ಮಡಿಕೇರಿ, ಮೇ ೧೯: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಭವಿಷ್ಯದಲ್ಲೂ ಉತ್ಸವದ ಮಾದರಿಯಲ್ಲೇ ಮುಂದುವರಿದು ಇದು ಜನಾಂಗದ ಒಗ್ಗಟ್ಟು - ಏಳಿಗೆಗೆ ಪೂರಕವಾಗಬೇಕೆಂದು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ೨೬ನೆಯ ಕೌಟುಂಬಿಕ ಹಾಕಿ ಆಯೋಜನೆ ಮಾಡಿದ ಚೇನಂಡ ಕುಟುಂಬದ ವತಿಯಿಂದ ನಿನ್ನೆ ವೀರಾಜಪೇಟೆಯ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್‌ನ ಸಭಾಂಗಣದಲ್ಲಿ ಈ ಬಾರಿಯ ಉತ್ಸವದ ಯಶಸ್ಸಿನಲ್ಲಿ ಸಹಕರಿಸಿದವರು, ಕೊಡವ ಹಾಕಿ ಅಕಾಡೆಮಿ ಸೇರಿದಂತೆ ಹಲವರನ್ನು ಒಳಗೊಂಡAತೆ ಸಂತೋಷಕೂಟ ಹಾಗೂ ಧನ್ಯವಾದ ಸಮರ್ಪಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿ ಹಲವು ವಿಚಾರಗಳ ಕುರಿತಾಗಿ ಮುಕ್ತ ಚರ್ಚೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಹಾಕಿ ಉತ್ಸವದ ರೀತಿಯಲ್ಲೇ ನಡೆಯುವಂತಾಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.