ಮಡಿಕೇರಿ, ಮೇ ೧೫; ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಹಬ್ಬ ‘ಕುಟುಂಬ-೨೦೨೬’ ರ ಅಂತಿಮ ಪಂದ್ಯಾವಳಿ ತಾ.೧೬ರಂದು(ಇAದು) ನಡೆಯಲಿದೆ. ಈಗಾಗಲೇ ಕುಡೆಕಲ್ಲು, ಎಡಿಕೇರಿ, ಚೆರಿಯಮನೆ, ಪರ್ಲಕೋಟಿ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಎಡಿಕೇರಿ ತಂಡ ನಿಗದಿತ ೫ ಓವರ್‌ನಲ್ಲಿ ೪ ವಿಕೆಟ್‌ಗೆ ೬೫ ರನ್ ಗಳಿಸಿತು. ಪಟ್ಟಡ ತಂಡ ೨ ವಿಕೆಟ್ ಕಳೆದುಕೊಂಡು ೪೩ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಎಡಿಕೇರಿ ಮನೋಜ್ ೫ ಸಿಕ್ಸರ್, ೧ ಬೌಂಡರಿ ಸಹಿತ ೩೫ ರನ್ ಗಳಿಸಿ ಗಮನ ಸೆಳೆದರು. ಉಳುವಾರನ ತಂಡ ೧ ವಿಕೆಟ್‌ಗೆ ೫೩ ರನ್ ಗಳಿಸಿದರೆ, ಕೀಜನ ತಂಡ ೪ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.ಕೀಜನ ಪಿಂಕು ಯತಿ ೧೨ ಎಸೆತದಲ್ಲಿ ೫ ಸಿಕ್ಸರ್ ಸಹಿತ ಔಟಾಗದೇ ೩೫ ರನ್ ಗಳಿಸಿ ಗಮನ ಸೆಳೆದರು.

ಪರ್ಲಕೋಟಿ ತಂಡ ೨ ವಿಕೆಟ್‌ಗೆ ೮೧ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಹುಲಿಮನೆ ತಂಡ ೩ ವಿಕೆಟ್ ಕಳೆದುಕೊಂಡು ೩೭ ರನ್ ಮಾತ್ರ ಗಳಿಸಿ ೪೪ ರನ್‌ಗಳ ಅಂತರದಿAದ ಸೋಲನುಭವಿಸಿತು. ಪರ್ಲಕೋಟಿ ಸಜನ್ ೩ ಸಿಕ್ಸರ್, ೩ ಬೌಂಡರಿ ಸಹಿತ ೩೮ ರನ್ ಬಾರಿಸಿದರು. ಬೊಳ್ಳುಮಾಣಿ ತಂಡ ೪ ವಿಕೆಟ್‌ಗೆ ೫೨ ರನ್ ಗಳಿಸಿದರೆ, ತೆಕ್ಕಡೆ ತಂಡ ೨ ವಿಕೆಟ್ ನಷ್ಟದಲ್ಲಿ ೫೮ ರನ್ ಗಳಿಸಿ ಗೆಲುವು ಸಾಧಿಸಿತು. ತೆಕ್ಕಡೆ ಪರ ಹರೀಶ್ ೨ ವಿಕೆಟ್ ಕಬಳಿಸಿದರು.ಚೋಂಡಿರ ೩ ವಿಕೆಟ್‌ಗೆ ೫೩ ರನ್ ಗಳಿಸಿದರೆ, ಕೂಡಕಂಡಿ ೩.೨ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿ ಗೆಲುವು ಸಾಧಿಸಿತು.ಚೇತನ್ ಕೂಡಕಂಡಿ ೧೦ ಎಸೆತದಲ್ಲಿ೫ ಸಿಕ್ಸರ್‌ಗಳ ನೆರವಿನೊಂದಿಗೆ ಔಟಾಗದೆ ೩೧ ರನ್ ಬಾರಿಸಿದರು.

ಚೆರಿಯಮನೆ ತಂಡ ೩ ವಿಕೆಟ್‌ಗೆ ೬೪ ರನ್ ಗಳಿಸಿದರೆ, ಚೆಟ್ಟಿಮಾಡ ತಂಡ ೧ ವಿಕೆಟ್ ಕಳೆದುಕೊಂಡು ೫೨ ರನ್ ಮಾತ್ರ ಗಳಿಸಿ ೧೨ ರನ್‌ಗಳ ಅಂತರದಿAದ ಸೋಲನುಭವಿಸಿತು. ಕೇಶವ್ ಚೆರಿಯಮನೆ ೬ ಸಿಕ್ಸರ್, ೧ ಬೌಂಡರಿ ಸಹಿತ ೪೫ ರನ್ ಬಾರಿಸಿದರು. ಕುಡೆಕಲ್ಲು ತಂಡ ೧ ವಿಕೆಟ್‌ಗೆ ೬೦ ರನ್ ಗಳಿಸಿದರೆ, ಬೈಮನ ತಂಡ ೩ ವಿಕೆಟ್ ಕಳೆದುಕೊಂಡು ೫೩ ರನ್ ಮಾತ್ರ ಗಳಿಸಿ ೭ ರನ್‌ಗಳ ಅಂತರದಿAದ ಸೋಲನುಭವಿಸಿತು. ಕಾರ್ತಿಕ್ ಕುಡೆಕಲ್ಲು ೪ ಸಿಕ್ಸರ್, ೧ ಬೌಂಡರಿ ಸಹಿತ ಔಟಾಗದೆ ೩೩ ರನ್ ಬಾರಿಸಿದರು.

ಕಡ್ಲೇರ ತಂಡ ೮ ವಿಕೆಟ್‌ಗೆ ೪೭ ರನ್ ಗಳಿಸಿದರೆ, ಪಡ್ಪು ಮನೆ ತಂಡ ೪ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೯ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಡ್ಪು ಸಚಿನ್ ೩ ವಿಕೆಟ್ ಕಬಳಿಸಿದರು.

ನಂತರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೀಜನ ತಂಡ ನಿಗದಿತ ೬ ಓವರ್‌ನಲ್ಲಿ ೫ ವಿಕೆಟ್‌ಗೆ ೫೫ ರನ್ ಗಳಿಸಿದರೆ, ಎಡಿಕೇರಿ ತಂಡ ೪.೫ ಓವರ್‌ನಲ್ಲಿ ಯಾವದೇ ವಿಕೆಟ್ ನಷ್ಟವಿಲ್ಲದೆ೫೮ ರನ್ ಗಳಿಸಿ ಗೆಲುವು ಸಾಧಿಸಿತು. ಎಡಿಕೇರಿ ಮನೋಜ್ ೩ ಸಿಕ್ಸರ್ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಹಿತ ಔಟಾಗದೆ ೨೦ ರನ್ ಬಾರಿಸಿದರು. ಪರ್ಲಕೋಟಿ ತಂಡ ೩ ವಿಕೆಟ್‌ಗೆ ೫೭ ರನ್ ಗಳಿಸಿದರೆ, ತೆಕ್ಕಡೆ ತಂಡ ೫.೨ ಓವರ್‌ನಲ್ಲಿ ೮ ವಿಕೆಟ್ ಕಳೆದುಕೊಂಡು ೪೪ ರನ್ ಮಾತ್ರ ಗಳಿಸಿ೧೩ ರನ್‌ಗಳ ಅಂತರದಿAದ ಸೋಲನುಭವಿಸಿತು. ಪರ್ಲಕೋಟಿ ಸಜನ್ ೨ ಸಿಕ್ಸರ್ ಸಹಿತ ಔಟಾಗದೆ ೧೯ ರನ್ ಬಾರಿಸಿದರು. ಚೆರಿಯಮನೆ ತಂಡ ೬ ವಿಕೆಟ್‌ಗೆ ೬೫ ರನ್ ಗಳಿಸಿದರೆ, ಕೂಡಕಂಡಿ ತಂಡ ೨ ವಿಕೆಟ್ ಕಳೆದುಕೊಂಡು೫೪ ರನ್ ಗಳಿಸಿ ೧೧ ರನ್‌ಗಳ ಅಂತರದಿAದ ಸೋಲನುಭವಿಸಿತು. ಚೆರಿಯಮನೆ ಅರುಣ್ ೬ ಸಿಕ್ಸರ್ ಸಹಿತ ಔಟಾಗದೇ ೩೯ ರನ್ ಬಾರಿಸಿದರು. ಕುಡೆಕಲ್ಲು ತಂಡ ೧ ವಿಕೆಟ್‌ಗೆ ೭೫ ರನ್ ಬಾರಿಸಿದರೆ, ಪಡ್ಪು ಮನೆ ತಂಡ ೫ ವಿಕೆಟ್ ಕಳೆದುಕೊಂಡು ೬೮ ರನ್ ಗಳಿಸಿ ೭ ರನ್‌ಗಳ ಅಂತರದಿAದ ಸೊಲನುಭವಿಸಿತು. ಕಾರ್ತಿಕ್ ಕುಡೆಕಲ್ಲು ೪ ಸಿಕ್ಸರ್ ಸಹಿತ ಔಟಾಗದೇ ೩೦ ರನ್ ಬಾರಿಸಿದರು.

ಸಮಾರೋಪ-ಬಹುಮಾನ ವಿತರಣೆ

ಕುಟುಂಬ-೨೦೨೬ ಕ್ರೀಡಾ ಹಬ್ಬದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ತಾ.೧೬ರಂದು(ಇAದು) ಮಧ್ಯಾಹ್ನ ೩ ಗಂಟೆಗೆ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ನಗರ ಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಪೈಕೆರ ಮನೋಹರ್ ಮಾದಪ್ಪ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಭಾರತ ಮಹಿಳಾ ಹಾಕಿ ತಂಡದ ತರಬೇತುದಾರರಾದ ಹೊನ್ನಂಪಾಡಿ ಅಂಕಿತಾ ಸುರೇಶ್, ಸಮಾಜ ಸೇವಕ ಎಡಿಕೇರಿ ಪ್ರಸನ್ನ, ರಾಷ್ಟಿçÃಯ ಹಾಕಿ ಆಟಗಾರ ಕುಂಬಗೌಡನ ಸೋಮಣ್ಣ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ವ್ಯವಸ್ಥಾಪಕ ಕುರುಂಜಿ ಅಕ್ಷಯ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಗೌಡ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.