ಸೋಮವಾರಪೇಟೆ,ಮೇ.೧೯: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್ನವರು ಬೇಲಿ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಸರ್ವೆ ನಡೆಸಿ ವರದಿ ನೀಡಲು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿರುವ ಸಂಕ್ಷಿಪ್ತ ವರದಿ ಇಂತಿದೆ; ಕುಸುಬೂರು ಗ್ರಾಮದ ಸ.ನಂ. ೮೬/೨ ರ ೮.೪೪, ಏಕ್ರೆ ಸ.ನಂ. ೧೪೪/೬ ರ ೦.೩೦ ಏಕ್ರೆ, ೧೪೪/೭ ರ ೧.೨೯ ಏಕ್ರೆ ,ಸ.ನಂ.೧೩೪/೫ ರ ೦.೨೩ ಏಕ್ರೆ, ಸ.ನಂ. ೧೪೪/೨ ರ ೧.೫೪ ಏಕ್ರೆ, ಸ.ನಂ.೧೪೪/೩ ರ ೧.೧೬ ಏಕ್ರೆ, ಸ.ನಂ. ೧೪೪/೧ ರ ೧೬೨ ಏಕ್ರೆ, ಸ. ನಂ.೧೪೩/೧ ರ ೧.೬, ಏಕ್ರೆ, ಸ.ನಂ. ೧೪೩/೧ ರ ೩.೧೨ ಏಕ್ರೆ, ಸ.ನಂ. ೧೩೪/೭ ರ ೦.೨೪ ಏಕ್ರೆ, ಸ.ನಂ. ೧೩೪/೮ ರ ೦.೨೨ ಏಕ್ರೆ, ಸ.ನಂ.೧೪೩/೪ ರ ೨.೦೦ ಏಕ್ರೆ, ಸ.ನಂ. ೧೪೪/೪ ರ ೮.೪೧ ಏಕ್ರೆ, ಸ.ನಂ. ೧೩೪/೬ ರ ೦.೭೫ ಏಕ್ರೆ ಒಟ್ಟು ೨೯.೩೨ ಏಕ್ರೆ ಜಾಗವು ‘ಬೇಳೂರು ಕ್ಲಬ್ ಅನರರಿ ಸೆಕ್ರೆಟರಿ’ ರವರ ಹೆಸರಿನಲ್ಲಿ ಪಹಣಿ ದಾಖಲಿರುವುದಾಗಿದೆ. ಇದು ಬೇಳೂರು ಕ್ಲಬ್ ಇವರ ಸ್ವಾಧೀನದಲ್ಲಿದ್ದು, ಜಮೀನು ಇವರ ಕಾರ್ಯ ನಿರ್ವಹಣೆಯಲ್ಲಿರುತ್ತದೆ.
ವಿವಿಧ ಸರ್ವೆ ನಂಬರುಗಳ ಒಟ್ಟು ೨೯.೩೨ ಏಕ್ರೆ ಹಾಗೂ ಈಗಾಗಲೇ ಜಿಲ್ಲಾಧಿಕಾರಿಯವರ ಆದೇಶ ಸಂ. ಜಾಗ/೦೮/೨೦೧೫-೧೬ ದಿ.೦೬-೦೪-೨೦೧೬ ರಂತೆ ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸಲಾದ ಪೈಸಾರಿ ಸರ್ವೆ ನಂ. ೧೪೩/೨ರ ೭.೧೨ ಏಕ್ರೆ ಜಮೀನು ಮತ್ತು ಬೇಳೂರು ಮಠದ ಆಸ್ತಿಗಳು ಒಂದಕ್ಕೊAದು ಲಗತ್ತಾಗಿರುತ್ತದೆ.
ಈ ಮಧ್ಯೆ ಪ್ರವಾಸೋದ್ಯಮ ಇಲಾಖೆಯ ಸರ್ವೆ ನಂ. ೧೪೩.೨ರ ೭.೧೨ ಏಕ್ರೆ ಜಮೀನಿನ ಹದ್ದುಬಸ್ತು/ಗಡಿ ಗುರುತಿಸಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಅವರ ಜಾಗವನ್ನು ಹಸ್ತಾಂತರಿಸಲಾಗಿರುತ್ತದೆ. ಈ ನಡುವೆ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಮಾಡಿರುವ ಬಗ್ಗೆ, ಕಡಂಗ ಹಾಗೂ ನಕಾಶೆ ಕಂಡ ದಾರಿ ಒತ್ತುವರಿ ಆಗಿರುವ ಬಗ್ಗೆ ಬೇಳೂರು ಬಾಣೆ ಹೋರಾಟ ಸಮಿತಿ ಪದಾಧಿಕಾರಿಗಳ ಆರೋಪಿಸಿದ್ದು, ವಸ್ತು ಸ್ಥಿತಿಯನ್ನು ಪರಿಶೀಲಿಸಬೇಕಿರುವುದರಿಂದ ದೂರುದಾರರು, ಬೇಳೂರು ಕ್ಲಬ್ ಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಇಲಾಖಾ ಸಮಕ್ಷಮ ಸರ್ವೆ ಕಾರ್ಯ ನಡೆಸಲು ದಿನಾಂಕ ನಿಗದಿ ಪಡಿಸಿಕೊಂಡು ಜಾಗದಲ್ಲಿ ಬೇಳೂರು ಕ್ಲಬ್ ವತಿಯಿಂದ ಸರ್ಕಾರಿ ಜಾಗ, ಕಡಂಗ, ನಕಾಶೆ ಕಂಡ ದಾರಿ ಏನಾದರೂ ಒತ್ತುವರಿಯಾಗಿದೆಯೇ ಎಂಬುದನ್ನು ಪೊಲೀಸ್ ರಕ್ಷಣೆಯೊಂದಿಗೆ ಸರ್ವೆಯಿಂದ ಪರಿಶೀಲಿಸಿ ನಿಖರವಾದ ವರದಿ ನೀಡಲು ತಿಳಿಸಿದೆ ಎಂದು ತಹಶೀಲ್ದಾರರು ಸಂಬAಧಿಸಿದ ಇಲಾಖಾಧಿಕಾರಿಗೆ ಸೂಚಿಸಿದ್ದಾರೆ.
ನಿನ್ನೆ ದಿನ ಬೇಳೂರು ಬಾಣೆ ಸಂರಕ್ಷಣಾ ಹೋರಾಟ ಸಮಿತಿಯ ವತಿಯಿಂದ ನಡೆಸಿದ ಸಭೆಯಲ್ಲಿ ಬೇಳೂರು ಬಾಣೆಯಲ್ಲಿ ಸರ್ಕಾರಿ ಜಾಗ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟ ಜಾಗವನ್ನೂ ಒಳಗೊಂಡAತೆ ಕ್ಲಬ್ನವರು ಬೇಲಿ ನಿರ್ಮಿಸಿರುವುದರಿಂದ ಪ್ರವಾಸಿಗರಿಗೆ, ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಬೇಲಿ ತೆರವಿಗೆ ನಿರಂತರ ಹೋರಾಟ ನಡೆಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.
ಈ ನಡುವೆ ತಹಶೀಲ್ದಾರರು ತುರ್ತು ಕ್ರಮ ಕೈಗೊಂಡಿದ್ದು, ಬೇಳೂರು ಬಾಣೆಯಲ್ಲಿ ಸರ್ಕಾರಿ ಜಾಗದ ಒತ್ತುವರಿಯಾಗಿದೆಯೇ? ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.