ಅAತಿಮ ಪಂದ್ಯಾವಳಿ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತ ಮಹಿಳಾ ಹಾಕಿ ತಂಡದ ತರಬೇತುದಾರರಾದ ಹೊನ್ನಂಪಾಡಿ ಅಂಕಿತಾ ಸುರೇಶ್ ಮಾತನಾಡಿ; ಈ ರೀತಿಯಾಗಿ ಕುಟುಂಬವಾರು ಪಂದ್ಯಾವಳಿಯಿAದ ಆಟಗಾರರಿಗೆ ಉತ್ತಮ ಅವಕಾಶದೊಂದಿಗೆ ಅನುಭವ ದೊರಕಿದಂತಾಗುತ್ತದೆ. ಮಕ್ಕಳು ಆದಷ್ಟು ಮೊಬೈಲ್ ಬಿಟ್ಟು ಹೊರಗಡೆ ಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಹೇಳಿದರು. ತಾನು ಇದೇ ಮೈದಾನದಿಂದ ಕ್ರೀಡಾಶಾಲೆಗೆ ಆಯ್ಕೆಯಾಗಿ ಆಟವಾಡಿ ಇದೀಗ ಭಾರತ ತಂಡದ ತರಬೇತುದಾರರಾಗಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡ ಅವರು; ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಹಾಕಿ ಆಡಲು ಪರಿಕರಗಳೊಂದಿಗೆ ತರಬೇತಿ ಮುಖ್ಯ, ಯಾರಿಗಾದರೂ ಆಸಕ್ತಿಯಿದ್ದರೆ ತನ್ನನ್ನು ಸಂಪರ್ಕಿಸಿದರೆ ತರಬೇತಿ ನೀಡುವದಾಗಿ ಹೇಳಿದರಲ್ಲದೆ, ಮುಂದಿನ ವರ್ಷ ತಾನೂ ಕೂಡ ಕುಟುಂಬ ತಂಡದೊAದಿಗೆ ಮೈದಾನಕ್ಕಿಳಿಯುವದಾಗಿ ಹೇಳಿದರು.

ವೇದಿಕೆಯಲ್ಲಿ ರಾಷ್ಟಿçÃಯ ಹಿರಿಯ ಹಾಕಿ ಆಟಗಾರ ಬೊಳ್ತಜ್ಜಿ ಅಶೋಕ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್, ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್ ಇದ್ದರು. (ಮೊದಲ ಪುಟದಿಂದ) ಕಮಲ್ ೨, ಗಗನ್ ೧ ಗೋಲು ಬಾರಿಸಿದರೆ, ಮರದಾಳು ಪರ ಭವನ್ ಏಕೈಕ ಗೋಲು ಹೊಡೆದರು. ಪೊನ್ನಚನ ಹಾಗೂ ಮೇರ್ಕಜೆ ತಂಡಗಳ ನಡುವಿನ ಪಂದ್ಯದಲ್ಲಿ ಮೇರ್ಕಜೆ ೪-೩ ಗೋಲುಗಳಿಂದ ಜಯಗಳಿಸಿತು. ಮೇರ್ಕಜೆ ಪರ ಗಿರೀಶ್ ಹಾಗೂ ಸುಗುಣ ತಲಾ ೨ ಗೋಲು ಬಾರಿಸಿದರೆ, ಪೊನ್ನಚನ ಪರ ರೋಹಿತ್ ೨, ಪ್ರಶಾಂತ್ ೧ ಗೋಲು ಹೊಡೆದರು. ಕುಂಬನ ಹಾಗೂ ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ೪-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕಲ್ಲುಮುಟ್ಲು ಪರ ಕವನ್ ೨, ಪ್ರಜ್ವಲ್ ಹಾಗೂ ಭವನ್ ತಲಾ ಒಂದು ಗೋಲು ಬಾರಿಸಿದರೆ, ಕುಂಬನ ಪರ ಡಿವೈಎಸ್ ಆಟಗಾರ ಆಕಾಶ್ ಏಕೈಕ ಗೋಲು ಹೊಡೆದರು. ಕುಂಬಗೌಡನ ಹಾಗೂ ಆನೇರ ತಂಡಗಳ ನಡುವಿನ ಪಂದ್ಯದಲ್ಲಿ ಕುಂಬಗೌಡನ ೩-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕುಂಬಗೌಡನ ಪರ ಪ್ರೀತಂ ೨, ಸೋಮಣ್ಣ ೧ ಗೋಲು ಬಾರಿಸಿದರೆ, ಆನೇರ ಪರ ಮನೋಜ್ ಹಾಗೂ ಧವನ್ ಗೋಲು ಹೊಡೆದರು.

ಸೆಮಿಫೈನಲ್ : ನಂತರ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮೇರ್ಕಜೆ ತಂಡ ೪-೩ ಗೋಲುಗಳಿಂದ ಬೊಳ್ಳೂರು ತಂಡವನ್ನು ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾಟ ೨-೨ ಗೋಲುಗಳಿಂದ ಸಮನಾಂತರ ಕಂಡಿತು. ಈ ಸಂದರ್ಭದಲ್ಲಿ ಪೆನಾಲ್ಟಿ ಸ್ಟೊçÃಕ್ ನೀಡಲಾಗಿ ಅದರಲ್ಲಿ ಮೇರ್ಕಜೆ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಮೇರ್ಕಜೆ ಪರ ಗಿರೀಶ್ ೪ ಗೋಲು ಬಾರಿಸಿದರು. ಬೊಳ್ಳೂರು ಪರ ಕಮಲ್ ೨, ತೀರ್ಥ ೧ ಗೋಲು ಹೊಡೆದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಕುಂಬಗೌಡನ ತಂಡ ಕಲ್ಲುಮುಟ್ಲು ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಫೈನಲ್ ಪ್ರವೇಶಿಸಿತು.

ಕುಂಬಗೌಡನ ಪರ ಪ್ರೀತಂ ೨, ಭರತ್ ೧ ಗೋಲು ಬಾರಿಸಿದರೆ, ಕಲ್ಲುಮುಟ್ಲು ಪರ ಪ್ರಜ್ವಲ್ ಹಾಗೂ ಕವನ್ ಗೋಲು ಹೊಡೆದರು. ಕಟ್ಟೆಮನೆ ಸೋನಾಜಿತ್ ಹಾಗೂ ಚೋಂಡಿರ ಲಿಖಿತ್ ವೀಕ್ಷಕ ವಿವರಣೆ ನೀಡಿದರು. ವಿಜೇತ ತಂಡಗಳಿಗೆ ತಾ.೧೬ರಂದು( ಇಂದು) ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವದು.