ಮಡಿಕೇರಿ, ಮೇ ೧೯: ಆನ್ಲೈನ್ನಲ್ಲಿ ಔಷಧಿಗಳ ಮಾರಾಟ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಾ. ೨೦ ರಂದು (ಇಂದು) ರಾಷ್ಟçವ್ಯಾಪಿ ಕರೆ ನೀಡಿರುವ ಬಂದ್ಗೆ ಕೊಡಗು ಜಿಲ್ಲಾ ಕೆಮಿಸ್ಟ್÷್ಸ ಮತ್ತು ಡ್ರಗ್ಗಿಸ್ಟ್÷್ಸ ಅಸೋಸಿಯೇಷನ್ ಬೆಂಬಲ ಸೂಚಿಸಿದ್ದು, ಪರಿಣಾಮ ಇಂದು ಜಿಲ್ಲೆಯ ೨೦೦ ಔಷಧಿ ಮಳಿಗೆಗಳು ಬಂದ್ ಆಗಲಿವೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಅಂಬೆಕಲ್ಲು ಜೀವನ್, ಕೋವಿಡ್ ಪರಿಸ್ಥಿತಿಯಲ್ಲಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಎದುರಾದ ಸಂದರ್ಭ ಆನ್ಲೈನ್ ಮೂಲಕ ಔಷಧಿ ಮಾರಾಟ ಮಾಡಲು ಕೇಂದ್ರ ಸರಕಾರ ತಾತ್ಕಾಲಿಕ ಅನುಮತಿ ನೀಡಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸರಕಾರ ಆದೇಶ ಹಿಂಪಡೆಯದೆ ಪರಿಣಾಮ ಇಂದಿಗೂ ಆನ್ಲೈನ್ನಲ್ಲಿ ಔಷಧಿಗಳು ಮಾರಾಟವಾಗುತ್ತಿವೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು. ಆನ್ಲೈನ್ ಮಾರಾಟದಿಂದ ಔಷಧಿ ವ್ಯಾಪಾರಿಗಳಿಗೆ ಸಮಸ್ಯೆ ಜೊತೆಗೆ ಸಮಾಜದ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಮಾರಾಟಗಾರರು-ಖರೀದಿದಾರರ ಮಾಹಿತಿ ತಿಳಿಯುತ್ತಿಲ್ಲ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಳಪೆ ಔಷಧಿ ಮಾರಾಟದ ಗುಮಾನಿಯೂ ಇದೆ ಎಂದು ದೂರಿದ ಅವರು, ಕಾಯಿದೆ ಪ್ರಕಾರ ಆನ್ಲೈನ್ ವಹಿವಾಟು ನಡೆಸುವುದು ಕಾನೂನು ಬಾಹಿರ ಎಂದರು. ಅಸೋಸಿಯೇಷನ್ನಲ್ಲಿ ಕರ್ನಾಟಕದಲ್ಲಿ ೨೬ ಸಾವಿರ ಸದಸ್ಯರಿದ್ದು, ಕೊಡಗಿನಲ್ಲಿ ೨೦೦ ಸದಸ್ಯರಿದ್ದಾರೆ. ಈ ಹೋರಾಟಕ್ಕೆ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿ ಒಂದು ದಿನ ಮಳಿಗೆಯನ್ನು ಬಂದ್ ಮಾಡಲಿದ್ದಾರೆ. ಜನರಿಗೆ ಸಮಸ್ಯೆಯಾಗಬಾರದೆಂಬ ದೃಷ್ಟಿಯಲ್ಲಿ ಆಸ್ಪತ್ರೆ ಒಳಗಿನ ಮೆಡಿಕಲ್ ಶಾಪ್ ತೆರೆಯಲು ಅವಕಾಶ ನೀಡಲಾಗಿದೆ ಎಂದರು. ನಕಲಿ ಡ್ರಗ್ಸ್ಗಳು ಯಥೇಚ್ಛವಾಗಿ ಮಾರಾಟವಾಗುತ್ತಿದ್ದು, ಸರಕಾರ ಇದಕ್ಕೆ ಕಡಿವಾಣ ಹಾಕಬೇಕು. ಔಷಧಿ ಮಾರಾಟಗಾರರಿಗೆ ಶೇ ೧೬ ರಿಂದ ೨೦ ಲಾಭಾಂಶ ಮಾತ್ರ ದೊರೆಯುತ್ತಿದ್ದು, ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ. ಸರಕಾರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಎ.ಕೆ. ವಿನೋದ್, ಕಾರ್ಯದರ್ಶಿ ಪುರುಷೋತ್ತಮ್, ಜಂಟಿ ಕಾರ್ಯದರ್ಶಿ ವಸಂತ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ತಿಲಕ್ ಹಾಜರಿದ್ದರು.