೫ ರಿಂದ ೧೦ನೇ ತರಗತಿವರೆಗೆ ಹಿಂದೂ ಸಮಾಜದ ಗಂಡು ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ಕರುಣಾಶ್ರಯ ವತಿಯಿಂದ ಕಲ್ಪಿಸಲಾಗಿದೆ. ಬಡತನದಲ್ಲಿರುವ ಪೋಷಕರು ತಮ್ಮ ಮಕ್ಕಳಿಗೆ ವಾಸವಿ ಕರುಣಾಶ್ರಯದ ಮೂಲಕ ಉಚಿತ ಶಿಕ್ಷಣ ನೀಡಬಹುದಾಗಿದೆ.

ಹುಣಸೂರು ನಗರದಲ್ಲಿನ ವಾಸವಿ ಕರುಣಾಶ್ರಯದಲ್ಲಿ ಹಿಂದೂ ಸಮಾಜದ ಗಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ: ೯೬೬೩೯೦೦೪೩೯, ೬೩೬೨೭೪೪೬೧೯ ಅನ್ನು ಸಂಪರ್ಕಿಸಬಹುದು.