ಮಡಿಕೇರಿ, ಮೇ ೨೧: ದ್ವಿತೀಯ ಪಿ.ಯು ಮರುಪರೀಕ್ಷೆ ಬರೆದು ೬೦೦ಕ್ಕೆ ೬೦೦ ಅಂಕ ಗಳಿಸಿ ವಿದ್ಯಾರ್ಥಿನಿಯೋರ್ವಳು ಶೇ.೧೦೦ ಸಾಧನೆ ಮಾಡಿದ ಅಪರೂಪದ ಪ್ರಸಂಗ ನಡೆದಿದೆ. ಕಳೆದ ತಿಂಗಳು ಪ್ರಕಟವಾದ ಪಿ.ಯು ಫಲಿತಾಂಶದಲ್ಲಿ ಮೂಲತಃ ಹೊದ್ದೂರು ಗ್ರಾಮದವರಾದ ನೆರವಂಡ ಯಾನ ಪೊನ್ನಮ್ಮ, ವಾಣಿಜ್ಯ ವಿಭಾಗದಲ್ಲಿ ೫೯೭ ಅಂಕ ಪಡೆದು ರಾಜ್ಯಕ್ಕೆ ೪ನೇ ಸ್ಥಾನ ಪಡೆದಿದ್ದರು.
ಇಂಗ್ಲಿಷ್ನಲ್ಲಿ ೯೭ ಅಂಕ ಗಳಿಸಿದ್ದ ಯಾನ, ತೃಪ್ತಿ ದೊರಕದೆ ಮತ್ತೇ ಪರೀಕ್ಷೆ ಬರೆದಿದ್ದರು. ಇದರಲ್ಲಿ ೧೦೦ಕ್ಕೆ ೧೦೦ ಅಂಕ ದೊರಕಿ ಇದೀಗ ೬೦೦ಕ್ಕೆ ೬೦೦ ಅಂಕಗಳ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗೈದಿದ್ದಾರೆ.
ಇವರು ನೆರವಂಡ ಸಂಜಯ್ ಪೂಣಚ್ಚ ಹಾಗೂ ಮೋನಿತ ದಂಪತಿ ಪುತ್ರಿ ಹಾಗೂ ಬೆಳ್ತಂಗಡಿ ಗುರುವಾಯಿನ ಕೆರೆ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ.