ಮಡಿಕೇರಿ, ಮೇ ೧೭: ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಕ್ಕಬ್ಬೆಯ ಮಲ್ಮ ಹಾಕಿ ಕ್ಲಬ್ ವತಿಯಿಂದ ಹಾಕಿ ಕೂರ್ಗ್ನ ಸಹಯೋಗದಲ್ಲಿ ಜರುಗಿದ ಜಿಲ್ಲಾ ಹಾಕಿ ಲೀಗ್‌ನ ಟಾಪ್ ೮ ತಂಡಗಳ ಮಲ್ಮ ಕಪ್ ಹಾಕಿ ಪ್ರಶಸ್ತಿಯನ್ನು ಕೋಣನಕಟ್ಟೆ ಇಲವೆನ್ ತನ್ನದಾಗಿಸಿಕೊಂಡಿದೆ.

ಇAದು ನಡೆದ ಫೈನಲ್ ಪಂದ್ಯದಲ್ಲಿ ಕೋಣನಕಟ್ಟೆ ತಂಡ ಚಾರ್ಮರ್ಸ್ ಮಡಿಕೇರಿ ತಂಡವನ್ನು ೫-೩ ಗೋಲುಗಳಿಂದ ಪರಾಭವಗೊಳಿಸಿ ಪ್ರಶಸ್ತಿಗೆ ಭಾಜನವಾಯಿತು.

ವಿಜೇತ ತಂಡ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಪಡೆದರೆ, ರನ್ನರ್ಸ್ ಸ್ಥಾನ ಪಡೆದ ಚಾರ್ಮರ್ಸ್ ತಂಡ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ ಗಳಿಸಿತು. ವಿಜೇತ ತಂಡದ ಪರ ಅತಿಥಿ ಆಟಗಾರ ಅಂಕುರ್ ೩ ಹಾಗೂ ಮಂಡಚAಡ ಮಂಜುನಾಥ್ ಹಾಗೂ ಭರತ್ ತಲಾ ಒಂದೊAದು ಗೋಲು ಬಾರಿಸಿದರು. ಚಾರ್ಮರ್ಸ್ ಪರ ಯತೀಶ್ ೨ ಹಾಗೂ ಸೋಹನ್ ೧ ಗೋಲು ಗಳಿಸಿದರು.

ಸಮಾರೋಪ ಸಮಾರಂಭ

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಬಳಿಕ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮಲ್ಮ ಹಾಕಿ ಕ್ಲಬ್‌ನ ಅಧ್ಯಕ್ಷ ಮಾದಂಡ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದಾನಿ ಎಡಿಕೇರಿ ಪ್ರಸನ್ನ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್, ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ಯದರ್ಶಿ ಅಮ್ಮಂಡಿರ ಚೇತನ್, ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಅರೆಯಡ ಪವಿನ್ ಪೊನ್ನಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಅಂಜಪರವAಡ ಕುಶಾಲಪ್ಪ ಸ್ವಾಗತಿಸಿ, ಅಜ್ಜೆಟ್ಟಿರ ವಿಕ್ರಂ ವೀಕ್ಷಕ ವಿವರಣೆ ನೀಡಿ ನಿರೂಪಿಸಿ, ವಂದಿಸಿದರು.