ಮಡಿಕೇರಿ, ಮೇ ೧೫: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆದ ೫ ಎ ಸೈಡ್ ಹಾಕಿ ಹಬ್ಬದಲ್ಲಿ ಕುಂಬಗೌಡನ ಕುಟುಂಬ ತಂಡ ಪ್ರಥಮ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ತಾ. ೧೪ರಂದು ನಡೆದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಕುಂಬಗೌಡನ ತಂಡ ಮೇರ್ಕಜೆ ತಂಡವನ್ನು ೬-೩ ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಕುಂಬಗೌಡನ ಪರ ರಾಷ್ಟಿçÃಯ ಜೂನಿಯರ್ ಹಾಕಿ ತಂಡದ ನಾಯಕನಾಗಿದ್ದ ವಿಶ್ವಜಿತ್(ಪ್ರೀತಂ) ದಾಖಲೆಯ ೫ ಗೋಲು ಬಾರಿಸಿದರೆ, ಹಿರಿಯ ಆಟಗಾರ ಸೋಮಣ್ಣ ೨ ಗೋಲು ಬಾರಿಸಿದರು. ಮೇರ್ಕಜೆ ತಂಡದ ಪರವಾಗಿ ರೈಲ್ವೇಸ್ ಆಟಗಾರ ಗಿರೀಶ್ ೨ ಹಾಗೂ ಹಿರಿಯ ಆಟಗಾರ ಸುಗುಣ ೧ ಗೋಲು ಬಾರಿಸಿದರು.
ಮೂರನೇ ಸ್ಥಾನಕ್ಕಾಗಿ ಸೆಮಿಫೈನಲ್ಗೆ ಬಂದು ಸೋಲನುಭವಿಸಿದ ಬೊಳ್ಳೂರು ಹಾಗೂ ಕಲ್ಲುಮುಟ್ಲು ತಂಡಗಳ ನಡುವೆ ಪಂದ್ಯಾವಳಿ ನಡೆಯಿತು. ಇದರಲ್ಲಿ ಕಲ್ಲುಮುಟ್ಲು ತಂಡ ೫-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕಲ್ಲುಮುಟ್ಲು ಪರ ಕವನ್ ೩, ನಿಶಿಕ್ ೨ ಗೋಲು ಬಾರಿಸಿದರು. ಬೊಳ್ಳೂರು ಪರ ಕಮಲ್ ಹಾಗೂ ದಿಲನ್ ತಲಾ ಒಂದು ಗೋಲು ದಾಖಲಿಸಿದರು.
ಕ್ವಾರ್ಟರ್ ಫೈನಲ್
ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಬೊಳ್ಳೂರು ತಂಡ ಮರದಾಳು ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿ ಸೆಮಿಫೈನಲ್ಗೆ ಪ್ರವೇಶಿಸಿತು. ಬೊಳ್ಳೂರು ಪರ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಮಲ್ ೨, ಗಗನ್ ೧ ಗೋಲು ಬಾರಿಸಿದರೆ, ಮರದಾಳು ಪರ ಭವನ್ ಏಕೈಕ ಗೋಲು ಹೊಡೆದರು. ಪೊನ್ನಚನ ಹಾಗೂ ಮೇರ್ಕಜೆ ತಂಡಗಳ ನಡುವಿನ ಪಂದ್ಯದಲ್ಲಿ ಮೇರ್ಕಜೆ ೪-೩ ಗೋಲುಗಳಿಂದ ಜಯಗಳಿಸಿತು. ಮೇರ್ಕಜೆ ಪರ ಗಿರೀಶ್ ಹಾಗೂ ಸುಗುಣ ತಲಾ ೨ ಗೋಲು ಬಾರಿಸಿದರೆ, ಪೊನ್ನಚನ ಪರ ರೋಹಿತ್ ೨, ಪ್ರಶಾಂತ್ ೧ ಗೋಲು ಹೊಡೆದರು.
ಕುಂಬನ ಹಾಗೂ ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ೪-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕಲ್ಲುಮುಟ್ಲು ಪರ ಕವನ್ ೨, ಪ್ರಜ್ವಲ್ ಹಾಗೂ ಭವನ್ ತಲಾ ಒಂದು ಗೋಲು ಬಾರಿಸಿದರೆ, ಕುಂಬನ ಪರ ಡಿವೈಎಸ್ ಆಟಗಾರ ಆಕಾಶ್ ಏಕೈಕ ಗೋಲು ಹೊಡೆದರು. ಕುಂಬಗೌಡನ ಹಾಗೂ ಆನೇರ ತಂಡಗಳ ನಡುವಿನ ಪಂದ್ಯದಲ್ಲಿ ಕುಂಬಗೌಡನ ೩-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕುಂಬಗೌಡನ ಪರ ಪ್ರೀತಂ ೨, ಸೋಮಣ್ಣ ೧ ಗೋಲು ಬಾರಿಸಿದರೆ, ಆನೇರ ಪರ ಮನೋಜ್ ಹಾಗೂ ಧವನ್ ಗೋಲು ಹೊಡೆದರು.
ಸೆಮಿಫೈನಲ್
ನಂತರ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮೇರ್ಕಜೆ ತಂಡ ೪-೩ ಗೋಲುಗಳಿಂದ ಬೊಳ್ಳೂರು ತಂಡವನ್ನು ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾಟ ೨-೨ ಗೋಲುಗಳಿಂದ ಸಮನಾಂತರ ಕಂಡಿತು. ಈ ಸಂದರ್ಭದಲ್ಲಿ ಪೆನಾಲ್ಟಿ ಸ್ಟೊçÃಕ್ ನೀಡಲಾಗಿ ಅದರಲ್ಲಿ ಮೇರ್ಕಜೆ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಮೇರ್ಕಜೆ ಪರ ಗಿರೀಶ್ ೪ ಗೋಲು ಬಾರಿಸಿದರು. ಬೊಳ್ಳೂರು ಪರ ಕಮಲ್ ೨, ತೀರ್ಥ ೧ ಗೋಲು ಹೊಡೆದರು.
ಮತ್ತೊಂದು ಸೆಮಿಫೈನಲ್ನಲ್ಲಿ ಕುಂಬಗೌಡನ ತಂಡ ಕಲ್ಲುಮುಟ್ಲು ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಫೈನಲ್ ಪ್ರವೇಶಿಸಿತು. ಕುಂಬಗೌಡನ ಪರ ಪ್ರೀತಂ ೨, ಭರತ್ ೧ ಗೋಲು ಬಾರಿಸಿದರೆ, ಕಲ್ಲುಮುಟ್ಲು ಪರ ಪ್ರಜ್ವಲ್ ಹಾಗೂ ಕವನ್ ಗೋಲು ಹೊಡೆದರು. ಕಟ್ಟೆಮನೆ ಸೋನಾಜಿತ್ ಹಾಗೂ ಚೋಂಡಿರ ಲಿಖಿತ್ ವೀಕ್ಷಕ ವಿವರಣೆ ನೀಡಿದರು. ವಿಜೇತ ತಂಡಗಳಿಗೆ ತಾ.೧೬ರಂದು( ಇಂದು) ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವದು.