ಮಡಿಕೇರಿ, ಮೇ ೧೯: ಮೈಸೂರಿನ ಜಿಆರ್‌ಸ್ ಫ್ಯಾಂಟಸಿ ಪಾರ್ಕ್ ರೂ.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ೫,೦೦೦ ಚದರ ಅಡಿ ವಿಸ್ತೀರ್ಣದ ಶೂನ್ಯ ಆಳದ (Zeಡಿo-ಆeಠಿಣh) ಫ್ಯಾಮಿಲಿ ಪೂಲ್ ಹಾಗೂ ಮಕ್ಕಳಿಗಾಗಿ ಐದು ಹೊಸ ರೈಡ್‌ಗಳನ್ನು ಆರಂಭಿಸಿದೆ. ಮೂರು ತಲೆಮಾರುಗಳ ಕುಟುಂಬ ಸದಸ್ಯರು ಒಂದೇ ಸ್ಥಳದಲ್ಲಿ ಮನರಂಜನೆ ಅನುಭವಿಸುವಂತೆ ಈ ವಿಸ್ತರಣೆಯನ್ನು ರೂಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
‘ಮ್ಯಾಜಿಕಲ್ ಪೂಲ್’ ಎಂದು ಹೆಸರಿಸಲಾದ ಈ ಪೂಲ್ ೨,೦೦೦ ಚದರ ಅಡಿ ವಿಸ್ತೀರ್ಣದ ಅರ್ಧವೃತ್ತಾಕಾರದ ಕೇಂದ್ರ ಭಾಗವನ್ನು ಹೊಂದಿದ್ದು, ಇದರ ಆಳ ಕೇವಲ ೧೦ ಇಂಚುಗಳಷ್ಟಿದೆ. ಈ ಪೂಲ್ ಈಜಲು ವಿನ್ಯಾಸಗೊಳಿಸಲ್ಪಟ್ಟದ್ದಲ್ಲ; ಬದಲಾಗಿ ಚಿಕ್ಕ ಮಕ್ಕಳಿರುವ ಕುಟುಂಬಗಳು ಸುರಕ್ಷಿತವಾಗಿ ಒಟ್ಟಿಗೆ ನೀರಿನ ಆಟವನ್ನು ಅನುಭವಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಪೂಲ್ ಜೊತೆಗೆ ಜಂಪಿAಗ್ ಕ್ಲೌಡ್, ಮ್ಯಾಜಿಕ್ ಸೈಕಲ್, ರೊಟೇಟಿಂಗ್ ಬೀ, ಕ್ರೇಜಿ ಕಾರ್ ಮತ್ತು ಸಫಾರಿ ಕಿಂಗ್ ಎಂಬ ಐದು ಹೊಸ ರೈಡ್‌ಗಳನ್ನೂ ಆರಂಭಿಸಲಾಗಿದೆ.
“ಒಂದು ವರ್ಷದ ಮಗು, ಅದರ ಪೋಷಕರು ಮತ್ತು ಅಜ್ಜ-ಅಜ್ಜಿ, ಎಲ್ಲರೂ ಒಂದೇ ಮಧ್ಯಾಹ್ನದಲ್ಲಿ ತಮ್ಮದೇ ರೀತಿಯಲ್ಲಿ ಆನಂದಿಸುವAತಹ ಸ್ಥಳವಾಗಿರಬೇಕು ಎಂಬುದು ಜಿಆರೆಸ್‌ನ ಉದ್ದೇಶ” ಎಂದು ಜಿಆರ್‌ಸ್ ಫ್ಯಾಂಟಸಿ ಪಾರ್ಕ್ನ ನಿರ್ದೇಶಕ ಅಶ್ವಿನ್ ಡಾಂಗೆ ಹೇಳಿದ್ದಾರೆ.