*ಗೋಣಿಕೊಪ್ಪ, ಮೇ ೧೯: ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ಬಿ.ಕೆ. ಪ್ರದೀಪ್ ವರ್ಗಾವಣೆ ಗೊಂಡಿದ್ದಾರೆ. ಗೋಣಿಕೊಪ್ಪ ಠಾಣೆಗೆ ಕಾಳೇಗೌಡ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಗೋಣಿಕೊಪ್ಪ ಠಾಣೆಯಲ್ಲಿ, ಸುವ್ಯವಸ್ಥೆಯನ್ನು ಕಾಪಾಡಿದ ಬಿ.ಕೆ ಪ್ರದೀಪ್ ಅವರು ಬೆಟ್ಟದಪುರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.