ನಾಪೋಕ್ಲು, ಮೇ.೧೮: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಇಂದು ಅಷ್ಟಬಂಧ, ಬ್ರಹ್ಮ ಕಲಶ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡವು. ಕ್ಷೇತ್ರದ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವÀದಲ್ಲಿ ಈ ಕಾರ್ಯಗಳು ನಡೆದವು. ತಾ.೧೩ ರಿಂದ ಪ್ರಾರಂಭಗೊAಡು ವಿವಿಧ ಹೋಮ ಹವನಾದಿಗಳು ನಡೆದು ಇಂದು ಗಣಪತಿ ಹೋಮ, ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ ಬಳಿಕ ನೆರೆದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ಮಂಡ್ಯದವರಾದÀ ಮಾಜೀ ಸಂಸದ ಹಾಗೂ ರಾಜ್ಯದ ಮಾಜೀ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಅವರ ಪತ್ನಿ ಆಗಮಿಸಿ ದೇವಾಲಯ ಅಭಿವ್ರೃದ್ಧಿ ಕಾರ್ಯಗಳಿಗಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಅವರಿಗೆ ರೂ. ೧ ಲಕ್ಷ ದೇಣಿಗೆಯನ್ನು ಹಸ್ತಾಂತರಿಸಿದರು. ಅಲ್ಲದೆ ದೇವರ ಪಾಣಿ ಪೀಠಕ್ಕೆ ಬೆಳ್ಳಿ ಕವಚ ತಯಾರಿಸಿ ಕೊಡುವುದಾಗಿ ತಿಳಿಸಿದರು. ಈ ಸಂದರ್ಭ ಪಾರುಪತ್ತೇಗಾರರಾದ ಪರದಂಡ ತಮ್ಮಪ್ಪ, ಅರ್ಚಕರಾದ ಕುಶ ಭಟ್ ಪ್ರಾರ್ಥನೆ ಸಲ್ಲ್ಲಿಸಿದರು. ಪಾಡಿ ಭಕ್ತ ಜನಸಂಘದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಜನ್ಮ ದಿನವಾದುದರಿಂದ ಅವರ ಮೇಲೆ ದೈವಾನುಗ್ರಹಕ್ಕಾಗಿ ಪುಟ್ಟರಾಜು ಪ್ರಾರ್ಥಿಸಿದರು. ಈ ಸಂದರ್ಭ ದೇವಾಲಯದ ವಿವಿಧ ಪ್ರಮುಖರು ಹಾಜರಿದ್ದರು.
ಈ ನಡುವೆ ಕಟ್ಟೆಮಾಡುವಿನಿಂದ ನಂದೇಟಿರ ಚಂಗಪ್ಪ ಅವರು ವಿಶೇಷವಾಗಿ ಇಂದಿನ ಪೂಜೆಗೆ ಅಗತ್ಯವಾದ ತಾವರೆ ಹೂವುಗಳನ್ನು ಸನ್ನಿಧಿಯಲ್ಲಿ ಅರ್ಪಿಸಿದರು. ತಾವರೆ ಹೂವಿನ ಅಗತ್ಯವಿದ್ದು ಪೂಜೆಗೆ ದೊರಕಿರಲಿಲ್ಲ. ಆದರೆ, ಚಂಗಪ್ಪ ಅವರಿಗೆ ನಿನ್ನೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ದೈವ ಪ್ರೇರಣೆಯಾಗಿ ಬೆಳಗಿನ ಜಾವ ತಮ್ಮ ಕೆರೆಗಿಳಿದು ಹೂವುಗಳನ್ನು ತಂದುದಾಗಿ “ಶಕ್ತಿ”ಯೊಂದಿಗೆ ತಮ್ಮ ಅನುಭವ ಹೇಳಿಕೊಂಡರು. ಪಾಡಿ ಇಗ್ಗುತಪ್ಪನ ಪ್ರೇರಣೆಯಾದುದಕ್ಕಾಗಿ ಭಕ್ತಿ ಸಂವೇದನೆ ವ್ಯಕ್ತಗೊಳಿಸಿದರು.