ಕುಶಾಲನಗರ, ಮೇ ೧೮; ಮಾದಾಪುರದ ಪ್ರಸಿದ್ಧ ಶ್ರೀಮತಿ ಡಿ ಚೆನ್ನಮ್ಮ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೨೦೦೩-೪ರ ಸಾಲಿನಲ್ಲಿ ೧೦ನೇ ತರಗತಿ ಮುಗಿಸಿ ಹೊರಬಂದಿದ್ದ ಹಳೇ ವಿದ್ಯಾರ್ಥಿಗಳು ೨೨ ವರ್ಷಗಳ ಒಂದಾಗಿ ಸೇರಿ ಗುರು ವಂದನೆ ಸಲ್ಲಿಸಿದರು.

ಶಿಕ್ಷಕರುಗಳಾದ ಶ್ರೀಧರ್ ಆರಾಧ್ಯ, ಶಂಕ್ರಯ್ಯ, ರೇವತಿ, ರಾಜಸುಂದರA, ಸವಿತಾ ರಾಜಸುಂದರA, ಸೋಮಯ್ಯ, ಸತೀಶ್, ಮಂಜುಳ ಶ್ರೀಧರ್ ಆರಾಧ್ಯ ಹಾಗೂ ಪಾಲಾಕ್ಷ ಅವರುಗಳು ಉಪಸ್ಥಿತರಿದ್ದು, ಶಿಷ್ಯರ ಗೌರವವನ್ನು ಸ್ವೀಕರಿಸಿದರು.

ಇದೇ ಸಂದರ್ಭ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಶಾಲಾ ದಿನಗಳನ್ನು ಹಳೆಯ ವಿದ್ಯಾರ್ಥಿಗಳು ಮೆಲುಕು ಹಾಕಿದರು.