ಸೋಮವಾರಪೇಟೆ,ಮೇ.೧೭: ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಬೇಳೂರು ಬಾಣೆಗೆ ಸ್ಥಳೀಯ ಖಾಸಗಿ ಕ್ಲಬ್‌ಮೂಲಕ ಫೆನ್ಸಿಂಗ್ ಅಳವಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಇಂದು ಬೇಳೂರು ಬಾಣೆ ಸಂರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಸಭೆ ನಡೆಯಿತು.
ಪಟ್ಟಣದ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಸಂಘ ಸಂಸ್ಥೆಗಳ ಮುಖಂಡರು, ಖಾಸಗಿ ಕ್ಲಬ್‌ನಿಂದ ಅಳವಡಿಸಿರುವ ಅಕ್ರಮ ಬೇಲಿಯನ್ನು ತೆರವುಗೊಳಿಸುವವರೆಗೂ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಮನವಿ ಸಲ್ಲಿಕೆ, ಹೋರಾಟ, ಬೀಗ ಹಾಗೂ ಬೇಲಿ ತೆರವಿನ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಆರಂಭದಲ್ಲಿ ಮಾತನಾಡಿದ ಕಾಟ್ನಮನೆ ವಿಠಲ್ ಗೌಡ ಅವರು, ಸ್ಥಳೀಯ ಕ್ಲಬ್‌ಗೆ ಒಟ್ಟಾರೆಯಾಗಿ ೨೯.೫೦ ಏಕರೆ ಜಾಗವಿದ್ದರೂ, ಇದೀಗ ೫೦ ಏಕರೆಯಷ್ಟು ಜಾಗಕ್ಕೆ ಬೇಲಿ ಹಾಕಿದ್ದಾರೆ. ಇದರಲ್ಲಿ ಸರ್ಕಾರಿ ಪೈಸಾರಿ, ಕಡಂಗ, ೧೨ ಎಕರೆ ಮಠದ ಜಾಗ, ಊರುಡುವೆ, ಸಾರ್ವಜನಿಕ ರಸ್ತೆ ಸೇರಿದಂತೆ ೭ ಏಕರೆ ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ಜಾಗವೂ ಸೇರಿದೆ. ಕ್ಲಬ್‌ನವರು ಪ್ರಭಾವ ಬಳಸಿ ಎಲ್ಲಾ ಜಾಗವನ್ನೂ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದರು.
ಬೇಲಿ ಹಾಕಿರುವ ಕ್ರಮಕ್ಕೆ ಸಂಬAಧಿಸಿದAತೆ ಬೇಳೂರು ಗ್ರಾ.ಪಂ.ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಬಯಸಿದ ಸಂದರ್ಭ, ಬಾಣೆ ಜಾಗವನ್ನು ಸಂಪೂರ್ಣ ಸ್ವಾಧೀನಕ್ಕೆ ಗ್ರಾ.ಪಂ.ನಿAದ ಅನುಮತಿ ಕೊಟ್ಟಿಲ್ಲ. ಬೇಲಿ ಹಾಕಲೂ ಸಹ ಅನುಮತಿಯಿಲ್ಲ. ಸಾರ್ವಜನಿಕರಿಗೆ ಯಾವುದೇ ನಿರ್ಬಂಧವನ್ನೂ ಗ್ರಾ.ಪಂ.ನಿAದ ಹೇರಲಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ತಿಳಿಸಿದ್ದಾರೆ.
ಇದರೊಂದಿಗೆ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದಲೂ ಯಾವುದೇ ಅನುಮತಿಯನ್ನು ಪಡೆಯದೇ ಬೇಲಿ ನಿರ್ಮಿಸಲಾಗಿದ್ದು, ಇದು ಖಂಡನೀಯ. ತಕ್ಷಣ ಬೇಲಿ ತೆರವಿಗೆ ಹೋರಾಟ ಸಂಘಟಿಸಬೇಕೆAದರು.
ಮತ್ತೊAದು ಮನವಿಯನ್ನು ತಹಶೀಲ್ದಾರ್‌ಗೆ ನೀಡಿ, ವಾರದ ಗಡುವು ಕೊಟ್ಟು ಪ್ರತಿಭಟನೆ ನಡೆಸಬೇಕು. ಅದಾಗದಿದ್ದರೆ ಬೇಳೂರು ಬಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬೇಲಿ ತೆರವಿಗೆ ಕಾನೂನು ಪರಿಧಿಯೊಳಗೆ ಮುಂದಾಗಬೇಕಿದೆ ಎಂದು ವಿಠಲ್ ತಿಳಿಸಿದರು.
ಸಭೆಯಲ್ಲಿದ್ದ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಸ್ಥಳೀಯ ಗ್ರಾ.ಪಂ.ನಿAದ ಯಾವುದೇ ಪರವಾನಗಿ ಪಡೆಯದೆ ಬೇಲಿ ಹಾಕಿದ್ದರೂ ಸರ್ಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ. ಕುಂಬೂರಿನಲ್ಲಿ ಬಡವರು ನಿವೇಶನಕ್ಕೆ ಆಗ್ರಹಿಸಿ ೧೫ ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸಿಲ್ಲ. ಇಂತಹ ವ್ಯವಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.
ಪ್ರಮುಖರಾದ ಮಿಥುನ್ ಗೌಡ ಮಾತನಾಡಿ, ಸಾರ್ವಜನಿಕರನ್ನು ಹೊರಗೆ ಇಡುವ ಯತ್ನ ನಡೆದಿದೆ. ರಾಜ್ಯ ಸರ್ಕಾರದ ಸಚಿವರೋರ್ವರ ಒತ್ತಡ, ಸ್ಥಳೀಯ ನಾಯಕರ ಕೈವಾಡವೂ ಇದರಲ್ಲಿ ಅಡಗಿದೆ. ಬೇಳೂರು ಬಾಣೆ ಯಾವುದೇ ಒಂದು ರಾಜಕೀಯ ಪಕ್ಷ, ವ್ಯಕ್ತಿಗೆ ಸೀಮಿತವಾಗಿಲ್ಲ. ಬೇಳೂರು ಬಾಣೆ ಸರ್ಕಾರದ ಆಸ್ತಿ, ಈ ಜಾಗ ಈ ಹಿಂದಿನAತೆಯೇ ಉಳಿಯಬೇಕು. ಈಗ ಕ್ಲಬ್‌ನವರು ಅಕ್ರಮವಾಗಿ ಬೇಲಿ ನಿರ್ಮಿಸಿದ್ದಾರೆ. ಮೊದಲು ಸ್ಥಳೀಯರು ವಿರೋಧ ವ್ಯಕ್ತಪಡಿಸಬೇಕು. ಬೀಗ ತೆರವುಗೊಳಿಸಬೇಕು. ಈ ಸ್ಥಳ ಕ್ಲಬ್‌ಗೆ ಸೇರಿದ್ದಲ್ಲ ಎಂಬ ಫಲಕ ಅಳವಡಿಸಬೇಕು. ಬಾಣೆಯಲ್ಲಿ ನಡೆಯುವ ಅಕ್ರಮಗಳಿಗೆ ಸಮಿತಿಯಿಂದ ತಡೆಯೊಡ್ಡಬೇಕು ಎಂದರು.
ಸ್ಥಳೀಯರಾದ ದುದ್ದಯ್ಯ ಮಾತನಾಡಿ, ಆರಂಭದಲ್ಲಿ ಸ್ಥಳೀಯರಿಗೆ ತಪ್ಪು ಮಾಹಿತಿ ನೀಡಿ ಬೇಲಿ ಹಾಕಿದ್ದಾರೆ. ಗಾಲ್ಫ್ ಆಡುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ತಿಳಿಸಿದ್ದರು. ಆದರೆ ಇದೀಗ ಸಾರ್ವಜನಿಕರನ್ನು ಹೊರಗಿಟ್ಟು ಕೇವಲ ಕ್ಲಬ್‌ಗಾಗಿ ಮಾತ್ರ ಬೇಲಿ ಹಾಕಿರುವುದು ಸರಿಯಲ್ಲ ಎಂದರು.
ಹಣವAತರು, ಅಧಿಕಾರವಂತರು, ಬಲಾಡ್ಯರು ಸೇರಿರುವ ಸಂಸ್ಥೆಯಿAದ ದಬ್ಬಾಳಿಕೆ ನಡೆಯುತ್ತಿದೆ. ಬಡ ರೈತರ ಜಾಗವನ್ನು ತೆರವುಗೊಳಿಸುವ ಸರ್ಕಾರ ಇದೀಗ ಮೌನಕ್ಕೆ ಶರಣಾಗಿರುವುದು ಸಂಶಯ ತರಿಸಿದೆ. ಹೋರಾಟ ಅನಿವಾರ್ಯವಾಗಿದೆ ಎಂದು ಕರವೇ ನಗರಾಧ್ಯಕ್ಷ ಮಂಜುನಾಥ್ ಹೇಳಿದರು.
ಸರ್ಕಾರಿ ಭೂಮಿಗೆ ಬೇಲಿ ಹಾಕಿರುವುದನ್ನು ಸರ್ಕಾರವೇ ಪ್ರಶ್ನಿಸುತ್ತಿಲ್ಲ ಎಂದಾದರೆ ನಮ್ಮ ಆಡಳಿತ ಎಷ್ಟು ಜಡ್ಡು ಹಿಡಿದಿದೆ ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳೂ ಸಹ ಇವರೊಂದಿಗೆ ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಕರವೇ ಮುಖಂಡ ರವೀಶ್ ಹೇಳಿದರು.
ಬೇಳೂರು ಗ್ರಾಮಸ್ಥ ರಾಜು ಮಾತನಾಡಿ, ಬೇಲಿ ಹಾಕುವಾಗಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ಲಬ್ ಗೆ ಸೇರಿದ ಜಾಗಕ್ಕೆ ಬೇಲಿ ಹಾಕದೇ ಇಡೀ ಪೈಸಾರಿ, ಸರ್ಕಾರಿ ಜಾಗಕ್ಕೆ ಸೇರಿಸಿ ಬೇಲಿ ಹಾಕಿದ್ದಾರೆ. ಈ ಬಗ್ಗೆ ಸಮಿತಿಯ ಮೂಲಕ ಹೋರಾಟ ನಡೆಸಬೇಕಿದೆ ಎಂದರು.
ಅAತಿಮವಾಗಿ ತಾಲೂಕು ತಹಶೀಲ್ದಾರ್, ಸ್ಥಳೀಯ ಗ್ರಾ.ಪಂ.ಗೆ ಮನವಿ ಸಲ್ಲಿಸಿ, ವಾರದ ಗಡುವಿನೊಳಗೆ ಬೇಲಿ ತೆರವುಗೊಳಿಸದಿದ್ದರೆ ಬೇಳೂರು ಬಾಣೆ ಚಲೋ ಪ್ರತಿಭಟನಾ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹೋರಾಟವನ್ನು ಅಂತಿಮ ಘಟಕ್ಕೆ ಕೊಂಡೊಯ್ಯಲು ಪ್ರಮುಖರು ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಮುಖರಾದ ನಾಗರಾಜು, ಕಿರಗಂದೂರು ನಿತಿನ್, ಮಹಮ್ಮದ್ ಬೇಟು, ಕಲ್ಕಂದೂರು ಮಂಜುನಾಥ್, ಕಾಟ್ನಮನೆ ದಿವ್ಯ, ಸೋಮಶೇಖರ್, ವಸಂತ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ೫೦ಕ್ಕೂ ಅಧಿಕ ಮಂದಿ ಮುಖಂಡರು ಭಾಗಿಯಾಗಿದ್ದರು.