ಮಡಿಕೇರಿ, ಮೇ ೧೬: ಸೌತ್ ಏಷ್ಯಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್, ಶ್ರೀರಾಮ ವ್ಯಾಯಾಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಸೌತ್ ಇಂಡಿಯಾ ಗರಡಿ ಕ್ಲಾಸಿಕ್ಸ್-೨೦೨೬ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನೆಲ್ಯಹುದಿಕೇರಿ ಗ್ರಾಮದ ನೌಫಲ್-ನಸೀಮ ದಂಪತಿ ಪುತ್ರ ಮೊಹಮ್ಮದ್ ನಬ್ ಹಾನ್ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.