ಮಡಿಕೇರಿ ಮೇ ೨೦ : ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ನಗರದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿಗೆ ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ತಾ. ೨೨ ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ಬೆಳಿಗ್ಗೆ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ಅಭಿಷೇಕ, ೧೨ ತೆಂಗಿನ ಕಾಯಿಯ ಗಣ ಹೋಮ, ೧೦ ಸಹಸ್ರ ದುರ್ವಾಂಕುರ ಸಮರ್ಪಣೆ, ಒಂದು ಸಹಸ್ರ ಎಕ್ಕ ಸಮರ್ಪಣೆಯಾಗಲಿದೆ. ನಂತರ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಅಕ್ಕಿ, ತರಕಾರಿ. ಎಣ್ಣೆ, ಹೂವು ಮತ್ತಿತರ ಸಾಮಗ್ರಿಗಳನ್ನು ನೀಡುವವರು ೯೯೮೬೪೯೮೪೬೬, ೮೦೫೦೩೪೨೫೬೨ ನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.