ಮಡಿಕೇರಿ, ಮೇ ೧೫: ಕಕ್ಕಬೆಯ ಮಲ್ಮ ಹಾಕಿ ಕ್ಲಬ್ ಇದೇ ಪ್ರಥಮ ಬಾರಿಗೆ ಹಾಕಿ ಕೂರ್ಗ್ನ ಸಹಯೋಗದಲ್ಲಿ ಹಾಕಿ ಕೂರ್ಗ್ ಜಿಲ್ಲಾ ಹಾಕಿ ಲೀಗ್‌ನಲ್ಲಿ ಟಾಪ್ ೮ ಸ್ಥಾನ ಪಡೆದಿರುವ ಜಿಲ್ಲೆಯ ೮ ಹಾಕಿ ಕ್ಲಬ್‌ಗಳನ್ನು ಒಳಗೊಂಡAತೆ ಮಲ್ಮ ಕಪ್ ಹಾಕಿ ಪಂದ್ಯಾವಳಿ ಆಯೋಜಿಸಿದೆ.
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಯಿತು. ಮಾದಂಡ ಸಂದೇಶ್ ಅಪ್ಪಯ್ಯ ಹಾಗೂ ಚೋಯಮಾಡಂಡ ಚಂಗಪ್ಪ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭ ಮಲ್ಮ ಹಾಕಿ ಕ್ಲಬ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಒAದು ತಂಡದ ಪರ ವೃತ್ತಿ ಪರ ಆಟಗಾರರಾಗಿರುವ ಮೂವರು ಹಾಗೂ ಹಾಕಿ ಕೂರ್ಗ್ನ ಲೀಗ್‌ನಲ್ಲಿ ಆಡಿರುವ ಇತರ ತಂಡಗಳ ಇಬ್ಬರನ್ನು ಅತಿಥಿ ಆಟಗಾರರನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಪಂದ್ಯಾವಳಿ ರೋಚಕವಾಗಿದೆ.
ವಿಜೇತ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಮತ್ತು ರನ್ನರ್ಸ್ ತಂಡಕ್ಕೆ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನ ನೀಡಲಾಗುವುದು. ಫೈನಲ್ ಪಂದ್ಯಾಟ ತಾ. ೧೭ ರಂದು ಜರುಗಲಿದೆ. ಶಾಸಕ ಪೊನ್ನಣ್ಣ, ಹಾಕಿ ಕೂರ್ಗ್ನ ಪ್ರಮುಖರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ಜಿಲ್ಲಾ ಹಾಕಿ ಲೀಗ್‌ನ ಟಾಪ್ ೮ ತಂಡಗಳಾದ ಚಾರ್ಮರ್ಸ್ ಮಡಿಕೇರಿ, ಬಲಂಬೇರಿ, ಡಾಲ್ಫಿನ್ಸ್ ಸೋಮವಾರಪೇಟೆ, ರಾಯಲ್ಸ್ ಅಮ್ಮತ್ತಿ, ಬಿಬಿಸಿ ಗೋಣಿಕೊಪ್ಪಲು, ಯುಎಸ್‌ಎ ಬೇರಳಿನಾಡ್, ಬೊಟ್ಯತ್‌ನಾಡ್ ಕುಂದ ಹಾಗೂ ಕೋಣನಕಟ್ಟೆ ಇಲವೆನ್ ತಂಡಗಳು ಪಾಲ್ಗೊಂಡಿವೆ.
ಫಲಿತಾAಶ
ಇಂದು ನಡೆದ ಪಂದ್ಯಾವಳಿಯಲ್ಲಿ ಚಾರ್ಮರ್ಸ್ ಮಡಿಕೇರಿ ತಂಡ ೩-೨ ಗೋಲಿನಿಂದ ಬಲಂಬೇರಿ ತಂಡವನ್ನು ಕೋಣನಕಟ್ಟೆ ಇಲವೆನ್ ೫-೨ ಗೋಲಿನಿಂದ ಬಿಬಿಸಿ ಗೋಣಿಕೊಪ್ಪಲು ತಂಡವನ್ನು ಸೋಲಿಸಿತು. ರಾಯಲ್ಸ್ ಅಮ್ಮತ್ತಿ ತಂಡ ಶೂಟೌಟ್‌ನಲ್ಲಿ ಬೊಟ್ಯತ್‌ನಾಡ್ ಕುಂದ ತಂಡವನ್ನು ಒಟ್ಟು ೪-೨ ಗೋಲಿನಿಂದ ಪರಾಭವಗೊಳಿಸಿತು. ಬೇರಳಿನಾಡು ತಂಡ ಬಾರದ್ದರಿಂದ ಡಾಲ್ಫಿನ್ಸ್ ವಾಕ್ ಓವರ್ ಮೂಲಕ ಮುನ್ನಡೆ ಪಡೆಯಿತು.