ಮಡಿಕೇರಿ, ಮೇ ೧೬: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯವರಾದ ಕಂಡ್ರತAಡ ನಿತಿನ್ ಕುಟ್ಟಪ್ಪ ಅವರು ಇದೀಗ ಬ್ರಿಗೇಡಿಯರ್ ಆಗಿ ನೇಮಕಗೊಂಡಿದ್ದಾರೆ.
ಈತನಕ ಕರ್ನಲ್ ರ್ಯಾಂಕ್ನಲ್ಲಿದ್ದ ಇವರು ಇದೀಗ ಪದೋನ್ನತಿ ಹೊಂದಿದ್ದು, ಬ್ರಿಗೇಡಿಯರ್ ಆಗಿ ಜಮ್ಮು ಕಾಶ್ಮೀರಕ್ಕೆ ನಿಯೋಜಿತರಾಗಿದ್ದು, ಅಧಿಕಾರ ವಹಿಸಿ ಕೊಂಡಿದ್ದಾರೆ.
೨೧ನೇ ಮೆಡ್ರಾಸ್ ರೆಜಿಮೆಂಟ್ನಲ್ಲಿ ನಿತಿನ್ ಕುಟ್ಟಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಜಿಲ್ಲೆಯ ಅರಮೇರಿಯ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಸ್.ಬಿ.ಐ.ನ ನಿವೃತ್ತ ಅಧಿಕಾರಿ ಕಂಡ್ರತAಡ ಎಂ. ಮುತ್ತಣ್ಣ (ಕಂಠಿ) ಹಾಗೂ ಪುಷ್ಪ ಮುತ್ತಣ್ಣ (ತಾಮನೆ-ಕೋಣೇರಿರ) ದಂಪತಿಯ ಪುತ್ರ. ಪತ್ನಿ ಮಾಯಾ ಕುಟ್ಟಪ್ಪ ಹಾಗೂ ಪುತ್ರ ಇದ್ದಾರೆ.