ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸಿದ ಕಾಲದಲ್ಲಿ ೧೫.೦೫.೨೦೨೬ ಬೆಳಿಗ್ಗೆ ೬ ಗಂಟೆ ೯ ನಿಮಿಷ, ಸೂರ್ಯನು ಬುಧನೊಡನೆ ಲಗ್ನದಲ್ಲಿ, ಗುರು-ಶುಕ್ರ ಗ್ರಹಗಳು ಸೂರ್ಯನ ಮುಂದೆ ಅಂದರೆ ಮಿಥುನ ರಾಶಿಯಲ್ಲಿ ಇರುವುದು. ಬಂಗಾಳಕೊಲ್ಲಿಯಲ್ಲಿ ಮಳೆಗಾಲದ ಮೋಡಗಳು ಸಕಾಲಿಕವಾಗಿ ರೂಪುಗೊಳ್ಳಲು ಉತ್ತಮ ಸಂಯೋಜನೆಯಾಗಿದೆ. ಈ ಗ್ರಹ ಸಂಚಾರವು ಮೇ. ೨೦೨೬ರ ೨ನೇ ೧೫ ದಿನಗಳಲ್ಲಿ ಉತ್ತಮ ಹಿಂಗಾರು ಮಳೆಯನ್ನು ಕೊಡಗಿಗೆ ಕೊಂಡು ತರುವುದು. ೨೦೨೬ರ ಮೇ. ತಿಂಗಳ ೩ನೇ ವಾರದಲ್ಲಿ ಅತಿವೇಗವಾಗಿ ನೈರುತ್ಯ ಗಾಳಿ, ಮಳೆ ಮುಂದುವರೆದು ೩೦.೦೫.೨೦೨೬ಕ್ಕೆ ವಾಡಿಕೆಯಂತೆ ತಲುಪಬಹುದೆಂಬ ಅಂದಾಜು ಇದ್ದರೂ, ಗುರು-ಶುಕ್ರರ ಸಂಯೋಜನೆ ಮಿಥುನ ರಾಶಿಯಲ್ಲಿ ಮತ್ತು ಮಿಥುನ ರಾಶಿಯಲ್ಲಿ (೩) ಮೂರು ಕುಂಭ ಗ್ರಹಗಳಿಂದ ಚಂದ್ರನು ತ್ರಿಕೋನದಲ್ಲಿ ತುಲಾ ರಾಶಿಯಲ್ಲಿರುವುದರಿಂದ ಎರಡು ಅಥವಾ ನಾಲ್ಕು ದಿನಗಳಿಗೆ ಮುನ್ನವೇ ೨೬/೨೮.೦೫.೨೦೨೬ರಂದು ನೈರುತ್ಯ ಗಾಳಿ, ಮಳೆ ಕೇರಳ ತಲುಪಬಹುದು. ನೈರುತ್ಯ ಗಾಳಿ, ಮಳೆ ಜೂನ್ ತಿಂಗಳ ೫ನೇ ದಿನಕ್ಕೆ (೫.೦೬.೨೦೨೬) ಮುನ್ನವೇ ಇಡೀ ಕೊಡಗನ್ನು ಆವರಿಸಬಹುದು. ೦೨.೦೬.೨೦೨೬ರಿಂದ ಗುರು ಗ್ರಹವು ಶನಿ ಗ್ರಹವನ್ನು ದೃಷ್ಠಿಸುತ್ತಿರುವುದು ಸಹ ಉತ್ತಮ ಮಳೆಯನ್ನು ನೀಡುವ ಸಂಯೋಜನೆ. ಈ ವರ್ಷ ಭತ್ತ ಬೆಳೆಯುವ ರೈತರು ಶೀಘ್ರಗತಿ (ಬೇಗನೆ) ಬಿತ್ತನೆ ಹಾಕುವರು. ಈ ವರ್ಷ ಭತ್ತದ ಬೆಳೆ, ಕಾಫಿ ಬೆಳೆ ಉತ್ತಮ ಫಸಲು ನೀಡಬಹುದೆಂದು ವೃಷಭ ಸಂಕ್ರಾತಿಯ ಶುಕ್ರ ಸಂಚಾರವು ಹೇಳುತ್ತದೆ. ನಷ್ಟ ಕಡಿಮೆ. ೨೬.೦೭.೨೦೬ರ ತನಕ ಕೊಡಗಿ ನಲ್ಲಿ ಉತ್ತಮ ಮಳೆಯಾಗುವುದು. ಶನಿಗ್ರಹವು ೨೬.೦೭.೨೦೨೬ರಿಂದ ವಕ್ರನಾಗುವುದರಿಂದ ೨೬.೦೭.೨೬ ರಿಂದ ಮಳೆಯ ಪ್ರಮಾಣ ಕಡಿಮೆಯಾಗಬಹುದು. ೧.೦೮.೨೦೬ರಂದು ಶುಕ್ರನು ಕನ್ಯಾರಾಶಿ ಪ್ರವೇಶ ಮಾಡುವ ಕಾಲದಲ್ಲಿ ಕೊಡಗಿನಲ್ಲಿ ಉತ್ತಮ ಮಳೆಯಾಗುವುದು. ಬುಧ ಗ್ರಹ ಕಟಕ ರಾಶಿಯಲ್ಲಿ ಸಂಚರಿಸುವ ಕಾಲದಲ್ಲಿ ಭೂಮಿಯಲ್ಲಿ (೦೫.೦೮.೨೬-೨೫.೦೮.೨೦೨೬) ಪ್ರವಾಹ ಪರಿಸ್ಥಿತಿ ಉಂಟಾಗಬಹುದು.

ಅತಿಚಾರಿ ಗುರುಗ್ರಹ ವಕ್ರಿಯಾಗಿರುವ ಶನಿಗ್ರಹ, ಕುಜ ಮಿಥುನ ರಾಶಿ (೦೨.೦೮.೨೦೨೬) ಪ್ರವೇಶ ಮಾಡುವ ಕಾಲದಲ್ಲಿ ಪ್ರಕೃತಿ ವಿಕೋಪಗಳು ಭೂಮಿಯಲ್ಲಿ ಸಂಭವಿಸಬಹುದು. (ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಅತಿವೃಷ್ಠಿಯಿಂದ ಭಾರಿ ನಷ್ಟ ಸಂಭವ) ೧೫.೦೯.೨೦೨೬ ಕಳೆದರೆ ಕುಜಗ್ರಹವು ಕೊಡಗಿಗೆ ಮಳೆಯನ್ನು ಮತ್ತೆ ನೀಡಬಹುದು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸೂರ್ಯನು ಆರಿದ್ರಾ ಪ್ರವೇಶವು ಕನ್ಯಾರಾಶಿ ಹಸ್ತ ನಕ್ಷತ್ರದಲ್ಲಾಗುವುದು. ಇದು ಕೊಡಗಿಗೆ ಶುಭ ಸೂಚಕ (೨೨.೦೬.೨೦೨೬) ಆರಿದ್ರಾ ಪ್ರವೇಶ ಕಾಲವು ಹಗಲಿನಲ್ಲಿ ಮತ್ತು ವಾರಿಯನ್ ಯೋಗದಲ್ಲಿ ಆಗುವುದರಿಂದ ಕೆಲವು ಪ್ರದೇಶಗಳಲ್ಲಿ ಅನಾವೃಷ್ಠಿಯಾಗುವ ಸಂಭವವಿದೆ. ಕೊಡಗಿಗೆ, ಮಾತ್ರವಲ್ಲ, ಭಾರತ ದೇಶಕ್ಕೆ ಶುಭವಾಗಲಿ. ದೇವಿ ಕಾವೇರಮ್ಮ ಎಲ್ಲರನ್ನೂ ಕಾಪಾಡಲಿ.

- ಕರೋಟಿರ ಶಶಿ ಸುಬ್ರಮಣಿ

ವೀರಾಜಪೇಟೆ