ಕೂಡಿಗೆ, ಮೇ ೧೭: ಕೂಡಿಗೆ ಕ್ರೀಡಾ ಪ್ರೌಢಶಾಲೆಯಲ್ಲಿ ರೂ. ೩ ಕೋಟಿ ವೆಚ್ಚದಲ್ಲಿ ಹಾಕಿ ಮೈದಾನದ ಆಸ್ಟೊçÃಟರ್ಫ್ ಹೆಚ್ಚುವರಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಯುವಕ - ಯುವತಿಯರು ಕ್ರೀಡಾ ಶಾಲೆಗೆ ಆಯ್ಕೆಗೊಂಡ ನಂತರ ತಮ್ಮ ಸಾಮರ್ಥ್ಯವನ್ನು ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಪ್ರದರ್ಶಿಸುವ ಅವಕಾಶಕ್ಕೆ ಪೂರಕವಾಗಿ ರಾಷ್ಟಿçÃಯ ಕ್ರೀಡಾ ನಿಯಮಾನುಸಾರ ಇಂತಹ ಮೈದಾನದ ಅವಶ್ಯಕತೆಯಿದೆ. ಆದ್ದರಿಂದ ರಾಜ್ಯ ಸರ್ಕಾರದಿಂದ ಕ್ರೀಡಾ ಇಲಾಖೆಯ ನಿಯಮದಡಿಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಅಗಮಿಸಿದ್ದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಕ್ರೀಡಾ ಪ್ರತಿಭೆಗಳು ತಮ್ಮ ಬದುಕಿಗೆ ಪೂರಕವಾದ ಉದ್ಯೋಗವನ್ನು ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಸಚಿವರೆೆÆಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್, ಪದವಿಪೂರ್ವ ಕಾಲೇಜು ಉಪಾಧ್ಯಕ್ಷ ಸೋಮಶೇಖರ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಫಿಲೋಮಿನಾ, ಈರಪ್ಪ, ಚಂದ್ರ, ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್, ಕ್ರೀಡಾ ತರಬೇತುದಾರರಾದ ವೆಂಕಟೇಶ್, ದಿನಮಣಿ, ಸುರೇಶ್, ಗುತ್ತಿಗೆದಾರ ಮಂಜುನಾಥ, ಶಾಲಾ ಮುಖ್ಯೋಪಾಧ್ಯಾಯ ಅಶ್ವಿತ್, ಶಿಕ್ಷಕರ ವೃಂದ ಸೇರಿದಂತೆ ವಿವಿಧ ವಿಭಾಗದ ತರಬೇತುದಾರರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.