ಮಡಿಕೇರಿ,ಮೇ.೧೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಕುಟುಂಬವಾರು ಕ್ರೀಡಾ ಹಬ್ಬಕ್ಕೆ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕುಟುಂಬ-೨೦೨೬ ಕ್ರೀಡಾ ಹಬ್ಬದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯಾಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು; ಸುಮಾರು ೧೫ ದಿವಸಗಳ ಕಾಲ ಕ್ರೀಡಾ ಹಬ್ಬ ಆಚರಣೆ ಮಾಡುವದರ ಹಿಂದೆ ಶ್ರಮ ಹಾಗೂ ಶಿಸ್ತಿನ ಅವಶ್ಯಕತೆಯಿರುತ್ತದೆ. ಹಬ್ಬದ ರೀತಿಯಲ್ಲಿ ಆಚರಣೆ ಮಾಡುವದು ಸ್ವಾಗತಾರ್ಹ; ಕ್ರಿಕೆಟ್‌ನಲ್ಲಿ ೨೧೬ ಕುಟುಂಬಗಳು, ಹಾಕಿಯಲ್ಲಿ ೬೦ ಕುಟುಂಬಗಳು ಭಾಗವಹಿಸಿವೆ. ಇದರೊಂದಿಗೆ ಕೇರಂ, ಶೂಟಿಂಗ್, ಫ್ಯಾಶನ್ ಶೋ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಿರುವದು ಸಂತೋಷದ ವಿಷಯ. ಈ ಆಚರಣೆ ಶಾಶ್ವತವಾಗಿ ನಡೆಯಬೇಕು; ಹೆಚ್ಚಿಗೆ ಕುಟುಂಬ ತಂಡಗಳು ಭಾಗವಹಿಸಬೇಕು. ಎಲ್ಲಿಯವರೆಗೆ ಕ್ರೀಡೆ ನಡೆಸುತ್ತಾರೆಯೋ ಅಲ್ಲಿಯವರೆಗೆ ಸಹಕಾರ ನೀಡುವದಾಗಿ ಹೇಳಿದರು. ಈ ಹಿಂದೆ ಕ್ರೀಡಾಕೂಟಕ್ಕೆ ಸರಕಾರದಿಂದ ಅನುದಾನ ಸಿಗುತ್ತಿತ್ತು. ಕೆಲವು ವರ್ಷಗಳಿಂದ ನಿಂತು ಹೋಗಿದೆ. ಅನುದಾನ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಪ್ರಯತ್ನ ಯಶಸ್ಸಾಗುವ ನಿರೀಕ್ಷೆಯಿದೆ ಎಂದರು. ಬೇಸಿಗೆ ಆರಂಭವಾಗಿ ಮಳೆಗಾಲ ಆರಂಭವಾಗುವವರೆಗೂ ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತವೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳು ಅಂತರರಾಷ್ಟಿçÃಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭಾವಂತರಿದ್ದು, ಕ್ರೀಡೆಯಲ್ಲಿ ಆಸಕ್ತಿ, ಉತ್ಸಾಹ ತೋರಬೇಕು. ಇದು ಕ್ರೀಡಾ ಹಬ್ಬವಾದರೂ ಸ್ಪರ್ಧೆ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಬಂದು ಸೇರುವ ವಾತಾವರಣವೇ ಗೆಲುವು. ಎಲ್ಲರೂ ಸೇರಿ ಆನಂದಿಸುವ ವಾತಾವರಣ ಜಿಲ್ಲೆಗೆ ಮಾದರಿಯಾಗಿದೆ ಎಂದು ಅಭಿಪ್ರಾಯಿಸಿದರು.
ಕ್ರೀಡಾ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಿ
ಕರ್ನಾಟಕ ಕ್ರಿಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ; ಕೊಡಗು ಜಿಲ್ಲೆಯಲ್ಲಿ ಎಲ್ಲ ಜನಾಂಗದವರು ಕ್ರಿಡಾಕೂಟವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಆದರೆ ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಯಾವದೇ ಕ್ರೀಡಾ ನೋಂದಾಯಿತ ಅಸೋಸಿಯೇಷನ್‌ಗಳಿಲ್ಲ. ನೋಂದಾವಣೆಗೊAಡ ಅಸೋಸಿಯೇಷನ್‌ಗಳು ರಾಜ್ಯ ಕ್ರೀಡಾ ಅಸೋಸಿಯೇಷನ್‌ನ ಸದಸ್ಯತ್ವ ಹೊಂದಿರಲಿದ್ದು, ಸರಕಾರ ಅವುಗಳನ್ನು ಪರಿಗಣಿಸಿ ಅನುದಾನ ಒದಗಿಸುತ್ತದೆ. ಹಾಗಾಗಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ವಿವಿಧ ಸಮಾಜಗಳ ಕ್ರೀಡಾ ಅಸೋಸಿಯೇಷನ್‌ಗಳನ್ನು ನೋಂದಾವಣಿ ಮಾಡಿಸುವಂತೆ ಸೂಚನೆ ನೀಡಿರುವದಾಗಿ ಹೇಳಿದರು. ಕ್ರೀಡಾ ನೀತಿಯಲ್ಲೂ ಮಾರ್ಪಾಡು ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದು, ಶಾಸಕರುಗಳು ಕೂಡ ಕೈಜೋಡಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಧಿಕಾರದ ಮೂಲಕ ಮಾರ್ಪಾಡು ಮಾಡಿದರೆ ಅನುದಾನ ತರಲು ಸುಲಭವಾಗಲಿದೆ ಎಂದು ಹೇಳಿದರು.
ಸರಕಾರದಿಂದ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ, ಇಂತಹ ಕುಟುಂಬವಾರು ಕ್ರೀಡಾಕೂಟದಲ್ಲಿ ಆಡುವ ಕ್ರಿಡಾ ಪ್ರತಿಭೆಗಳು ಬಿಟ್ಟು ಹೋಗುತ್ತಿದ್ದಾರೆ. ಅಂತಹವರನ್ನು ಗುರುತಿಸಲು ಅಸೋಸಿಯೇಷನ್‌ಗಳ ನೋಂದಣಿ ಮುಖ್ಯ ಎಂದರು.
ಈಗಾಗಲೇ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟ್ರಾö್ಯಕ್ ನಿರ್ಮಾಣಕ್ಕೆ ೯ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಆಗಿದೆ. ಟ್ರಾö್ಯಕ್ ನಿರ್ಮಿಸಿದ ಬಳಿಕ ಕ್ರಿಕೆಟ್ ಆಡಲು ಸಮಸ್ಯೆ ಉಂಟಾಗಲಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಹಾಗಾಗಿ ಟ್ರಾö್ಯಕ್‌ನ ಒಳಭಾಗದಿಂದ ಚೈನ್‌ಲಿಂಕ್ ಅಳವಡಿಸುವಂತೆ ಕ್ರೀಡಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಕ್ರಿಕೆಟ್ ಆಡಲು ತೊಂದರೆ ಆಗುವದಿಲ್ಲ. ಇರುವ ಒಂದು ಕ್ರೀಡಾಂಗಣದ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವಂತೆ ಕೋರಿದರು.
ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಮಾಜಿ ಸೈನಿಕ ಚೆರಿಯಮನೆ ವಿಜಯ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಇದ್ದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.