದರಲ್ಲಿ ೩೯.೭೬ ಟಿ.ಎಂ.ಸಿ ನೀರನ್ನು ನದಿಗೆ ಹರಿಸಲಾಗಿದೆ, ನಾಲೆಗೆ ೧೦.೨೩೪ ಟಿ.ಎಂ. ಸಿ ನೀರನ್ನು ಹರಿಸಲಾಗಿದೆ.
ಇದೀಗ ಹಾರಂಗಿ ಅಣೆಕಟ್ಟೆಯ ಮುಖ್ಯನಾಲೆಯ ಆಧುನಿಕ ತಂತ್ರಜ್ಞಾನ ಕಾಂಕ್ರೀಟಿರಣ ಕಾಮಗಾರಿಯು ಆರಂಭಗೊAಡಿದೆ, ಅದರ ಮೂಲಕ ಕೊನೆಯ ಭಾಗದ ರೈತರಿಗೆ ಬೇಸಾಯಕ್ಕೆ ಸಮರ್ಪಕವಾಗಿ ನೀರು ಹಂತ ಹಂತವಾಗಿ ಒದಗಿಸಲಾಗುವುದು.
ಅಣೆಕಟ್ಟೆಯ ಒಳ ಹರಿವು ಮತ್ತು ಹೊರ ನೀರಿನ ಹರಿವಿನ ಅಳತೆ ಮಾಡುವ ತಂತ್ರಜ್ಞಾನ ನೌಕರರ ನೇಮಕ ಕಳೆದ ೨೦ ವರ್ಷಗಳಿಂದಲೂ ಇಲಾಖೆಯ ವತಿಯಿಂದ ನಡೆದಿಲ್ಲ. ಇರುವ ನೌಕರರನ್ನು ಟೆಂಡರ್ ಪ್ರಕ್ರಿಯೆ ಮೂಲಕ ತೆಗೆದುಕೊಳ್ಳಲಾಗಿದೆ. ಸಂಬAಧಿಸಿದ ಸಿಬ್ಬಂದಿಗಳನ್ನು ಸರಕಾರ ನೇಮಿಸುವಂತೆ ಸ್ಥಳೀಯರು ಒತ್ತಾಯಸಿದ್ದಾರೆ.
ಕೆ.ಕೆ. ನಾಗರಾಜಶೆಟ್ಟಿ