ಮಡಿಕೇರಿ, ಮೇ ೧೮ : ನೂತನ ರಸ್ತೆ ನಿರ್ಮಾಣ ಮಾಡಲು ಗುತ್ತಿಗೆ ಪಡೆದು ನೂತನ ರಸ್ತೆ ನಿರ್ಮಾಣಕ್ಕೆ ಬದಲಾಗಿ ಹದಗೆಟ್ಟ ರಸ್ತೆಗೆ ತೇಪೆ ಹಾಕಲು ಮುಂದಾದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿ ತೇಪೆ ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.
ಗಾಳಿಬೀಡು ಮುಖ್ಯ ರಸ್ತೆ ಪುನರ್ ನಿರ್ಮಾಣಕ್ಕೆ ೨೦೨೫ ನವಂಬರ್ ೧೪ ರಂದು ಭೂಮಿ ಪೂಜೆ ನಡೆದಿತ್ತು. ಸುಮಾರು ೨ ಕೋಟಿ ೯೫ ಲಕ್ಷ ರೂಗೆ ಗುತ್ತಿಗೆ ನೀಡಲಾಗಿತ್ತು. ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಗಾಳಿ ಬೀಡು ಶಾಲೆವರೆಗೆ ಹೊಸ ರಸ್ತೆ ನಿರ್ಮಾಣದ ಯೋಜನೆ ಇದಾಗಿತ್ತು. ಆದರೆ ಭೂಮಿ ಪೂಜೆ ಆಗಿ ೧೭೫ ದಿನ ಕಳೆದ ಬಳಿಕ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ನೂತನ ರಸ್ತೆ ನಿರ್ಮಾಣದ ಬದಲು ರಸ್ತೆಯಲ್ಲಿನ ಗುಂಡಿಗಳಿಗೆ ತೇಪೆ ಹಾಕಲು ಮುಂದಾಗಿದ್ದು, ತೇಪೆ ಹಾಕುವ ಸಂದರ್ಭ ಮಣ್ಣಿನ ಮೇಲೆಯೆ ಡಾಂಬರನ್ನು ಹಾಕುವ ಮೂಲಕ ಕಳಪೆ ಕಾಮಗಾರಿಯನ್ನು ಮಾಡಲಾಗುತಿತ್ತು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಗ್ರಾಮಸ್ಥರು ತೇಪೆ ಕಾಮಗಾರಿ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿದ್ದು. ನೂತನ ರಸ್ತೆ ಕಾಮಗಾರಿಯನ್ನು ಮಾಡುವುದಾದರೆ ಮಾಡಿ. ಅದನ್ನು ಬಿಟ್ಟು ತೇಪೆ ಹಚ್ಚುವ ಕಾರ್ಯಕ್ಕೆ ನಾವು ಇನ್ನು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಗುತ್ತಿಗೆ ಮುಕ್ತಾಯ
ಈ ಬೆಳವಣಿಗೆಗಳ ನಡುವೆ ಸಂಬAಧಿಸಿದ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸುವAತೆ ಹಲವು ಬಾರಿ ಸೂಚಿಸಿದರೂ ಈ ರಸ್ತೆ ಕಾಮಗಾರಿ ಸಂಬAಧ ಗುತ್ತಿಗೆದಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಈಗಾಗಲೇ ಗುತ್ತಿಗೆದಾರರಿಗೆ ನೀಡಲಾಗಿದ್ದ ಟೆಂಡರ್ ಅನ್ನು ಮುಕ್ತಾಯಗೊಳಿಸಿ ಮರು ಟೆಂಡರ್ ಕರೆಯಲಾಗುವುದು. ಅಲ್ಲಿಯವರೆಗೂ ಈಗಿರುವ ರಸ್ತೆಯನ್ನು ನಿರ್ವಹಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಿರೀಶ್ ತಿಳಿಸಿದ್ದಾರೆ.