ಮಡಿಕೇರಿ, ಮೇ ೨೧: ಸರ್ಕಾರವು ಘನತ್ಯಾಜ್ಯ ನಿರ್ವಹಣೆ ನಿಯಮಗಳ ೨೦೨೬ರ ಪ್ರಕಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಲೇವಾರಿ ಮಾಡುವ ವಾಹನಕ್ಕೆ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಮೂಲದಲ್ಲಿಯೇ ನಾಲ್ಕು ವಿದಧ ತ್ಯಾಜ್ಯ ವಿಂಗಡಣೆ ಮಾಡಿ ಕಡ್ಡಾಯವಾಗಿ ನೀಡಬೇಕಿದೆ.
ಹಸಿತ್ಯಾಜ್ಯ : ಅಡುಗೆ ಮನೆಯ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ, ಗಾರ್ಡನ್ ವೇಸ್ಟ್ ಮತ್ತು ಇತರೆ ಕರಗುವ ತ್ಯಾಜ್ಯ ವಸ್ತುಗಳು.
ಒಣತ್ಯಾಜ್ಯ : ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಬಟ್ಟೆಯ ತ್ಯಾಜ್ಯ ವಸ್ತುಗಳು, ಕಬ್ಬಿಣ, ರಬ್ಬರ್ ಮರದ ತ್ಯಾಜ್ಯ ಮತ್ತಿತರ.
ಸ್ಯಾನಿಟರಿ ತ್ಯಾಜ್ಯ : ಡೈಪರ್ಸ್, ಸ್ಯಾನಿಟರಿ ನ್ಯಾಫ್‌ಕಿನ್ಸ್, ಕಾಂಡೂಮ್ಸ್ ಮತ್ತಿತರ.
ಸ್ಪೆಷಲ್ ಕೇ ವೇಸ್ಟ್ : ಪೈಂಟ್ ಡ್ರಮ್ಸ್/ಕಂಟೈನರ್ಸ್ ಔಷಧಿ ಕ್ಯಾನ್‌ಗಳು/ಡ್ರಮ್‌ಗಳು/ಬಾಟಲ್‌ಗಳು ಬಲ್ಬ್/ ಟ್ಯೂಬ್ ಲೈಟ್ಸ್, ಅವಧಿ ಮೀರಿದ ಔಷದಿಗಳು, ಒಡೆದ ಮರ್ಕ್ಯೂರಿ ಥರ್ಮೋಮೀಟರ್ಸ್ ಹಳೆಯ ಬ್ಯಾಟರಿಗಳು, ಬಳಸಿದ ನೀಡಲ್ಸ್/ ಸಿರೀಂಜ್‌ಗಳು, ಬ್ಯಾಂಡೇಜ್ ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮ ೨೦೨೬ ರನ್ವಯ ಬೃಹತ್ ತ್ಯಾಜ್ಯ ಉತ್ಪಾದಕರು (ಬಿಡಬ್ಲುö್ಯಜಿ) (೪೦,೦೦೦ ಸಾಮರ್ಥ್ಯದ ನೀರಿನ ಟ್ಯಾಂಕ್ ಉಳ್ಳವರು/೨೦,೦೦೦ ಚ.ಮೀ. ವ್ಯಾಪ್ತಿಯ ಪ್ರದೇಶದಲ್ಲಿರುವ ಕಟ್ಟಡಉಳ್ಳವರು, ಪ್ರತಿ ನಿತ್ಯ ೧೦೦ ಕೆ.ಜಿ. ತ್ಯಾಜ್ಯ ಉತ್ಪಾದನೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡುವವರನ್ನು ಬೃಹತ್ ತ್ಯಾಜ್ಯ ಉತ್ಪಾದಕರೆಂದು ಪರಿಗಣಿಸಲಾಗಿದ್ದು, ಬೃಹತ್ ತ್ಯಾಜ್ಯ ಉತ್ಪಾದನೆ ಮಾಡುವ ಸಂಸ್ಥೆಯವರು/ ಉದ್ಯಮದಾರರು/ ಕಟ್ಟಡದ ಮಾಲೀಕರು/ ಚೌಟ್ರಿ (ಮಂಟಪಗಳು)ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ (iಟಿ-siಣu) ಸಂಸ್ಕರಿಸಬೇಕು. ಹಾಗೂ ಸಿಪಿಸಿಬಿ ಪೋರ್ಟಲ್‌ನಲ್ಲಿ ತಪ್ಪದೇ ನೋಂದಾಯಿಸಬೇಕು ಅಥವಾ ಪಟ್ಟಣ ಪಂಚಾಯಿತಿ, ಪುರಸಭೆ ನಿಗದಿಪಡಿಸುವ ಶುಲ್ಕವನ್ನು ಪಾವತಿಸಿ ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು.
ತಪ್ಪಿದಲ್ಲಿ ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು-೨೦೨೬ ರಂತೆ ಕಸ ವಿಂಗಡಣೆ ಮಾಡದೇ ಇರುವವರ ವಿರುದ್ಧ ದಂಡ ವಿಧಿಸುವುದಲ್ಲದೇ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವುದು. ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಯ ಸಾರ್ವಜನಿಕರು/ಉದ್ದಿಮೆಮದಾರರು ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು-೨೦೨೬ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡುವಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಹಾಗೂ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಅವರುಗಳು ತಿಳಿಸಿದ್ದಾರೆ.