ನಾಪೋಕ್ಲು, ಮೇ ೧೬: ಹೊಸಕೋಟೆ ಗ್ರಾಮದ ಗೋಷಿಕ್ ಬಿ.ಎಸ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ೨೦೨೬ರ ಐಬಿಆರ್ ಸಾಧಕ ಗೌರವಕ್ಕೆ ಪಾತ್ರನಾಗಿದ್ದಾನೆ. ವೀರಾಜಪೇಟೆ ತಾಲೂಕು ಹೊಸಕೋಟೆ ಗ್ರಾಮದ ಬಾರಿಕೆ ಶ್ರೀಕಾಂತ್ ಹಾಗೂ ದಿವ್ಯಜೋತಿ ಅವರ ಪುತ್ರ ೨ ವರ್ಷ ೫ ತಿಂಗಳ ವಯಸ್ಸಿನ ಗೋಷಿಕ್, ೮ ಹಣ್ಣುಗಳು, ೫ ತರಕಾರಿಗಳು, ೭ ಪಕ್ಷಿಗಳು, ೭ ಸಾಕು ಪ್ರಾಣಿಗಳು, ೫ ಕಾಡು ಪ್ರಾಣಿಗಳು, ೪ ಜಲಚರ ಪ್ರಾಣಿಗಳು, ೩ ಕೀಟಗಳು, ೧೦ ವಾಹನಗಳು, ದೇಹದ ೧೨ ಅಂಗಗಳು, ೩ ಸರಿಸೃಪಗಳು, ೧೦ ಕ್ರಿಯೆಗಳು ಹಾಗೂ ೧೬ ಉಡುಪುಗಳ ಹೆಸರನ್ನು ಗುರುತಿಸಿ ಹೇಳಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ೨೦೨೬ರ ಐಬಿಆರ್ ಸಾಧಕ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ.