ಮಡಿಕೇರಿ, ಮೇ ೧೫: ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕ ಇರುವ ಹಿನ್ನೆಲೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಪೊಲೀಸ್ ಇಲಾಖೆಯಿಂದ ಒದಗಿಸುವ ಬೆಂಗಾವಲು ಪಡೆಯ ವಾಹನವನ್ನು ಹಿಂಪಡೆಯುವAತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ತೈಲ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದ್ದು, ಪರಿಸರ ಮಾಲಿನ್ಯ ತಡೆಗಟ್ಟುವ ಸಂಬAಧ, ದೇಶದಲ್ಲಿ ನಿರ್ಮಾಣವಾಗಿರುವ ಆತಂಕದ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪೊನ್ನಣ್ಣ ಅವರು ತೆಗೆದುಕೊಂಡಿದ್ದಾರೆ. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಈಗಾಗಲೇ ತಳಬಿಕ್ಕಟ್ಟು ಎದುರಾಗುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸುಳಿವು ನೀಡಿದ್ದು, ತಮ್ಮ ಬೆಂಗಾವಲು ಪಡೆಯನ್ನು ಶೇ ೫೦ರಷ್ಟು ಇಳಿಸಿದ್ದಾರೆ. ನ್ಯಾಯಾಧೀಶರು ವಾಹನ ಬಿಟ್ಟು ಸೈಕಲ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ಉದಾಹರಣೆಗಳು ಇವೆ. ಸಚಿವರುಗಳು ಕೂಡ ತಮ್ಮ ಬೆಂಗಾವಲು ವಾಹನಗಳನ್ನು ಹಿಂಪಡೆಯುತ್ತಿದ್ದಾರೆ.