ಮಡಿಕೇರಿ, ಮೇ ೧೫: ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ೨೧ ಕೊಡವ ಭಾಷಿಕ ಜನಾಂಗದವರಿಗೆ ಆಯೋಜಿತ ಕ್ರೀಡೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಜಿಲ್ಲೆಯ ವಿವಿಧೆಡೆಗಳಿಂದ ಕೊಡವ ಭಾಷೆ ಮಾತನಾಡುವ, ಕೊಡವ ಸಂಸ್ಕೃತಿ ಪಾಲಿಸುವ ವಿವಿಧ ೨೧ ಜನಾಂಗದವರು ಒಗ್ಗೂಡಿ ಕ್ರೀಡೋತ್ಸವಕ್ಕೆ ಮೆರುಗು ತಂದರು. ೨೧ ಭಾಷಿಕ ಜನಾಂಗವನ್ನು ಪ್ರತಿನಿಧಿಸುವ ಅಧ್ಯಕ್ಷರುಗಳು, ಪ್ರಮುಖರು ಕ್ರೀಡೋತ್ಸವದ ಟ್ರೋಫಿಗಳನ್ನು ಹಿಡಿದು ಮೈದಾನ ಪ್ರವೇಶ ದ್ವಾರದಿಂದ, ಮೈದಾನದ ಸುತ್ತಲೂ ಮೆರವಣಿಗೆ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು.
೨೧ ಭಾಷಿಕ ಜನಾಂಗದ ನಡುವೆ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟವನ್ನು ನಡೆಸಲಾಗುತ್ತಿದ್ದು, ಮೊದಲ ದಿನದ ಕ್ರೀಡೋತ್ಸವ ವಿಧ್ಯುಕ್ತವಾಗಿ ಆರಂಭಗೊAಡಿತು. ಪಂದ್ಯಾಟಕ್ಕೂ ಮುನ್ನ ೨೧ ಭಾಷಿಕ ಜನಾಂಗದ ಪ್ರಮುಖರು ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡವ ಭಾಷಿಕ ಸಮುದಾಯ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ಕೊಡವ ಭಾಷಿಕ ಜನಾಂಗದವರು ಉಳಿಸಿ, ಬೆಳೆಸುತ್ತಿದ್ದು, ಎಲ್ಲರೂ ಒಗ್ಗೂಡಿ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಪರಸ್ಪರ ಸಮನ್ವಯತೆಯೊಂದಿಗೆ ಬಾಂಧವ್ಯದೊAದಿಗೆ ಮುಂದುವರೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಒಗ್ಗಟ್ಟು ಮೂಡಿಸಲು ಕ್ರೀಡೆ ಸಹಕಾರಿಯಾಗಿದೆ. ಸಮುದಾಯದ ಅಭಿವೃದ್ಧಿ ಸರಕಾರ ಚಿಂತನೆ ನಡೆಸಬೇಕು. ಕ್ರೀಡಾಕೂಟಕ್ಕೂ ಅನುದಾನ ನೀಡುವಂತಾಗಬೇಕೆAದರು.
ಪAದ್ಯಾಟವನ್ನು ಕೊಡವ ಭಾಷಿಕ ಸಮುದಾಯ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹೆಗ್ಗಡೆ ಸಮಾಜ ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಅಮ್ಮ ಕೊಡವ ಸಮಾಜದ ಉಮಾಪ್ರಭು, ಕೋಲೆಯ ಸಮಾಜ ಅಧ್ಯಕ್ಷ ಕೋಲೆಯಂಡ ಗಿರೀಶ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಿರ್ದೇಶಕ ಪೊನ್ನೀರ ಗಗನ್, ಕುಡಿಯ ಸಮಾಜದ ಅಧ್ಯಕ್ಷ ಕುಡಿಯರ ಬೋಪಯ್ಯ, ಕೋಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಕೆಂಬಟ್ಟಿ ಸಮಾಜದ ಅಧ್ಯಕ್ಷ ಬಿಲ್ಲೇರಿಕುಟ್ಟಡ ಪ್ರಭು ಅಯ್ಯಪ್ಪ, ಅಹಿಂದ ಒಕ್ಕೂಟದ ಸಂಚಾಲಕ ತೋರೆರ ಮುದ್ದಯ್ಯ, ಹಿರಿಯ ವೈದ್ಯರಾದ ಡಾ. ಮೋಹನ್ ಅಪ್ಪಾಜಿ, ಕೊಡವ ಮಡಿವಾಳ ಸಮಾಜ ಅಧ್ಯಕ್ಷ ಪಾತಂಡ ಸಂತೋಷ್, ಕೊಡವ ಸವಿತಾ ಸಮಾಜ ಪ್ರಮುಖ ವೇದಪಂಡ ಕಿರಣ್, ಕಣಿಯ ಸಮಾಜ ಪ್ರಮುಖ ಕಣಿಯಂಡ ನಂಜುAಡ, ಕೊಡವ ನಾಯರ್ ಸಮಾಜ ಅಧ್ಯಕ್ಷ ಕೂಡಂಡ ಪೃಥ್ವಿ ಕಾವೇರಪ್ಪ, ಮೇದ ಸಮಾಜ ಅಧ್ಯಕ್ಷ ಮೇದರ ಚಂದ್ರ, ಕೊಡವ ಬೂಣೆಮಟ್ಟಮ ಸಮಾಜ ಪ್ರಮುಖ ಜೋಕೀರ ಜೀವನ್, ಕೊಡವ ಬಾಣಿಯ ಸಮಾಜ ಪ್ರಮುಖ ಇಗ್ಗುಡ ಡಾಲು ಗಣಪತಿ, ಐರಿ ಸಮಾಜ ನಿರ್ದೇಶಕ ಅಮ್ಮಣಂಡ ಯು ಪೂಣಚ್ಚ, ಪಣಿಕ ಸಮಾಜ ಅಧ್ಯಕ್ಷ ಪಣಿಕಡ ದಿನೇಶ್, ಅರಮನೆಪಾಲೆ ಸಮಾಜ ಅಧ್ಯಕ್ಷ ಮಂದಣ್ಣ, ಕೊಡವ ಕಾಪಾಳ ಸಮಾಜ ಪ್ರಮುಖ ಮಿಲನ್, ಕೊಡಗು ಗೊಲ್ಲ ಸಮಾಜ ಅಧ್ಯಕ್ಷ ಅರೆಯಂಡ ರಘು, ಬಣ್ಣ ಸಮಾಜ ಪ್ರಮುಖ ತೆಕ್ಕಡಮ್ಮಂಡ ನಾಣಯ್ಯ, ಮಲಿಯ ಸಮಾಜ ಅಧ್ಯಕ್ಷ ಮಲೆಯಂಡ ಅಶೋಕ್ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು, ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಚಂಗಚAಡ ರಶ್ಮಿ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಸ್ವಾಗತಿಸಿ, ಕ್ರೀಡಾಕೂಟ ಸಂಚಾಲಕ ಪಡಿಞರಂಡ ಪ್ರಭು ಕುಮಾರ್ ನಿರೂಪಿಸಿ, ವಂದಿಸಿದರು.
ಪ್ರದರ್ಶನ ಪಂದ್ಯ
ಪAದ್ಯಾಟದ ಅಂಗವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ನಡುವೆ ಕ್ರಿಕೆಟ್ ಪ್ರದರ್ಶನ ನಡೆಯಿತು.
ಟಾಸ್ ಗೆದ್ದು ಕಾರ್ಯನಿರತ ಪತ್ರಕರ್ತರ ಸಂಘ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕೊಡವ ಭಾಷಿಕ ಸಮುದಾಯಗಳ ಕೂಟ ೬ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೮೫ ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಕಾರ್ಯನಿರತ ಪತ್ರಕರ್ತರ ಸಂಘ ೬೨ ರನ್ ಗಳಿಸಿ ಸೋಲನುಭವಿಸಿತು.
ಫಲಿತಾಂಶ
ಕೋಲೆಯ ಸಮಾಜ ಹಾಗೂ ಹೆಗ್ಗಡೆ ಸಮಾಜದ ನಡುವಿನ ಪಂದ್ಯದಲ್ಲಿ ಹೆಗ್ಗಡೆ ಸಮಾಜ ಜಯಗಳಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಕೋಲೆಯ ಸಮಾಜ ೪ ವಿಕೆಟ್ ನಷ್ಟಕ್ಕೆ ೩೭ ರನ್ ಪೇರಿಸಿತು. ಹೆಗ್ಗಡೆ ಸಮಾಜ ಯಾವುದೇ ವಿಕೆಟ್ ನಷ್ಟವಿಲ್ಲದೆ ೧.೩ ಓವರ್‌ಗಳಲ್ಲಿ ೩೯ ರನ್ ದಾಖಲಿಸಿ ಗೆಲುವು ಪಡೆಯಿತು.
ಮೇದ ಸಮಾಜದ ವಿರುದ್ಧ ಅರಮನೆಪಾಲೆ ಸಮಾಜ ೨೦ ರನ್‌ಗಳ ಜಯಗಳಿಸಿತು. ಅರೆಮನೆಪಾಲೆ ಸಮಾಜ ೬ ವಿಕೆಟ್ ನಷ್ಟಕ್ಕೆ ೮೫ ರನ್ ಗಳಿಸಿತು. ಮೇದ ಸಮಾಜ ೪ ವಿಕೆಟ್ ಕಳೆದುಕೊಂಡು ೬೫ ರನ್ ಗಳಿಸಿ ಸೋಲನುಭವಿಸಿತು.
ಕೆಂಬಟ್ಟಿ ಸಮಾಜ ಹಾಗೂ ಸವಿತಾ ಸಮಾಜ ನಡುವಿನ ಪಂದ್ಯದಲ್ಲಿ ಕೆಂಬಟ್ಟಿ ಸಮಾಜ ಭರ್ಜರಿ ಜಯಗಳಿಸಿತು. ೫ ವಿಕೆಟ್ ನಷ್ಟಕ್ಕೆ ಅಮೋಘ ೯೦ ರನ್ ಅನ್ನು ಕೆಂಬಟ್ಟಿ ಸಮಾಜ ಕಲೆಹಾಕಿತು. ಸವಿತಾ ಸಮಾಜ ೬ ವಿಕೆಟ್ ನಷ್ಟಕ್ಕೆ ೫೭ ರನ್ ಗಳಿಸಿ ಪರಾಜಿತಗೊಂಡಿತು.
ಕೊಡವ ನಾಯರ್ ಸಮಾಜವನ್ನು ಪಣಿಕ ಸಮಾಜ ತಂಡ ಮಣಿಸಿತು. ನಾಯರ್ ಸಮಾಜ ೨ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿತು. ಪಣಿಕ ಸಮಾಜ ೨.೩ ಓವರ್‌ಗಳಲ್ಲಿ ೫೫ ರನ್ ದಾಖಲಿಸಿ ಗೆಲುವಿನ ನಗೆಬೀರಿತು.
ಕೋಯವ ಸಮಾಜದ ವಿರುದ್ಧ ಐರಿ ಸಮಾಜ ತಂಡ ಭರ್ಜರಿ ೭೧ ರನ್ ಅಂತರದ ಗೆಲುವು ಪಡೆಯಿತು. ಐರಿ ಸಮಾಜ ತಂಡ ೫ ವಿಕೆಟ್ ನಷ್ಟಕ್ಕೆ ೯೧ ರನ್ ಗಳಿಸಿತು. ಕೊಯವ ಸಮಾಜ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ ೨೦ ರನ್ ಗಳಿಸಲಷ್ಟೆ ಶಕ್ತವಾಯಿತು. ಕ್ರೀಡಾಕೂಟದ ತಾಂತ್ರಿಕ ಸಮಿತಿಯಲ್ಲಿ ಕೊಂಗೇಪAಡ ಮಂಜುನಾಥ್, ಪಡಿಞರಂಡ ಪ್ರಭುಕುಮಾರ್, ಕೊಂಗೆಪAಡ ಅರುಣ್ ಕಾರ್ಯನಿರ್ವಹಿಸಿದರು.
ಹಗ್ಗಜಗ್ಗಾಟ
ಪುರುಷರ ವಿಭಾಗದಲ್ಲಿ ಕೊಡವ ಭಾಷಿಕ ೨೧ ಜನಾಂಗದ ಸಮಾಜದಲ್ಲಿ ೧೬ ತಂಡಗಳು ಜಯಗಳಿಸುವುದರ ಮೂಲಕ ಮುಂದಿನ ಹಂತ ಪ್ರವೇಶಿಸಿತು. ಮಹಿಳೆಯರ ವಿಭಾಗದಲ್ಲಿ ಕೊಡವ ಭಾಷಿಕ ೨೧ ಜನಾಂಗದ ಸಮಾಜದಲ್ಲಿ ೧೫ ತಂಡಗಳು ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿತು.
ನಾಳೆ ಮೆರಥಾನ್
ಕ್ರೀಡಾಕೂಟದ ಆಕರ್ಷಣೆಯಾಗಿ ೨೧ ಕೊಡವ ಭಾಷಿಕ ಜನಾಂಗದವರಿಗೆ ತಾ. ೧೭ ರಂದು (ನಾಳೆ) ಬೆಳಿಗ್ಗೆ ೮ಕ್ಕೆ ಮೆರಥಾನ್ ಏರ್ಪಡಿಸಲಾಗಿದ್ದು, ವೀರಾಜಪೇಟೆ ರಸ್ತೆಯ ಬಾಡಗ ಗ್ರಾಮದ ನೆಲ್ಲಿಮಾನಿ ಶ್ರೀ ಈಶ್ವರ ದೇವಸ್ಥಾನದ ಗೇಟಿನ ಮುಂಭಾಗದಿAದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದ ತನಕ ನಡೆಯಲಿದೆ.