ಮಡಿಕೇರಿ, ಮೇ ೨೧ : ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದ ಊರ್ ಮುಂದ್ ಹೊಳೆಗೆ ೩೫ ಲಕ್ಷ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಶಂಕು ಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಪ್ರತೀ ಗ್ರಾಮಗಳ ಅಭಿವೃದ್ಧಿ ತನ್ನ ಕನಸಾಗಿದ್ದು ಕನಸು ನನಸಾಗಲು ಶಕ್ತಿ ಮೀರಿ ಪ್ರಯತ್ನಿಸುವೆ ಎಂದರು. ಅಭಿವೃದ್ಧಿ ತನ್ನ ಕನಸಾಗಿದ್ದು ಕನಸು ನನಸಾಗಲು ಗ್ರಾಮ ನಿವಾಸಿಗಳ ಪಾತ್ರವು ಮುಖ್ಯ, ಗುಣಮಟ್ಟದ ಕಾಮಗಾರಿ ಗಮನಿಸುವ ಹೊಣೆಗಾರಿಕೆ ಸ್ಥಳೀಯರದಾಗಬೇಕು ಎಂದರಲ್ಲದೆ ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆಗಾರರಿಗೆ ಸೂಚಿಸಿದರು.

ಈ ಸಂದರ್ಭ ಶಿರಂಗಳ್ಳಿ ಗ್ರಾಮಧ್ಯಕ್ಷ ಉಡುವೆರ ಮಿಟ್ಟು ತಮ್ಮಯ್ಯ, ಗರ್ವಾಲೆ ಕೊಡವ ಸಮಾಜ ಅಧ್ಯಕ್ಷ ಸರ್ಕಂಡ ಗಣಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾಕೇರಿ ಸತೀಶ್, ಸ್ಥಳೀಯ ಮುಖಂಡರಾದ ಉದ್ದಿನಾಡಂಡ ರಘು, ಮೋಟನಾÀಳಿರ ಸನ್ನಿ ಕಾರ್ಯಪ್ಪ ಸೇರಿದಂತೆ ಗ್ರಾಮಸ್ಥರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.