ಮಡಿಕೇರಿ, ಮೇ ೧೬: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಹೆಚ್.ಕೆ. ಜೀವನ್ ಬರೆದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಿಂತನ ಧ್ವನಿ ಪುಸ್ತಕ ಹಾಗೂ ‘ಯಶಧರ’ ಕಾದಂಬರಿ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.

ಪುಸ್ತಕದ ಲೇಖಕ, ವಿದ್ಯಾರ್ಥಿ ಜೀವನ್ ಮಾತನಾಡಿ, ಯಶಧರ ಕಾದಂಬರಿ ಪ್ರೀತಿ, ಅಪರಾಧ, ವೈಜ್ಞಾನಿಕ ಸೇರಿದಂತೆ ವಿವಿಧ ಕಥೆಗಳನ್ನು ಹೊಂದಿರುವ ಕೌತುಕಭರಿತ ಪುಸ್ತಕವಾಗಿದೆ. ಇದರೊಂದಿಗೆ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸ್ಟೂಟೆಂಡ್ ವೆಂಚರ್ಸ್ ನವೋದ್ಯಮದ ಅಡಿಯಲ್ಲಿ ಚಿಂತನಾ ಧ್ವನಿ ಒಳಪ್ರಪಂಚಕ್ಕೊAದು ಕಿರುಹಾದಿ ಎಂಬ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಪುಸ್ತಕವನ್ನು ರಚಿಸಿದ್ದೇನೆ. ವಾಣಿಜ್ಯ ಶಾಸ್ತç ವಿಭಾಗದ ಪ್ರಾಧ್ಯಾಪಕರ ಉತ್ತೇಜನದಿಂದ ಈ ಪುಸ್ತಕವನ್ನು ಹೊರತಂದಿದ್ದು, ಮನುಷ್ಯ ಸಕಾರಾತ್ಮಕವಾಗಿ ಬದುಕಲು ಪುಸ್ತಕ ಸಹಾಯ ಮಾಡುತ್ತದೆ. ಡೈರಿ ಮಾದರಿಯಲ್ಲಿ ಈ ಪುಸ್ತಕ ಇರಲಿದೆ. ಜೀವನದ ಪ್ರಶ್ನೆಗಳನ್ನು ಒಳಗೊಂಡಿದ್ದು, ಇದನ್ನು ಭರ್ತಿ ಮಾಡುವ ಮೂಲಕ ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ದೀಕ್ಷಿತಾ ವರ್ಕಾಡಿ ಮಾತನಾಡಿ, ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸ್ಟೂಡೆಂಟ್ಸ್ ವೆಂರ‍್ಸ್ ಅನ್ನು ಆರಂಭಿಸಲಾಗಿದೆ. ಇದರ ಆರಂಭಿಕವಾಗಿ ಪುಸ್ತಕವನ್ನು ತಯಾರಿಸಿ ಬಿಡುಗಡೆಗೊಳಿಸಲಾಗಿದೆ. ಎಐ ಯುಗದಲ್ಲಿ ಓದುವ ಅಭ್ಯಾಸ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಮೂಡಿಸಿ ಸ್ವಾವಲಂಬಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಯುವ ಉದ್ಯಮಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮಕ್ಕಳ ಕಥಾ ಪುಸ್ತಕವನ್ನು ಹೊರತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

‘ಕ್ರೌಂಡ್ ಫಂಡಿAಗ್’ ರೀತಿಯಲ್ಲಿ ಹಣವನ್ನು ಸಂಗ್ರಹಿಸಿ ರೂ. ೨.೧೫ ಲಕ್ಷ ಮೊತ್ತದಲ್ಲಿ ಚಿಂತನಾ ಧ್ವನಿ ಎಂಬ ಗುಣಮಟ್ಟಯುಕ್ತ ಪುಸ್ತಕವನ್ನು ಹೊರತರಲಾಗಿದೆ. ಇಲ್ಲಿ ನೀಡಿರುವ ಸಿದ್ಧತಂತ್ರಗಳನ್ನು ಪಾಲಿಸಿದರೆ ವಿಚಾರ, ಕನಸುಗಳು ಈಡೇಡಿಸಿಕೊಳ್ಳಬಹುದಾಗಿದೆ. ಅಟೇಮಿಕ್ ಹ್ಯಾಬಿಟ್ಸ್ನಂತಹ ಪುಸ್ತಕಗಳ ಸಾರಾಂಶವನ್ನು ಕೂಡ ನೀಡಲಾಗಿದೆ ಎಂದು ಹೇಳಿದರು.

ಐಕ್ಯೂಎಸಿ ಸಂಚಾಲಕಿ ಡಾ. ಅನುಪಮ ಸಭಾಪತಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿ ಜೀವನ್ ವಿರಚಿತ ಪುಸ್ತಕಗಳು ಲೋಕಾರ್ಪಣೆಗೊಂಡಿದ್ದು, ಓದುಗರು ಬೆಂಬಲಿಸಬೇಕು. ಇದರೊಂದಿಗೆ ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಕೆಲಸವನ್ನು ಕಾಲೇಜಿನಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಟಿ.ಎಂ. ಸುಧಾಕರ್, ನವೀನ್ ಕುಮಾರ್, ಇ. ಸುಪ್ರಿಯಾ ಹಾಜರಿದ್ದರು.