ಮಡಿಕೇರಿ, ಮೇ ೧೯: ಅನಿಮಲ್ ರಿಲೀಫ್ ಕೊಡಗು ಸಂಸ್ಥೆಯು ಬೆಂಗಳೂರಿನ ಎ.ಎಸ್.ಆರ್.ಎ. ಸಹಯೋಗದಲ್ಲಿ ತಾ. ೨೩ ಹಾಗೂ ೨೪ ರಂದು ಕಡಗದಾಳು ಗ್ರಾಮದ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಮತ್ತು ಸಾಕುನಾಯಿಗಳಾಗಿ ಸಂತಾನ ನಿಯಂತ್ರಣ ಹಾಗೂ ರೇಬಿಸ್ ವಿರೋಧಿ ಲಸಿಕೆ ಶಿಬಿರ ಏರ್ಪಡಿಸಿದೆ. ಕೀ ಹೋಲ್ ಪದ್ಧತಿಯಲ್ಲಿ ಪರಿಣಿತಿ ಹೊಂದಿದ ಪಶುವೈದ್ಯರಿಂದ ಶಸ್ತçಚಿಕಿತ್ಸೆ ನಡೆಸಲಾಗುವುದು, ಬೀದಿನಾಯಿಗಳನ್ನು ಎಲ್ಲಿ ಹಿಡಿಯಲಾಗಿದೆಯೋ ಅದೇ ಸ್ಥಳಕ್ಕೆ ಮರಳಿ ಬಿಡಲಾಗುವುದು. ತಾ. ೨೩ ಹಾಗೂ ೨೪ ರಂದು ಬೆಳಿಗ್ಗೆ ೯ ರಿಂದ ಅಪರಾಹ್ನ ೨ರ ತನಕ ಕಡಗದಾಳು ಸರಕಾರಿ ಪ್ರೌಢಶಾಲೆಯಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೮೧೯೦೯೯೦, ೯೧೧೦೪೧೨೩೮೨ ಸಂಖ್ಯೆಯನ್ನು ಸಂಪರ್ಕಿಸಬಹುದು.