ವರದಿ : ಎಂ.ಎನ್. ಚಂದ್ರಮೋಹನ್
ಕುಶಾಲನಗರ, ಮೇ ೧೮: ಎರಡು ಸಾಕಾನೆಗಳ ಕಾದಾಟದ ನಡುವೆ ಪ್ರವಾಸಿ ಮಹಿಳೆಯೊಬ್ಬರು ನದಿಯಲ್ಲಿ ಕೆಳಗೆ ಬಿದ್ದ ಆನೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಕುಶಾಲನಗರ ಸಮೀಪದ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಮಹಿಳೆಯ ಪತಿ ಮತ್ತು ಪುಟ್ಟ ಮಗು ಅದೃಷ್ಟವಶಾತ್ ಪಾರಾಗಿದ್ದಾರೆ. ಘಟನೆ ನಡೆದ ವೇಳೆ ಸಾವಿರಕ್ಕೂ ಅಧಿಕ ಪ್ರವಾಸಿಗರು ಶಿಬಿರಕ್ಕೆ ಭೇಟಿ ನೀಡಿದ್ದು ಭಾರಿ ಪ್ರಮಾಣದಲ್ಲಿ ನಡೆಯಲಿದ್ದ ಸಂಭಾವ್ಯ ದುರಂತ ಅದೃಷ್ಟವಶಾತ್ ತಪ್ಪಿದಂತಾಗಿದೆ.
ಚೆನ್ನೆöÊನ ಪಲ್ಲಾವರಂನಿAದ ಬಂದ ಪ್ರವಾಸಿ ಮಹಿಳೆ ಜುನೇಶ್ (೩೩) ಕಾದಾಟ ನಡೆಸುತ್ತಿದ್ದ ಆನೆ ಒಂದರ ಕೆಳಭಾಗದಲ್ಲಿ ಸಿಲುಕಿ, ನದಿಯಲ್ಲಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಪತಿ ಜೋಯೆಲ್ ಸೈಮನ್ ಫ್ರಾಂಕ್ಲಿನ್ ತನ್ನ ಪುಟ್ಟ ಮಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂದಿನAತೆ ಸೋಮವಾರ ಬೆಳಿಗ್ಗೆ ದುಬಾರೆ ೪ ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ನದಿ ದಾಟಿ ತೆರಳಿದ್ದು ಶಿಬಿರದಲ್ಲಿ ಆನೆ ಸ್ನಾನ, ಮತ್ತು ವೀಕ್ಷಣೆ ಮಾಡುವ ಸಂದರ್ಭ ಸುಮಾರು ಏಳಕ್ಕಿಂತಲೂ ಅಧಿಕ ಆನೆಗಳು, ಕಾವೇರಿ ನದಿಯಲ್ಲಿ ವಿಹರಿಸುತ್ತಿದ್ದ ದೃಶ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಇದೆ ವೇಳೆ ಚೆನ್ನೈನಿಂದ ಆಗಮಿಸಿದ ಜೋಯೆಲ್ ದಂಪತಿ ಕೂಡ ನದಿ ದಾಟಿ ರೂ.೩೦೦ ಟಿಕೆಟ್ ಖರೀದಿಸಿ ಆನೆಯ ಸ್ನಾನ ಮಾಡುವ ಜಾಗಕ್ಕೆ ತೆರಳಿದ್ದರು.
೧೧ ಗಂಟೆಗೆ ಶಿಬಿರ ಬಂದ್ ಆದರೂ ಪ್ರವಾಸಿಗರ ಒತ್ತಡ ಕಡಿಮೆ ಆಗಿರಲಿಲ್ಲ. ಶಿಬಿರದಿಂದ ಕಾಡಿಗೆ ತೆರಳುವ ಸಮಯದ ನಡುವೆ ದಿಢೀರನೆ ಶಿಬಿರದ ಕಂಜನ್ ಆನೆ ಸನಿಹದಲ್ಲಿದ್ದ ಮಾರ್ತಾಂಡ (ಮಖಾನ ಆನೆ) ಮೇಲೆ ಏಕಾಏಕಿ ದಾಳಿ ಮಾಡಿ ಕಾದಾಟಕ್ಕೆ ಆರಂಭಿಸಿದೆ. ಮಾರ್ತಾಂಡ ಆನೆ ನದಿಗೆ ಬಿದ್ದ ಸಂದರ್ಭ ಸಮೀಪದಲ್ಲಿದ್ದ ಮಹಿಳೆ ಆನೆಯ ಕೆಳಭಾಗದಲ್ಲಿ ಸಿಲುಕಿ ಹೊರಬರಲು ಪರದಾಡುವಂತಹ ಸ್ಥಿತಿ ಎದುರಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಸಂದರ್ಭ ಮಹಿಳೆಯ ಪತಿ ತನ್ನ ಪುಟ್ಟ ಮಗುವಿನ ರಕ್ಷಣೆ ಮಾಡುವುದರ ಜೊತೆಗೆ ಪತ್ನಿಯ ರಕ್ಷಣೆಗೆ ಕೂಡ ಹರಸಾಹಸಪಟ್ಟರೂ ಹೊರ ತರುವಲ್ಲಿ ವಿಫಲರಾಗಿದ್ದಾರೆ. ಕಂಜನ್ ಆನೆ ಮಾವುತ ಈ ಸಂದರ್ಭ ತನ್ನ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜನವಾಗದೆ ಕಂಜನ್ ಮಾರ್ತಾಂಡ ಆನೆಯನ್ನು ತಿವಿದು ಕೆಲವು ಕಾಲ ಕಾದಾಟದಲ್ಲಿ ತೊಡಗಿದ್ದ ದೃಶ್ಯ ಗೋಚರಿಸಿತು.
ಈ ಸಂದರ್ಭ ತೀವ್ರ ಘಾಸಿಗೊಂಡ ಮಹಿಳೆ ಆನೆಯ ತುಳಿತದೊಂದಿಗೆ ನದಿಯಲ್ಲಿ ಸಿಲುಕಿ ಜುನೇಶ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ತಕ್ಷಣ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್ ನಡೆಸುತ್ತಿದ್ದ ಯುವಕರ ತಂಡ ಮತ್ತು ಮಾವುತ ಕಾವಾಡಿಗರು ಸ್ಥಳೀಯರು ಸೇರಿ ತೀವ್ರವಾಗಿ ಗಾಯಗೊಂಡ ಮಹಿಳೆ ಮತ್ತು ಆಕೆಯ ಪತಿ ಮಗುವನ್ನು ನದಿಯ ತಟಕ್ಕೆ ತಂದು ಕೂಡಲೇ ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ.
ತೀವ್ರ ಗಾಯಗೊಂಡ ಮಹಿಳೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಪ ಸ್ವಲ್ಪ ಗಾಯಗೊಂಡ ಮಹಿಳೆಯ ಪತಿ ಜೋಯೆಲ್ ಸೈಮನ್ ಮತ್ತು ಪುಟ್ಟ ಮಗುವನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದ್ದಾರೆ. ಪತಿ ಸೈಮನ್ ಅವರಿಗೆ ಕಾಲಿಗೆ ಅಲ್ಪ ಸ್ವಲ್ಪ ಏಟು ಉಂಟಾಗಿದೆ. ಅದೃಷ್ಟವಶಾತ್ ಮೂರು ವರ್ಷ ಪ್ರಾಯದ ಮಗು ಸುರಕ್ಷಿತವಾಗಿದೆ.
ಪ್ರವಾಸಿ ದಂಪತಿ ಚೆನ್ನೈನಿಂದ ರೈಲಿನಲ್ಲಿ ಮೈಸೂರಿಗೆ ಬಂದು ಮೈಸೂರಿನಿಂದ ಟ್ಯಾಕ್ಸಿ ಮೂಲಕ ದುಬಾರೆಗೆ ಆಗಮಿಸಿ ಸಾಕಾನೆ ಶಿಬಿರಕ್ಕೆ ತೆರಳಿದ್ದಾರೆ.
ಜನ ಜಂಗುಳಿ ನಡುವೆ ಆನೆ ಸಮೀಪ ಹೋಗಿ ಸೆಲ್ಫಿ ತೆಗೆಯುವ ಸಂದರ್ಭ ಈ ದುರ್ಘಟನೆ ನಡೆದಿರುವ ಸಾಧ್ಯತೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಜೋಯೆಲ್ ಸೈಮನ್, ಚೆನ್ನೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ.
ಆನೆ ಕಾದಾಟ ಸಂದರ್ಭ ಮಾರ್ತಾಂಡ ಆನೆಯ ಮಾವುತ ಕಾವಾಡಿಗರು ನದಿಯ ಬದಿಯಲ್ಲಿ ನಿಂತು ಆನೆಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದರೆ, ಇತ್ತ ಕಂಜನ್ ಆನೆಯ ಕಾವಾಡಿಗ ಕಿರಣ್ ಮಾತ್ರ ಆನೆಯ ಮೇಲ್ಭಾಗದಿಂದ ತನ್ನ ಆನೆಯ ನಿಯಂತ್ರಣಕ್ಕೆ ಹೋರಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿತ್ತು.
ಕಂಜನ್ ದಾಳಿಯಿಂದ ತೀವ್ರಘಾಸಿಕೊಂಡ ಮಾರ್ತಾಂಡ ಆನೆಯ ರಕ್ತ ನದಿಯಲ್ಲಿ ತೇಲಿ ಹರಿಯುತ್ತಿದ್ದ ದೃಶ್ಯ ಕಂಡುಬAದಿತ್ತು. ತಕ್ಷಣ ಶಿಬಿರದ ವೈದ್ಯಾಧಿಕಾರಿ ಡಾ ಮುಜೀಬ್ ಧಾವಿಸಿ ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಿ ಇದೀಗ ಶಿಬಿರದಲ್ಲಿ ಆನೆಯ ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದಾರೆ.
ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಭೇಟಿ ನೀಡಿ ಮೃತ ಮಹಿಳೆಯ ಪತಿಗೆ ಸಾಂತ್ವನ ಹೇಳಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಘಟನೆ ಅತ್ಯಂತ ದುಃಖಮಯವಾಗಿದ್ದು, ೨ ಆನೆಗಳ ಕಿತ್ತಾಟದ ನಡುವೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವುದು ಅತ್ಯಂತ ಬೇಸರ ತಂದಿದೆ. ಕಾದಾಟದಲ್ಲಿ ತೊಡಗಿದ್ದ ಮಾವುತ ಹತೋಟಿಗೆ ತರಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಶಿಬಿರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದ ಶಾಸಕರು ಘಟನೆಗಳು ಮರುಕಳಿಸದಂತೆ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಸಿಗರ ಒತ್ತಡ ನಿಯಂತ್ರಣಕ್ಕೆ ಇಲಾಖೆ ತಕ್ಷಣದಿಂದ ಕ್ರಮ ಕೈಗೊಳ್ಳಬೇಕು. ಶಿಬಿರದ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಇಲಾಖೆ ಸಿಬ್ಬಂದಿಗಳು ಪ್ರವಾಸಿಗರು ಮತ್ತು ಇಂತಹ ಘಟನೆಗಳ ಸಂದರ್ಭ ನಿಯಂತ್ರಣ ಮಾಡುವಲ್ಲಿ ಸದಾ ಸಿದ್ದರಾಗಿರಬೇಕು ಎಂದರು. ಶಾಸಕರು ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸುವ ಭರವಸೆ ವ್ಯಕ್ತಪಡಿಸಿದರು. ಘಟನೆ ನಡೆದ ಸಂದರ್ಭ ತಕ್ಷಣ ಸ್ಪಂದಿಸಿ ಸಹಕರಿಸಿದ ದುಬಾರೆ ರಾಫ್ಟಿಂಗ್ ಅಸೋಸಿಯೇಷನ್ ತಂಡದ ಸದಸ್ಯರನ್ನು ಶಾಸಕರು ಅಭಿನಂದಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಘಟನೆಯ ಬಗ್ಗೆ ಮಾಹಿತಿ ನೀಡಿ ನದಿಯಲ್ಲಿ ಆನೆಗಳು ಇದ್ದ ಸಂದರ್ಭ ಎರಡು ಆನೆಗಳ ನಡುವೆ ಕಾಳಗ ಆರಂಭಗೊAಡಿದೆ ಸಮೀಪದಲ್ಲಿದ್ದ ಮಹಿಳೆ ಮಾರ್ತಾಂಡ ಆನೆಯ ಕೆಳಭಾಗದಲ್ಲಿ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ನಿಯಮಾನುಸಾರ ಇಲಾಖೆ ಮೂಲಕ ಕಲ್ಪಿಸುವ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಶಿಬಿರದಲ್ಲಿ ಪ್ರವಾಸಿಗರ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಅವರು ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಾಕಾನೆ ಶಿಬಿರ ನಿರ್ಬಂಧಿತ ಪ್ರದೇಶವಾಗಿದ್ದು ಈ ಬಗ್ಗೆ ಇಲಾಖೆ ಮೂಲಕ ಕೈಗೊಳ್ಳುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಕೂಡ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಅರಣ್ಯ ಅಧಿಕಾರಿಗಳಾದ ಎ ಎ ಗೋಪಾಲ್, ರಕ್ಷಿತ್ ,ಕನ್ನಂಡ ರಂಜನ್, ವೆಂಕಟೇಶ್, ಪೊಲೀಸ್ ಅಧಿಕಾರಿಗಳಾದ ಚಂದ್ರಶೇಖರ್, ಮಂಜುನಾಥ್ ಮತ್ತಿತರರು ಭೇಟಿ ನೀಡಿ ಘಟನೆ ಮಾಹಿತಿ ಕಲೆ ಹಾಕಿದರು..
ಘಟನೆಗೆ ಸಂಬAಧಿಸಿದAತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಪತಿ ಜೋಯೆಲ್ ದೂರು ದಾಖಲಿಸಿದ್ದಾರೆ.
ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಣ್ಣು ದಾನ
ದುರ್ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಕಣ್ಣು ದಾನ ಮಾಡಲು ಮೃತ ಮಹಿಳೆಯ ಪತಿಯ ಕೋರಿಕೆ ಮೇರೆಗೆ ಮಡಿಕೇರಿಯಿಂದ ಆಗಮಿಸಿದ ವೈದ್ಯರ ತಂಡ ಬಂದು ಕಣ್ಣನ್ನು ರಕ್ಷಣೆ ಮಾಡಿ ರವಾನಿಸಿತು. ನಂತರ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆದು ಕುಟುಂಬ ಸದಸ್ಯರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು. ಮೃತ ದೇಹವನ್ನು ಆ್ಯಂಬ್ಯುಲೆನ್ಸ್ ಮೂಲಕ ತಮ್ಮ ಊರಿಗೆ ಕುಟುಂಬ ಸದಸ್ಯರು ಕೊಂಡೊಯ್ದರು.
ಇಂದು ಮಾರ್ತಾಂಡ ಆನೆಯೊಂದಿಗೆ ದುಬಾರೆಯಲ್ಲಿ ಕಾಳಗಕ್ಕೆ ಇಳಿದು ದುರ್ಘಟನೆಗೆ ಕಾರಣವಾದ ಕಂಜನ್ ಕಳೆದ ಬಾರಿ ಮೈಸೂರು ದಸg ಕ್ಕೆ ತೆರಳಿ ಆವಾಂತರ ಸೃಷ್ಟಿ ಮಾಡಿತ್ತು. ಅರಮನೆಯಲ್ಲಿ ಇದ್ದ ಕಂಜನ್ ಮತ್ತು ಇನ್ನೊಂದು ಆನೆ ಸೇರಿ ತಡರಾತ್ರಿಯಲ್ಲಿ ಮೈಸೂರು ನಗರ ರಸ್ತೆಗಳಲ್ಲಿ ಓಡಾಡಿ ದಾಂಧಲೆ ನಡೆಸಿದ ಘಟನೆಯು ನಡೆದಿತ್ತು.